ಗ್ರಾಮ ಸ್ವರಾಜ್ಯ ಪರಿಕಲ್ಪನೆಯೊಂದಿಗೆ ಗ್ರಾಮ ಅಭಿವೃದ್ಧಿಗೆ ಶ್ರಮಿಸಿ – ಎನ್.ಎಸ್.ಬಿ.

ಸಿರವಾರ.ಜ.೭-ಗ್ರಾಮಗಳನ್ನು ಅಭಿವೃದ್ದಿ ಪಡಿಸಬೇಕೆಂಬ ಉದ್ದೇಶದಿಂದಲೇ ಗಾಂದೀಜಿಯವರು ಗ್ರಾಮ ಸ್ವರಾಜ್ಯ ಪರಿಕಲ್ಪನೆಯೊಂದಿಗೆ ಗ್ರಾಮಗಳ ಉದ್ದಾರಕ್ಕೆ ಶ್ರಮಿಸಿದರೋ ಅದೇ ರೀತಿ ಗ್ರಾ.ಪಂಗೆ ಆಯ್ಕೆಯಾಗಿರುವ ನೂತನ ಸದಸ್ಯರು ಗ್ರಾಮ ಸ್ವರಾಜ್ಯ ಸಂಕಲ್ಪ ಮಾಡಬೇಕು ಎಂದು ಎಐಸಿಸಿ ಪ್ರ.ಕಾ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಎಸ್.ಬೋಸರಾಜು ಹೇಳಿದರು.
ಇತ್ತಿಚೆಗೆ ಜರುಗಿದ ೧೪ ಗ್ರಾ.ಪಂ ಚುನಾವಣೆಯಲ್ಲಿ ಗೆದ್ದಿರುವ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಪಟ್ಟಣದ ತೇಜಸ್ ಮಹಲ್‌ನಲ್ಲಿ ಸಿರವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ದೇಶದ ಪ್ರತಿಯೊಬ್ಬರೂ ಸ್ವಾಲಂಭಿಗಳಗಾಬೇಕೆಂಬುದು ಗಾಂದೀಜಿ ಕನಸ್ಸಾಗಿತು, ತಮ್ಮ ಗ್ರಾಮದ ವ್ಯಾಪ್ತಿಯಲ್ಲಿ ಸಿಸಿರಸ್ತೆ, ಶುದ್ದ ಕುಡಿಯುವ ನೀರು, ಚರಂಡಿ, ಬಿದಿ ದೀಪ, ವಸತಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಉತ್ತಮ ಸೇವೆ ಮಾಡಿ ಜಾತಿ, ಧರ್ಮ, ಪಕ್ಷ ಎಂದು ಬೇದ ಭಾವ ಮಾಡದೆ ಎಲ್ಲಾರಿಗೂ ಸರ್ಕಾರಿ ಸೌಲಭ್ಯಗಳನ್ನು ಒದಗಿಸಿಕೊಡುವ ಮೂಲಕ ಗ್ರಾಮ ಸ್ವರಾಜ್ಯ ಕನಸ್ಸು ನನಸಾಗಲಿ. ದೇಶದಲ್ಲಿ ಅದಿಕಾರ ವಿಕೇಂದ್ರೀಕರಣ ಕಾಂಗ್ರೇಸ್ ಕೊಡುಗೆಯಾಗಿದೆ.
ಕಾಂಗ್ರೆಸ್ ಪಕ್ಷ ಅವನತಿಯಲಿ ಸಾಗುತ್ತಿದೆ ಎಂದು ಹೇಳುವವರಿಗೆ ಈ ಚುನಾವಣೆಯಲ್ಲಿ ಗೆದ್ದಿರುವ ಕಾಂಗ್ರೇಸ್ ಬೆಂಬಲಿತ ಸದಸ್ಯರು ಅದಿಕ ಸಂಖ್ಯೆಯಲ್ಲಿ ಗೆದ್ದಿರುವು ಅರಗಿಸಿಕೊಳಲಾಗುತ್ತಿಲ್ಲ.
ಮಾನ್ವಿ ವಿಧಾನಸಭಾ ಕ್ಷೇತ್ರದ ೨೬ ಗ್ರಾ.ಪಂಗ ಳ ೫೧೯ ಸ್ಥಾನಗಳಲ್ಲಿ ೩೦೦ ಕೂ ಅಧಿಕ ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷ ಫಿನಿಕ್ಸ್ ಹಕ್ಕಿಯಂತೆ ಮುಂದಿನ ದಿನಗಳಲ್ಲಿ ಪುನಃ ಅಧಿಕಾರಕ್ಕೆ ಬರುತ್ತದೆ.
ಗ್ರಾ.ಪಂ ಅಧ್ಯಕ್ಷ- ಉಪಾಧ್ಯಕ್ಷ ಅಯ್ಕೆ ಮಾಡುವಾಗ ಹಿರಿಯ ಮುಖಮಡರ ಅಭಿಪ್ರಾಯದಲ್ಲಿ ಸಾಗಿ. ಭಿನ್ನಮತ ಮಾಡಿಕೊಳದೆ ಒಗ್ಗೂಟ ಅಧಿಕಾರದ ಗದ್ದುಗೆ ಏರಿ ಎಂದರು. ಮಾಜಿ ಶಾಸಕ ಜಿ.ಹಂಪಯ್ಯನಾಯಕ ಮಾತನಾಡಿ ಗೆದ್ದಿರುವ ಸದಸ್ಯರ ಮೇಲೆ ಮತದಾರರ ಋಣ ಅಧಿಕಾಗಿದೆ ಅವರ, ಮನವಿ, ಬೇಡಿಕೆಗೆ ಸ್ಪಂದಿಸಿ ನಡೆಯುವ ಮೂಖ ಋಣ ಮುಕ್ತರಾಗಿ ಎಂದರು. ವೈ.ಶರಣಪ್ಪ ಮಾತಾನಾಡಿ ನಾವು ಹೊದ ನಂತರ ಜನರ ಮಾತಿನಲ್ಲಿ ಉಳಿಯುವ ಕೆಲಸವನ್ನು ಮಾಡಿ ಎಂದರು.
ಮಲ್ಲಟ ಜಿ.ಪಂ ಸದಸ್ಯ ಕಿರಿಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ಮುಖಂಡ ರವಿ ಬೊಸರಾಜ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಚುಕ್ಕಿ ಸೂಗಪ್ಪ ಸಾಹುಕಾರ,ತಾ.ಪಂ ಮಾಜಿ ಅಧ್ಯಕ್ಷ ದಾನನಗೌಡ, ರಮೇಶ ದರ್ಶನಕರ್, ಚುಕ್ಕಿ ಶಿವಕುಮಾರ,ಎಂ.ಶ್ರೀನಿವಾಸ್, ಚಂದ್ರುಕಳಸ್, ಬಸವರಾಜ ಪಾಟೀಲ ಅತ್ತನೂರು, ಬಸವರಾಜ ದಳಪತಿ,ಕೆ.ಬಸವರಾಜನಾಯಕ, ಎನ್.ಚಂದ್ರಶೇಖರ್, ಹನುಮಗೌಡ ಮುರ್ಕಿಗುಡ್ಡ,ಎನ್. ಮಲ್ಲಪ್ಪ, ಹಸೇನ್ ಅಲಿ, ಮಹಿಬೂಬ್ ಸಾಬ್ ದೊಡ್ಮನೆ, ಹಾಜಿಚೌದ್ರಿ, ನಾಗಪ್ಪ ಪತ್ತಾರ, ಜಿ.ವಿರೇಶ, ವೈಭೂಪನಗೌಡ, ಅಯ್ಯಪ್ಪ ದೊರೆಹಿರಾ, ಸೇರಿದಂತೆ ಇನ್ನಿತರರು ಇದ್ದರು