ಕಲಬುರಗಿ,ಜೂ.17:ಕರ್ನಾಟಕ ವಿದ್ಯುತ್‍ಚ್ಛಕ್ತಿ ನಿಯಂತ್ರಣ ಆಯೋಗದ ನಿರ್ದೇಶನದ ಮೇರೆಗೆ (ಪ್ರತಿ ತಿಂಗಳ ಮೂರನೇ ಶನಿವಾರದಂದು) ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ನಗರ ಉಪ ವಿಭಾಗ-1 ರಲ್ಲಿ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ವೀರಭದ್ರಪ್ಪಾ ಸಾಲಿಮನಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಕಲಬುರಗಿ ನಗರ ವಿಭಾಗ-1ರ ಜೆಸ್ಕಾಂ ಕಚೇರಿಯಲ್ಲಿ ಗ್ರಾಹಕರ ಸಂವಾದ ಸಭೆ ಜರುಗಿತು.
ಗ್ರಾಹಕರಿಂದ ಬಂದ ದೂರುಗಳಿಗೆ ಸ್ವಯಂ ಸ್ಪಂದಿಸಿ ಅವುಗಳನ್ನು ಸ್ಥಳದಲ್ಲಿ ಬಗೆಹರಿಸಿದಲ್ಲದೇ ಜೆಸ್ಕಾಂ ಸಿಬ್ಬಂದಿಗಳು ಗ್ರಾಹಕರೊಂದಿಗೆ ಗ್ರಾಹಕ ಸ್ನೇಹಿಯಾಗಿ ವರ್ತಿಸಬೇಕೆಂದರು.
ಸಭೆಯಲ್ಲಿ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ವೀರಭದ್ರಪ್ಪಾ ಸಾಲಿಮನಿ, ನಗರ ಉಪ ವಿಭಾಗ-1ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ(ವಿ) ಅಭಿಷೇಕ ಗೋಳಾ, ಸಹಾಯಕ ಅಭಿಯಂತರ (ತಾ) ಅಮೃತಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದರು.