ಗ್ರಾಮ ಸಹಾಯಕರ ಸಂಘದ ಅಧ್ಯಕ್ಷರಾಗಿ ವೀರೇಶ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಜೂ.19: ತಾಲೂಕು ಗ್ರಾಮ ಸಹಾಯಕರ ಸಂಘದ ಅಧ್ಯಕ್ಷರಾಗಿ ನಾಗತಿಬಸಾಪುರ ಗ್ರಾಮ ಸಹಾಯಕ ಬಿ.ವೀರೇಶ, ಉಪಾಧ್ಯಕ್ಷರಾಗಿ ಟಿ.ಮಂಜುನಾಥ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದಲ್ಲಿ ಜರುಗಿದ ಸರ್ವ ಸದಸ್ಯರ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಸಹಾಯಕರಾದ ದೇವಗೊಂಡನಹಳ್ಳಿಯ ಬಸಯ್ಯ, ಹೆಚ್.ಡಿ.ಹೊನ್ನೇಶ, ಕೆ.ರಾಜೇಂದ್ರ, ಮಂಜುನಾಥ, ಮರಿಯಪ್ಪ, ಎಂ.ಆನಂದ, ಕೋಟೆಪ್ಪ ಇಟ್ಟಿಗಿ, ಹೆಚ್.ಡಿ.ನೀಲಪ್ಪ, ಕೊಟ್ರೇಶ, ಟಿ.ರಾಮಜ್ಜ, ಸಾರೆಪ್ಪ, ರತ್ನಮ್ಮ ಉತ್ತಂಗಿ, ಹೆಚ್.ಮಂಜುನಾಥ ಮಾಗಳ, ಶೇಖಪ್ಪ, ಮಹಾಂತೇಶ ಹ್ಯಾರಡ ಇತರರು ಇದ್ದರು.