ಗ್ರಾಹಕರು ವ್ಯವಹರಿಸುವಾಗ ಜಾಗೃತಿ ವಹಿಸುವುದು ಅಗತ್ಯ

ಕಲಬುರಗಿ: ಮಾ.15:ಜನರಲ್ಲಿ ಕೊಳ್ಳುಬಾಕ ಸಂಸ್ಕøತಿ ಹೆಚ್ಚಾಗಿರುವುದುರಿಂದ ಇಂದು ಆನಲೈನ್ ಮತ್ತು ನೇರ ಮಾರಾಟ ಕಂಪನಿಗಳಿಂದ ಗುಣಮಟ್ಟ, ಬೆಲೆ, ಪ್ರಮಾಣ, ಖಾತ್ರಿ, ಪರಿಶುದ್ಧತೆ ಸೇರಿದಂತೆ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಗ್ರಾಹಕರಿಗೆ ಅನ್ಯಾಯವಾಗುತ್ತಿರುವುದು ಕಂಡುಬರುತ್ತಿದೆ. ಆದ್ದರಿಂದ ಗ್ರಾಹಕರು ವ್ಯವಹರಿಸುವಾಗ ಬಹಳಷ್ಟು ಜಾಗೃತಿ ವಹಿಸುವುದು ಅಗತ್ಯವಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.

     ನಗರದ ರಾಮ ಮಂದಿರ ಸಮೀಪವಿರುವ 'ಕೊಹಿನೂರ ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜ್'ನಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ 'ವಿಶ್ವ ಗ್ರಾಹಕರ ಹಕ್ಕುಗಳ ಸಂರಕ್ಷಣಾ ದಿನಾಚರಣೆ'ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
    ಗ್ರಾಹಕರು ಮಾರುಕಟ್ಟೆಯ ಆಧಾರ ಸ್ಥಂಭವಾಗಿದ್ದಾರೆ. ಸರಕು ಮತ್ತು ಸೇವೆಯ ಬಗ್ಗೆ ಸುರಕ್ಷತೆ, ಮಾಹಿತಿ ಪಡೆಯುವದು, ಆಯ್ಕೆ ಮಾಡಿಕೊಳ್ಳುವುದು, ಆಲಿಸುವದು, ಕುಂದುಕೊರತೆಗಳನ್ನು ನಿವಾರಿಸಿಕೊಳ್ಳುವದು, ಗ್ರಾಹಕರ ಶಿಕ್ಷಣ ಪಡೆಯುವುದು ಇವುಗಳು ಗ್ರಾಹಕರ ಹಕ್ಕುಗಳಾಗಿವೆ. ಹಕ್ಕುಗಳ ಬಗ್ಗೆ ಜಾಗೃತಿ, ಗುಣಮಟ್ಟದ ಅರಿವು, ದೂರು ನೀಡಲು ಸಿದ್ಧರಿರಬೇಕು, ತಪ್ಪು ಜಾಹೀರಾತುಗಳಿಂದ ದಿಕ್ಕು ತಪ್ಪಿಸಬಾರದು, ನಗದು ರಶೀದಿಗಾಗಿ ಬೇಡಿಕೆ, ಸರಕುಗಳ ಆಯ್ಕೆ, ಗ್ರಾಹಕರ ಸಂಘಟನೆ, ಪರಿಸರ ರಕ್ಷಣೆ, ಅವಸರದಲ್ಲಿ ವಸ್ತುಗಳನ್ನು ಖರೀದಿಸಬಾರದು ಎಂದರು.
 ಕಾಲೇಜಿನ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಬಿ.ಕಂಟೆಗೋಳ್ ಮಾತನಾಡಿ, ಗ್ರಾಹಕರು ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳನ್ನು ತಿಳಿದುಕೊಳ್ಳಬೇಕು. ವ್ಯವಹರಿಸುವಾಗ ಜಾಗೃತಿಯನ್ನು ವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಯೋಗಪ್ಪ ಬಿರಾದಾರ, ಬಸವರಾಜ ಪಾಟೀಲ, ಶಂಭುಲಿಂಗ ವಗ್ದರ್ಗಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.