ಗ್ರಾಮ ಸಹಾಯಕ ಹುದ್ದೆ ನೀಡಲು ಮನವಿ

ಸಿರವಾರ.ಜು೨೮- ಅನೇಕ ವರ್ಷಗಳಿಂದ ಗ್ರಾಮ ಸಹಾಯಕ ಹುದ್ದೆ ವಾಲೇಕಾರ ಕೆಲಸ ಮಾಡಿದ ನಮ್ಮ ತಾತ, ತಂದೆ ಹೀಗೆ ತಲೆಮಾರಿನಿಂದ ಮಾಡಿಕೊಂಡು ಬಂದ ಕೆಲಸ ಇಂದು ಬೇರೆಯವರ ಪಾಲಗಿದೆ ಅದನ್ನು ನಮಗೆ ಪುನಃ ಕಲ್ಪಿಸಿಕೊಂಡ ಬೇಕು ಎಂದು ವಾಲೇಕಾರ ಕುಟುಂಬದ ಸದಸ್ಯರು ಬುಧವಾರ ತಹಸೀಲ್ದಾರರಿಗೆ ಮನವಿ ಸಲ್ಲಿದರು.
ನಮ್ಮ ತಂದೆ ಮರಣ ನಂತರ ನಮ್ಮ ಕುಟುಂಬಕ್ಕೆ ನೀಡಬೇಕಾದ ಹುದ್ದೆ ಅಕ್ರಮವಾಗಿ, ಕುತಂತ್ರ ದಿಂದ ಅಮರೇಶ ಉಪ್ಪಾರ ಮಾಡುತ್ತಿದ್ದು ನಮ್ಮ ಕುಟುಂಬದ ಸದಸ್ಯರು ಕೂಲಿ ನಾಲಿ ಮಾಡಿ ಜೀವನ ನಡೆಸಬೇಕಾಗಿದೆ. ತಾವುಗಳು ಇದನ್ನು ತನಿಖೆಮಾಡಿ ನಮ್ಮ ಕುಟುಂಬದ ವಾರಸ್ಥುದಾರರಿಗೆ ನೀಡಬೇಕು ಎಂದು ಒತ್ತಾಯಿಸಿದರು. ಅರಳಪ್ಪ ಯದ್ದಲದಿನ್ನಿ, ನಾಗರಾಜ, ಶಂಕರ ಮರಾಟ, ಭೀಮರಾಯ ಸೇರಿದಂತೆ ಕುಟುಂಬದ ಮಹಿಳೆಯರು ಇದ್ದರು.