ಗ್ರಾಹಕರು ವಸ್ತು ಖರೀದಿ ಮಾಡುವಾಗ ರಶೀದಿ ಪಡೆದುಕೊಳ್ಳಬೇಕು:ನ್ಯಾ. ಮೋಹನ ಬಾಡಗಂಡಿ

ಕಲಬುರಗಿ:ಡಿ.27: ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಹಕರ ದಿನಾಚರಣೆ ಆಚರಿಸುತ್ತಿದ್ದು, . ಗ್ರಾಹಕರು ಖರೀದಿ ಮಾಡುವಾಗ ಐ.ಎಸ್.ಐ. ಮಾರ್ಕ ಇರಬೇಕು ನೀವು ಖರೀದಿ ಮಾಡಿದ ವಸ್ತುಗಳ ರಶೀದಿ ಪಡೆದು ಇಟ್ಟುಕೊಂಡರೆ ಸರ್ಕಾರಕ್ಕೆ ಟ್ಯಾಕ್ಸ್ ಹೋಗುತ್ತೆ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮೋಹನ ಬಾಡಗಂಡಿ ಅವರು ಹೇಳಿದರು.
ಬುಧುವಾರದಂದು ಹೊಸ ಐವಾನ್ ಶಾಹಿ-ಅತಿಥಿ ಗೃಹದ ಸಭಾಂಗಣದಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಲಬುರಗಿ,ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ ಮತ್ತು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ, ಕಲಬುರಗಿ ಇವರ ಸಂಯುಕ್ತÁಶ್ರಯದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು “ಇ-ಕಾಮರ್ಸ ಮತ್ತು ಡಿಜಿಟಲ್ ವ್ಯಾಪಾರದ ಯುಗದಲ್ಲಿ ಗ್ರಾಹಕರ ರಕ್ಷಣೆ” ಎಂಬ ಘೋಷ ವಾಕ್ಯದೊಂದಿಗೆ ಉದ್ಪಾಟಿಸಿ ಮಾತನಾಡಿದರು.
ಪೂರ್ವಜರು ಆಗಿನ ಕಾಲದಲ್ಲಿ ಜೋಳ 1 ಕೆಜಿ. ಕೊಟ್ಟರೆ ತೊಗರಿ 1 ಕೆಜಿ ಕೊಡುತ್ತಿದ್ದರು, ಹೀಗೆ ಅವರು ತಮ್ಮ ತಮ್ಮ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈಗ ಮನುಷ್ಯನು ವ್ಯವಹಾರಗಳನ್ನು ಮಾಡುವಾಗ ಅನೇಕ ಬದಲಾವಣೆಗಳಾದವು ಅದೇ ರೀತಿಯಾಗಿ ಕಾನೂನಿನಲ್ಲಿ ಬದಲಾವಣೆಗಳನ್ನುಂಟಾದವು ಎಂದರು.
ಇತ್ತೀಚಿನ ದಿನಗಳಲ್ಲಿ ಮೋಬೈಲ್‍ಗಳಲ್ಲಿ ನಾವು ಪದ್ದಾರ್ಥಗಳನ್ನು ಖರೀದಿ ಮಾಡುತ್ತೇವೆ ಹೊಟೆಲ್‍ಗಳಲ್ಲಿ ಆರ್ಡರ್ ಮಾಡುವಾಗ ಅವರು ಮನೆಗೆ ತಿಂಡಿ,ಊಟ ತಂದುಕೊಡುತ್ತಾರೆ ಹಾಗೂ ಇ-ಕಾಮರ್ಸ್ ಸೈಬರ ಕ್ರೈಮ್ ವಂಚನೆ ಕುರಿತು ಗ್ರಾಹಕರಿಗೆ ತಿಳುವಳಿಕೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀನಿವಾಸ್ ನವಲೆ ಮಾತನಾಡಿ, ವ್ಯಾಪರಸ್ಥರು ಹಣಕ್ಕಾಗಿ ಮೋಸ ಮಾಡುತ್ತಿರುವ ಕಾರಣ ಅವರ ಮೋಸದ ಜಾಹೀರಾತುಗಳಿಗೆ ನಂಬಬಾರದೆಂದು ಗ್ರಾಹಕರಿಗೆ ತಿಳಿಸಿದರು ವಸ್ತುಗಳು ಖರೀದಿ ಮಾಡುವಾಗ ಗ್ರಾಹಕರು ಗುಣಮಟ್ಟದ ಉತ್ಪಾದನೆಗಳು ಖರೀದಿಸಬೇಕೆಂದು ತಿಳಿಸಿದ್ದರು
ವ್ಯಾಪಾರಿಗಳು ಸರಿಯಾದ ವಸ್ತುಗಳನ್ನು ನೀಡಿದೆ ಹೋದಲ್ಲಿ ಪ್ರತಿಭಟನೆ ಮಾಡಬೇಕು ಇದರಿಂದ ಇನ್ನೂಬ್ಬರು ಎಚ್ಚತ್ತುಗೊಳ್ಳುತ್ತಾರೆ ಬೇರೆ ಜನರಿಗೆ ಸಹಾಯವಾಗುತ್ತದೆ ಇದರಿಂದ ಅನ್ಯಾಯ ತಡೆಗಟ್ಟಬಹುದು ಎಂದರು.
ಇಂದಿನ ಯುಗದಲ್ಲಿ ” ಇ-ಕಾಮರ್ಸ ಮತ್ತು ಡಿಜಿಟಲ್ ವ್ಯಾಪಾರದ ಯುಗದಲ್ಲಿ ಗ್ರಾಹಕರಿಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಲು ಅನುಕೂಲವಾಗಿದೆ ಎಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಾಲತಿ ಗುರಣ್ಣ(ರೇಷ್ಮಿ) ಮಾತನಾಡಿ, ಡಿಜಿಟಲ್ ಯುಗದಲ್ಲಿ ಗುಣಮಟ್ಟ ಹಾಗೂ ಪ್ರಮಾಣದ ಬಗ್ಗೆ ಗಮನಿಸಬೇಕು ಪ್ರತಿಯೊಂದು ವಸ್ತು ಖರೀದಿಸಿದಾಗ ಕಡ್ಡಾಯವಾಗಿ ರಶೀದಿ ಪಡೆಯಬೇಕೆಂದು ಹಾಗೂ ಒಖP ದರಕ್ಕಿಂತ ಹೆಚ್ಚಿನ ದರ ಪಾವತಿಸಬಾರದೆಂದರು.
ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪ ನಿರ್ದೇಶಕರಾದ ಶಿವಶರಣಪ್ಪ ಮುಳೆಗಾಂವ ಅವರು ವಿದ್ಯಾರ್ಥಿಗಳು ಸೌಂದರ್ಯವರ್ದಕ ವಸ್ತುಗಳ ಬಗ್ಗೆ ಜಾಗೂರುಕತೆ ವಹಿಸಿ ಜಾಹೀರಾತುಗಳಿಗೆ ಮೋಸ ಹೋಗಬಾರದೆಂದು ತಿಳಿಸಿದರು.
ಶ್ರೀ ಬಸವೇಶ್ವರ ರೂರಲ್ ಡೆವಲಪ್‍ಮೆಂಟ್ ಟ್ರಸ್ಟ್‍ನ ಅಧ್ಯಕ್ಷರು ಹಾಗೂ ಜಿಲ್ಲಾ ಗ್ರಾಹಕರ ರಕ್ಷಣಾ ಪರಿಷತ್ತಿನ ಸದಸ್ಯರಾದ ಬಾಪುಗೌಡ ಪಾಟೀಲ್ ಮಹಾತ್ಮಾ ಗಾಂಧೀಜಿ ಹಿತರಕ್ಷಣಾ ವೇದಿಕೆ(ರಿ) ಪ್ರದಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಗ್ರಾಹಕರ ರಕ್ಷಣಾ ಪರಿಷತ್ತಿನ ಸದಸ್ಯರು ಹಾಗೂ ನ್ಯಾಯವಾದಿಗಳಾದ ವೈಜನಾಥ ಝಳಕಿ ಇ-ಕಾಮರ್ಸ್ ಮತ್ತು ಡಿಜಿಟಲ್ ವ್ಯಾಪಾರದ ಯುಗದಲ್ಲಿ ಗ್ರಾಹಕರ ರಕ್ಷಣೆ ಬಗ್ಗೆ ಗ್ರಾಹಕರಿಗೆ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಆಹಾರ ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಶಾಂತಗೌಡ್ ಜಿ. ಗುಣಕಿ ಸ್ವಾಗತಿಸಿದರು.
ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಅಂಕಿತಾಧಿಕಾರಿ ಡಾ. ಅರ್ಚನಾ ಕಮಲಾಪೂರಕರ್, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕರಾದ ಶಿವಪುತ್ತರ ಅಲ್ಲಾಪುರ,ಸೇರಿದಂತೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಅಧಿಕಾರಿಗಳು ಸಾರ್ವಜನಿಕರು ಗ್ರಾಹಕರು ಉಪಸ್ಥಿತರಿದ್ದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹರಾಗಳ ಇಲಾಖೆ ಕಲಬುರಗಿ ಕಛೇರಿ ವ್ಯವಸ್ಥಾಪಕ
ಅಲ್ಲಬಕ್ಷ್ ವಂದಿಸಿದರು.