ಗ್ರಾಹಕರ ನಂಬಿಕೆ ಹೆಚ್ಚಿಸಲು ‘ಟ್ರೇಡ್‍ಮಾರ್ಕ’ ಪ್ರಮುಖ ಪಾತ್ರ ವಹಿಸುತ್ತದೆ : ಪ್ರೊ. ಗುರುರಾಜ

ಬೀದರ:ಫೆ.11:ಕಾಲ ಕಳೆದಂತೆ ಮಾರುಕಟ್ಟೆ ಹೆಚ್ಚು ಸ್ಫರ್ಧಾತ್ಮಕವಾಗಿ ಬೆಳದ ‘ಟ್ರೇಡ್‍ಮಾರ್ಕ’ ಗ್ರಾಹಕರ ಮೇಲೆ ಪ್ರಭಾವ ಬಿರಿದ್ದು, ಗ್ರಾಹಕರು ಉತ್ಪನ್ನಗಳ ಖರೀದಿ, ವಸ್ತುಗಳ ಮೇಲಿನ ನಂಬಿಕೆ ಹೆಚ್ಚಾಗಲು ‘ಟ್ರೇಡ್‍ಮಾರ್ಕ’ ಸಹಾಯವಾಗಲಿದೆ ಎಂದು ಗುರುನಾನಕ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾದ ಪ್ರೋ. ಗುರುರಾಜ ನುಡಿದರು. ನಗರದ ಸ್ಥಳೀಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಒಂದಾದ ಕರ್ನಾಟಕ ಪದವಿ ಕಾಲೇಜಿನ IIಅ ಘಟಕ ಮತ್ತು ವಾಣಿಜ್ಯ ವಿಭಾಗದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ‘ಟ್ರೇಡ್‍ಮಾರ್ಕ ಜಿಯೋಗ್ರಾಫಿಕಲ್’ ಸೂಚಕಗಳ ಕುರಿತು, ಒಂದು ದಿನದ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಾ, ‘ಟ್ರೇಡ್‍ಮಾರ್ಕ’ ಎಂಬುದು ಒಂದು ವಿಶಿಷ್ಟವಾದ ಸಂಕೇತವಾಗಿದ್ದು ಉತ್ಪನ್ನ ಮತ್ತು ಸೇವೆಗಳನ್ನು ವ್ಯಾಪಾರದಲ್ಲಿ ಬಳಸಲಾಗುತ್ತದೆ. ಇದು ಗುಣಮಟ್ಟದ ಬ್ಯಾಡ್ಜ್ ಆಗಿ ಕಾರ್ಯನಿರ್ವಹಿಸುತ್ತದೆ.
‘ಟ್ರೇಡ್‍ಮಾರ್ಕ’ ನೋಂದಾಯಿಸುವುದರಿಂದ ಸರಕು ಸೇವೆಗಳಿಗೆ ಸಂಬಂಧಿಸಿದಂತೆ ಮಾಲಿಕರಿಗೆ ವಿಶೇಷ ಹಕ್ಕುಗಳು ನೀಡುತ್ತದೆ. ಯಾವುದೇ ಒಂದು ವಸ್ತುವಿನ ಮಾಲಿಕತ್ವದ ‘ಟ್ರೇಡ್‍ಮಾರ್ಕ’ ವಸ್ತುವನ್ನು ನಕಲು ಮಾಡಿ ಮಾರಾಟ ಮಾಡಿದ್ದಲ್ಲಿ ಅನಧಿಕೃತ ಬಳಕೆ ವಿರುದ್ದ ಕಾನೂನು ಕ್ರಮ ಸಾಧ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಉಪ ಪ್ರಾಚಾರ್ಯರಾದ ಪ್ರೋ. ಅನಿಲಕುಮಾರ ಚಿಕ್ಕಮಣೂರ, ಅವರು ಮಾತನಾಡಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಮುಗಿದ ನಂತರ ಕಂಪನಿಗಳನ್ನು ಪ್ರಾರಂಭಿಸಲು ಇಚ್ಛಿಸಿದರೆ, ‘ಟ್ರೇಡ್‍ಮಾರ್ಕ’, ನವೀಕರಣ, ಟೈಮ್‍ಲೈನ್ ಬ್ರ್ಯಾಂಡ್ ಗುರುತಿಸಲು, ಮಾರುಕಟ್ಟೆಯಲ್ಲಿ ಸ್ಥಾನಮಾನ, ಗ್ರಾಹಕರ ನಂಬಿಕೆ ಮತ್ತು ನಿಷ್ಠೆ ತರುವಲ್ಲಿ ಇಂತಹ ಕಾರ್ಯಗಾರಗಳಿಂದ ಭವಿಷ್ಯದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ ಎಂದು ನುಡಿದರು.
ಎಲ್ಲರನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಶಶಿಧರ ಪಾಟೀಲ ನುಡಿದರು. ಕಾರ್ಯಕ್ರಮದ ನಿರೂಪಣೆ ಉಪನ್ಯಾಸಕಿ ಕುಮಾರಿ. ಯಾನಿ ಕ್ರಿಸ್ಟೀನಾ ನಿರೂಪಿಸಿದರು. ಡಾ. ಸೋಮೇಶ್ವರಿ ಮುದ್ದಾ ಅವರು ವಂದಿಸಿದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಡಾ. ಬಿರಾದಾರ ರಾಜೇಂದ್ರ, ಡಾ. ವಿನೋದಕುಮಾರ ಕಾಳೇಕರ, ಶ್ರೀ. ಮಧುಸೂದನ ಕುಲಕರ್ಣಿ, ಕು. ಸಾಧನಾ ಚಿಮಕೊಡೆ ಮತ್ತು ಶ್ರೀಕಾಂತ ಪವಾರ, ಕಾಲೇಜಿನ ಎಲ್ಲಾ ಪ್ರಾಧ್ಯಾಪಕ ಬಾಂಧವರು ಉಪಸ್ಥಿತರಿದ್ದರು ಹಾಗೂ ನೂರಕ್ಕಿಂತÀ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದರು.