ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಸೂಚನೆ

ಗೌರಿಬಿದನೂರು.ನ೬:ಗ್ರಾಹಕರೊಂದಿಗೆ ಬ್ಯಾಂಕ್ ಸೇವೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ಎಚ್ಚರ ವಹಿಸುವ ಮೂಲಕ ಅವರಲ್ಲಿ ವ್ಯವಹಾರಿಕ ಜಾಗೃತಿ ಮೂಡಿಸುವ ಮೂಲಕ ರಾಷ್ಟ್ರದ ಪ್ರಗತಿಗೆ ಸಹಕಾರಿಯಾಗೋಣ ಎಂದು ಎಸ್ ಬಿ ಐ ಬ್ಯಾಂಕಿನ ವ್ಯವಸ್ಥಾಪಕರಾದ ಬಿ.ಸಿ.ವಿಜಯ್ ತಿಳಿಸಿದರು.
ನಗರದ ಎಸ್ ಬಿ ಐ ಶಾಖೆಯಲ್ಲಿ ಆಯೋಜಿಸಿದ್ದ ಗ್ರಾಹಕರ ಜಾಗೃತಿ ಅಭಿಯಾನ ದಲ್ಲಿ ಭಾಗವಹಿಸಿ ಅವರು ಮಾತನಾಡಿ,ನಗರ ಹಾಗೂ ಗ್ರಾಮೀಣ ಭಾಗದಲ್ಲಿನ ವಿವಿಧ ಶಾಖೆಗಳಲ್ಲಿ ನಾಗರೀಕರು ವ್ಯವಹರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸಾಕಷ್ಟು ಉತ್ತಮ ವ್ಯವಸ್ಥೆಯನ್ನು ಕಲ್ಪಿಸಿದೆ. ಗ್ರಾಹಕರು ಯಾವುದೇ ರೀತಿಯ ಮೋಸ, ವಂಚನೆಗೆ ಒಳಗಾಗದೆ ನಿರ್ಭೀತಿಯಿಂದ ಬ್ಯಾಂಕಿನೊಂದಿಗೆ ವ್ಯವಹರಿಸಿ ಉತ್ತಮ ಭಾಂದವ್ಯವನ್ನು ಹೊಂದಬಹುದಾಗಿದೆ. ಈ ನಿಟ್ಟಿನಲ್ಲಿ ಬ್ಯಾಂಕ್ ಸಿಬ್ಬಂಧಿ ನಿಮಗೆ ಸಹಕಾರ ನೀಡಲು ಸಹಾ ಸಿದ್ಧರಿರುತ್ತಾರೆ ಎಂದು ಹೇಳಿದರು.
ಉಪವ್ಯವಸ್ಥಾಪಕರಾದ ಜಿ.ಹರೀಶ್ ಮಾತನಾಡಿ, ಬ್ಯಾಂಕಿನಲ್ಲಿ ಸಿಗುವ ಸಂಪೂರ್ಣ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ಆರ್ಥಿಕ ಚಟುವಟಿಕೆಗಳನ್ನು ಬಲಪಡಿಸಿಕೊಳ್ಳಬೇಕಾಗಿದೆ. ಜತೆಗೆ ಎಸ್ ಬಿಐ ನಿಂದ ಸಿಗುವ ಆನ್ ಲೈನ್ ಸೌಕರ್ಯಗಳನ್ನು ಬಳಕೆ ಮಾಡಿಕೊಂಡು ಸಂಪೂರ್ಣ ಬ್ಯಾಂಕ್ ಸೇವೆಯನ್ನು ಮನೆಯಲ್ಲೆ ಇದ್ದು ಪಡೆಯುವಂತರಾಗಿರಿ, ಇತರರಿಗೆ ಇದರ ಬಗ್ಗೆ ಜಾಗೃತಿ ಮೂಡಿಸಿ ಎಂದು ಹೇಳಿದರು.
ಇದೇ ವೇಳೆ ಬ್ಯಾಂಕ್ ಸಿಬ್ಬಂದಿ ತಿಪ್ಪರಾಜು, ನಾಗಭೂಷಣ್, ಭಾರ್ಗವ್, ರಶ್ಮಿ, ಅನುಷ, ಸ್ವಪ್ನ, ವಿಶ್ವ, ಪಳಂಗಪ್ಪ ಇತರರು ಇದ್ದರು.