ಗ್ರಾಹಕರಿಗೆ ಗಿರವಿ ಅಂಗಡಿ ಮಾಲೀಕನಿಂದ ಕೋಟ್ಯಾಂತರೂಗಳ ವಂಚನೆ: ಆರೋಪಿ ಪರಾರಿ

ಮೈಸೂರು,ನ.9:- ಚಿನ್ನ-ಬೆಳ್ಳಿ ಪದಾರ್ಥಗಳ ಗಿರವಿ ಅಂಗಡಿ ಮಾಲೀಕನೋರ್ವ ಗ್ರಾಹಕರಿಗೆ ಕೋಟ್ಯಾಂತರ ರೂಪಾಯಿಗಳನ್ನು ವಂಚಿಸಿ ಪರಾರಿಯಾಗಿರುವ ಘಟನೆ ಮೈಸೂರು ವಿವೇಕಾನಂದ ನಗರದಲ್ಲಿ ನಡೆದಿದೆ.
ಮೈಸೂರು ವಿವೇಕಾನಂದ ವೃತ್ತದಲ್ಲಿರುವ ಮಾರುತಿ ಪೌನ್ & ಜ್ಯುವೆಲ್ಲರಿ ಶಾಪ್ ಮಾಲೀಕ ನೇಮಿರಾಮ (50) ಎಂಬಾತನೇ ಜನರಿಗೆ ಕೋಟ್ಯಾಂತರ ರೂ.ವಂಚಿಸಿ ಪರಾರಿಯಾದವನಾಗಿದ್ದಾನೆ. ಈತ ಕಳೆದ ಏಳೆಂಟು ವರ್ಷದಿಂದ ವಿವೇಕಾನಂದ ನಗರದಲ್ಲಿ ಮಾರುತಿ ಪೌನ್ & ಜ್ಯುವೆಲ್ಲರಿ ಶಾಪ್ ನಡೆಸುತ್ತಿದ್ದು ಕಷ್ಟವೆಂದು ಬಂದ ಗ್ರಾಹಕರಿಂದ ಚಿನ್ನಬೆಳ್ಳಿ ಪದಾರ್ಥಗಳನ್ನು ಅಡವಿರಿಸಿಕೊಂಡು ಹಣ ನೀಡುತ್ತಿದ್ದ ಎನ್ನಲಾಗಿದೆ. ಕೊರೋನಾ ಸಂದರ್ಭದಲ್ಲಿ ಹೇರಿದ್ದ ಲಾಕ್ ಡೌನ್ ಬಳಿಕ ಸಾಕಷ್ಟು ಆರ್ಥಿಕ ಸಂಕಷ್ಟವನ್ನು ಅನುಭವಿಸಿದ್ದ. ತನ್ನ ಶ್ರೀರಾಂಪುರದಲ್ಲಿರುವ ನಿವಾಸವನ್ನು ಮೋಸದಿಂದ ಮೂವರಿಗೆ ಅಗ್ರಿಮೆಂಟ್ ಮಾಡಿಸಿ ಹಣ ಪಡೆದಿದ್ದಲ್ಲದೇ, ಮತ್ತೋರ್ವ ವ್ಯಕ್ತಿಗೂ ನೋಂದಣಿ ಮಾಡಿಸಿಕೊಟ್ಟು ಹಣ ಪಡೆದಿದ್ದ ಎನ್ನಲಾಗಿದೆ.
ಈತ ಸೋಮವಾರ ರಾತ್ರೋ ರಾತ್ರಿ ತನ್ನ ಬಳಿ ಗಿರವಿ ಇಟ್ಟಿದ್ದ ಚಿನ್ನ-ಬೆಳ್ಳಿಯ ಪದಾರ್ಥಗಳು, ಹಣದ ಜೊತೆ ಕುಟುಂಬ ಸಮೇತ ಊರನ್ನೇ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಆತನ ಬಳಿ ಗಿರವಿ ಇಟ್ಟ ಗ್ರಾಹಕರು ಬಂದು ತಮ್ಮ ಚಿನ್ನ ಮತ್ತು ಬೆಳ್ಳಿಯ ಪದಾರ್ಥಗಳನ್ನು ಕಳೆದುಕೊಂಡಿದ್ದಕ್ಕೆ ಗೋಳಾಡುತ್ತಿದ್ದು, ಇತ್ತ ಮನೆ ಖರೀದಿಗೆ ಮುಂದಾದವರು ಹಣವೂ ಇಲ್ಲದೆ, ಮನೆಯೂ ಇಲ್ಲದೆ ಕಣ್ಣೀರಿಡುತ್ತಿದ್ದಾರೆ.
ಕುವೆಂಪುನಗರ ಪೆÇಲೀಸ್ ಠಾಣೆಯಲ್ಲಿರುವ ಪೆÇಲೀಸ್ ಸಿಬ್ಬಂದಿಗಳ ಜೊತೆ ತೀರ ಸಲುಗೆ ಹಾಗೂ ಸ್ನೇಹಬೆಳೆಸಿಕೊಂಡಿದ್ದ ವಂಚಕ ಪೆÇಲೀಸ್ ಸಿಬ್ಬಂದಿಗಳ ಪರಿಚಯವಿದ್ದು, ತಪ್ಪಿಸಿಕೊಳ್ಳಬಹುದೆಂಬ ಕಾರಣಕ್ಕೆ ವಂಚನೆ ನಡೆಸಿ ಪರಾರಿಯಾಗುತ್ತಿದ್ದಾನೆಂಬ ಆರೋಪ ಕೇಳಿ ಬಂದಿದ್ದು, ಅದಕ್ಕೆ ಪುಷ್ಟಿ ನೀಡುವ ಭಾವಚಿತ್ರವೊಂದು ವೈರಲ್ ಆಗುತ್ತಿದೆ.
ಕುವೆಂಪು ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಪೆÇಲೀಸರು ವಂಚಕನ ಪತ್ತೆಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ.