ಗ್ರಾಮ ಸ್ವರಾಜ್ಯ ನಿರ್ಮಾಣಕ್ಕೆ ಸಂಕಲ್ಪ ಮಾಡಿ: ಎಂ.ಪಿ.ಲತಾ

ಹರಪನಹಳ್ಳಿ ಜ 03 : ಗಾಂಧೀಜಿಯು ಗ್ರಾಮಗಳನ್ನು ಅಭಿವೃದ್ದಿಪಡಿಸಬೇಕೆಂಬ ಉದ್ದೇಶದಿಂದಲೇ ಗ್ರಾಮ ಸ್ವರಾಜ್ಯ ಪರಿಕಲ್ಪನೆಯೊಂದಿಗೆ ಗ್ರಾಮಗಳ ಉದ್ದಾರಕ್ಕೆ ಶ್ರಮಿಸಿದರು. ಹೀಗಾಗಿ ಗ್ರಾಮ ಪಂಚಾಯ್ತಿಯ ನೂತನ ಸದಸ್ಯರುಗಳು ಗ್ರಾಮ ಸ್ವರಾಜ್ಯ ನಿರ್ಮಾಣಕ್ಕೆ ತಾವೆಲ್ಲರೂ ಸಂಕಲ್ಪ ಮಾಡಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.
ಹರಪನಹಳ್ಳಿ ಪಟ್ಟಣದ ಹಡಗಲಿ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸದಸ್ಯರನ್ನು ಸನ್ಮಾನಿಸಿ ಅವರು ಮಾತನಾಡಿದರು.
ದೇಶದ ಪ್ರತಿಯೊಬ್ಬರೂ ಸ್ವಾವಲಂಬಿ ಜೀವನ ನಡೆಸಬೇಕು ಎಂಬುವುದು ಗಾಂಧೀಜಿಯ ಆಶಯವಾಗಿತ್ತು. ಜನ ಆರ್ಥಿಕವಾಗಿ ಸಬಲರಾದರೆ ಮಾತ್ರ ದೇಶದ ಅಭಿವೃದ್ದಿ ಪಥದಲ್ಲಿ ಸಾಗುತ್ತದೆ. ತಮ್ಮ ತಮ್ಮ ಗ್ರಾಮದ ವ್ಯಾಪ್ತಿಯಲ್ಲಿ ಮೊದಲ ಅದ್ಯತೆಯಾಗಿ ಒಳಚರಂಡಿ, ಶುದ್ದ ಕುಡಿಯುವ ನೀರು, ರಸ್ತೆ ಅಭಿವೃದ್ದಿ, ಬೀದಿ ದೀಪ, ಕಡುಬಡವರಿಗೆ ವಸತಿ ಕಲ್ಪಿಸುವುದು, ಸೇರಿದಂತೆ ಜನರ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಅದ್ಯತೆ ನೀಡಬೇಕೆಂದು ಸಲಹೆ ನೀಡಿದರು.
ಜಾತಿ, ಕುಲ, ಮತ, ಧರ್ಮದ ಹೆಸರಿನಲ್ಲಿ ಭೇದಭಾವ ಮಾಡದೇ ಎಲ್ಲಾರನ್ನು ಒಳಗೊಂಡು ಅಭಿವೃದ್ದಿ ಮಾಡುವ ಮೂಲಕ ಗಾಂಧೀಜಿಯ ಕನಸಿನ ಸಮ ಸಮಾಜ ನಿರ್ಮಾಣ ಮಾಡಬೇಕು. ಅಧಿಕಾರ ವಿಕೇಂದ್ರಿಕರಣಕ್ಕೆ ಕಾಂಗ್ರೆಸ್ ಕೊಡುಗೆ ಅಪಾರವಾಗಿದೆ. ಕಾಂಗ್ರೆಸ್ ಪಕ್ಷ ನೆಲಕಚ್ಚಿಲ್ಲ, ಸದೃಢವಾಗಿದೆ ಎನ್ನುವುದಕ್ಕೆ ನೆರದಿರುವ ಕಾರ್ಯಕರ್ತರೇ ಸಾಕ್ಷಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷ ಫಿನಿಕ್ಸ್ ಹಕ್ಕಿಯಂತೆ ಪುನಃ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಲುವಾಗಲು ಗ್ರಾಮದ ಕೆಲವು ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕುಂಚೂರು ಗ್ರಾ.ಪಂ ಸದಸ್ಯ ಸಂಜೀವಪ್ಪ ಕಾಂಗ್ರೆಸ್ ಸೇರ್ಪಡೆಗೊಂಡರು. ಮುಖಂಡರಾದ ಮತ್ತಿಹಳ್ಳಿ ಕೋಟ್ರಗೌಡ, ಕೆ.ಕಲ್ಲಹಳ್ಳಿ ಗೋಣ್ಯೆಪ್ಪ ಮಾತನಾಡಿದರು. ಕೃಷಿ ಸಹಕಾರಿ ಸಂಘ ಅಧ್ಯಕ್ಷ ಟಿ.ಹೆಚ್.ಎಂ.ಮಂಜುನಾಥ, ಮುಖಂಡರಾದ ಕಾನಹಳ್ಳಿ ರುದ್ರಪ್ಪ, ಕಡಬಗೆರೆ ಮಲ್ಲಿಕಾರ್ಜುನ್, ಬಾಗಳಿ ಭರಮನಗೌಡ, ಮತ್ತಿಹಳ್ಳಿ ಬಸವರಾಜ್, ಬಾಗಳಿ ಚಿದಾನಂದಪ್ಪ, ವಾಮದೇವನಗೌಡ, ಪಿ.ಜಯಲಕ್ಷ್ಮಿ, ಮೈದೂರು ರಾಮಪ್ಪ, ಅಡವಿಹಳ್ಳಿ ದಕ್ಷಿಣಮೂರ್ತಿ, ರಾಯದುರ್ಗ ವಾಗೀಶ್, ಕನಕನಬಸಾಪುರ ಮಂಜುನಾಥ, ನಿಚ್ಚವ್ವನಹಳ್ಳಿ ವಕೀಲ ಅನಂದ್, ಮುತ್ತಿಗಿ ಸಾಬಳ್ಳಿ ಮಂಜುನಾಥ, ಎಂ.ವಿ.ಕೃಷ್ಣಕಾಂತ್, ಉದಯಶಂಕರ್, ಮತ್ತೂರು ಬಸವರಾಜ್, ಕವಿತಾ ಸುರೇಶ್, ನಂದ್ಯಾಲ ಮಲ್ಲಿಕಾರ್ಜುನ್, ಕೂಲಹಳ್ಳಿ ವೆಂಕಟೇಶ್, ಪ್ರಸಾದ್ ಕವಾಡಿ ಮತ್ತಿತರರು ಉಪಸ್ಥಿತರಿದ್ದರು.