ಗ್ರಾಮ ಸಹಾಯಕರನ್ನು ‘ಡಿ’ ದರ್ಜೆ ನೌಕರರೆಂದು ಪರಿಗಣಿಸಿ ಸೇವಾ ಭದ್ರತೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

ವಿಜಯಪುರ,ಫೆ.23:ಕರ್ನಾಟಕ ರಾಜ್ಯ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ 10450 ಗ್ರಾಮ ಸಹಾಯಕರನ್ನು ‘ಡಿ’ ದರ್ಜೆ ನೌಕರರೆಂದು ಪರಿಗಣಿಸಿ ಸೇವಾ ಭದ್ರತೆಯನ್ನು ನೀಡಬೇಕೆಂದು ರಾಜ್ಯ ಸಂಘದ ಕರೆಯ ಮೇರೆಗೆ ಕಂದಾಯ ನೌಕರರು ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಸರಕಾರದ ಕಂದಾಯ ಸಚಿವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಕಂದಾಯ ನೌಕರರು ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ಮೂಲಕ ತೆರಳಿ ಕೆಲ ಹೊತ್ತು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ನಜೀರ ಇನಾಮದಾರ ಮಾತನಾಡಿ, ಕರ್ನಾಟಕ ರಾಜ್ಯ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ 10450 ಗ್ರಾಮ ಸಹಾಯಕರನ್ನು ” ಡಿ ” ದರ್ಜೆ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಫೆ.26 ರಂದು ಮುಖ್ಯ ಮಂತ್ರಿಗಳ ಜನ್ಮ ಸ್ಥಳವಾದ ಸಿದ್ದರಾಮಯ್ಯನ ಹುಂಡಿಯಿಂದ ಪಾದಯಾತ್ರೆ ಮೂಲಕ ಹೊರಟು ಮೈಸೂರು ಜಿಲ್ಲಾಧಿಕಾರಿಗಳಿಗೆÉ ಮನವಿ ಸಲ್ಲಿಸಿ ತದನಂತರ ಫೆ.28 ರಂದು ಫ್ರೀಡಂ ಪಾಕ್ರ್À ಉದ್ಯಾನವನದಲ್ಲಿ ನಡೆಯುವ ಅನಿರ್ದಿಷ್ಟಾವಧಿಯಲ್ಲಿ ನಡೆಯುವ ಮುಷ್ಕರದಲ್ಲಿ ಪಾಲ್ಗೊಳ್ಳಲು ವಿಜಯಪುರ ಜಿಲ್ಲೆಯಲ್ಲಿ ಬರುವ 13 ತಾಲೂಕಿನ ಎಲ್ಲಾ ಗ್ರಾಮ ಸಹಾಯಕರು 343 ಮಂದಿ ಪಾಲ್ಗೊಳ್ಳುತ್ತಿದ್ದೇವೆ ಎಂದರು.
ಕಂದಾಯ ಇಲಾಖೆಯಲ್ಲಿ ಸುಮಾರು 45 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ 10450 ಗ್ರಾಮ ಸಹಾಯಕ ಹುದ್ದೆಯನ್ನು 1978 ರಲ್ಲಿ ಮಿತವೇತನ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಯಿತು. ನಂತರ 2007 ರಲ್ಲಿ ಗ್ರಾಮ ಸಹಾಯಕರ ಹುದ್ದೆ ಖಾಯಂ ಆಗಿರುತ್ತದೆ. ಆದರೆ ಬರುವಂತ ಸರಕಾರಗಳು ಇಲ್ಲಿಯ ತನಕ ಗ್ರಾಮ ಸಹಾಯಕರಿಗೆ ಯಾವ ಸೌಲಭ್ಯವನ್ನು ನೀಡಿರುವದಿಲ್ಲ. 2014 ರಲ್ಲಿ ಸಿದ್ದರಾಮಯ್ಯನವರ ಸರಕಾರವು ಗ್ರಾಮ ಸಹಾಯಕರನ್ನು ‘ ಡಿ ‘ ಗ್ರೂಪ್ ಮಾಡಲು ಸರಕಾರದ ಅಡ್ವಕೇಟ್ ಜನರಲ್ತ್ ಅವರ ವರದಿಯನ್ನು ಕೇಳಿದ ಪ್ರಕಾರ ಆಗಿನ ಅಡ್ವಕೇಟ್ ಜನರಲ್ ಪ್ರೊ. ರವಿವರ್ಮಾ ಕುಮಾರ ಅವರು ಹಾಗೂ ಮದುಸೂಧ ಆರ್, ನಾಯಕ ಅವರು ನೀಡಿರುವ ವರದಿ ಗ್ರಾಮ ಸಹಾಯಕರನ್ನು ‘ ಡಿ ‘ ಗ್ರೂಪ್ ಮಾಡಲು ಯಾವುದೇ ಕಾನೂನು ತೊಡಕಿಲ್ಲ ಎಂದು ವರದಿ ನೀಡಿರುತ್ತಾರೆ. ಆದಾಗ್ಯೂ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಈಗಿನ ಪ್ರಸ್ತುತ ಸರಕಾರದಲ್ಲಿ ಗ್ರಾಮ ಸಹಾಯಕರ ಸಂಘದ ವತಿಯಿಂದ 2023 ರಂದು ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಕಿತ್ತೂರು ರಾಣಿ ಚನ್ನಮ್ಮನ ಅರಮನೆಯಿಂದ ಸುವರ್ಣ ಸೌಧÀದವರೆಗೆ ಪಾದಯಾತ್ರೆ ಮೂಲಕ ಬಂದು ಧರಣಿ ನಡೆಸಲಾಯಿತು. ಧರಣಿ ಸ್ಥಳಕ್ಕೆ ಕಂದಾಯ ಮಂತ್ರಿ ಕೃಷ್ಣ ಭೈರೇಗೌಡರು ಬಂದು ನಮ್ಮ ಮನವಿಯನ್ನು ಸ್ವೀಕರಿಸಿ ಗ್ರಾಮ ಸಹಾಯಕರ ಬೇಡಿಕೆಯನ್ನು 15 ದಿನಗಳ ಒಳಗಾಗಿ ಮುಖ್ಯ ಮಂತ್ರಿಗಳ ಒಪ್ಪಿಗೆ ಪಡೆದು ಗ್ರಾಮ ಸಹಾಯಕರ ಬೇಡಿಕೆಯಾದ ಸೇವಾ ಭದ್ರತೆಯನ್ನು ‘ ಡಿ ‘ ಗ್ರೂಪ್ ಸೌಲಭ್ಯವನ್ನು ಮಾಡಿಸಿಕೊಡುವದಾಗಿ ಭರವಸೆ ನೀಡಿದ್ದಾರೆ. ಮುಂದೆ ಅದರಂತೆ ಗ್ರಾಮ ಸಹಾಯಕರ ಸೇವಾ ಭದ್ರತೆ ಕಲ್ಪಿಸಿಕೊಡಲು ಪುನಃ ಮತ್ತೆ ಕಾನೂನು ಇಲಾಖೆಯಿಂದ ಕಾನೂನಾತ್ಮಕ ವರದಿಯನ್ನು ಕೇಳಿದ್ದು ವರದಿ ಬಂದ ನಂತರ 2024-25 ರ ಬಜೆಟ್‍ನಲ್ಲಿ ನಮ್ಮ ಬೇಡಿಕೆಯನ್ನು ಈಡೇರಿಸುವದಾಗಿ ತಿಳಿಸಿರುತ್ತಾರೆ . ಆದರೂ ಕೂಡಾ ಬಜೆಟ್‍ನಲ್ಲಿ ಸರಕಾರ ನಮ್ಮ ಬೇಡಿಕೆಯನ್ನು ಈಡೇರಿಸಿರುವದಿಲ್ಲ . ಕಾರಣ ನಮಗೆ ಅನ್ಯಾಯಾಗಿರುತ್ತದೆ . ರಾಜ್ಯ ಸಂಘದ ಕರೆಯ ಮೇರೆಗೆ ಫೆ.26 ರಂದು ಮೈಸೂರು ಜಿಲ್ಲೆಯ ಮುಖ್ಯಮಂತ್ರಿಗಳ ಸ್ವಕ್ಷೇತ್ರ ಸಿದ್ದರಾಮಯ್ಯನ ಹುಂಡಿಯಿಂದ ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಬೃಹತ್ ಪಾದಯಾತ್ರೆ ಮೂಲಕ ಮನವಿ ಸಲ್ಲಿಸಿ ತದನಂತರ ಫೆ.28 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಂಡಿದ್ದು ಕರ್ನಾಟಕ ರಾಜ್ಯ ಎಲ್ಲಾ ಜಿಲ್ಲೆಯ ಎಲ್ಲಾ ತಾಲೂಕಿನ ಗ್ರಾಮ ಸಹಾಯಕರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಜಿಲ್ಲಾ ಉಪಾಧ್ಯಕ್ಷÀ ಅಲ್ಲಾಬಕ್ಷ ಕೊರಬು, ಜಿಲ್ಲಾ ಕಾರ್ಯದರ್ಶಿ ಹನಮಂತ ಉಪ್ಪಾರ, ರಹೀಮ ಮುಶ್ರೀಫ, ಶಿವಾನಂದ ವಾಲಿಕಾರ, ಮುತ್ತಣ್ಣ ತಳವಾರ, ಬಾಳು ಜಮಖಂಡಿ, ಬಸವರಾಜ ಹಿರೆರೊಳ್ಳಿ, ಚಂದ್ರಶೇಖರ ವಾಲಿಕಾರ, ಶ್ರೀಶೈಲ ನರಿ, ರಮೇಶ ಹಳಬಿರ, ಬಸು ಧನ್ಯಾಳ, ಚಾಂದಸಾಬ ವಾಲಿಕಾರ, ಮಲ್ಲು ನಾಯ್ಕೋಡಿ, ದವಲತರಾಯ ರಮಗಾ, ಶಿವಶರಣ ವಾಲಿಕಾರ, ಪರಶುರಾಮ ಪೂಜಾರಿ, ಕಲಾದಗಿ ಇತರರು ಉಪಸ್ಥಿತರಿದ್ದರು.