ಗ್ರಾಮ ಸಭೆ ಯಶಸ್ವಿಯಾಗಲು ಸಾರ್ವಜನಿಕರು ಸಹಕಾರ ಮುಖ್ಯ: ಪ್ರಕಾಶ

ರಾಯಚೂರು,ಆ.೦೫- ದೇವದುರ್ಗ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಹೊಸೂರು ಸಿದ್ಧಾಪೂರ ಗ್ರಾಮ ಪಂಚಾಯತಿಯಲ್ಲಿ ನಡೆದಿರುವ ವಿಶೇಷ ಸಾಮಾಜಿಕ ಲೆಕ್ಕ ಪರಿಶೋಶದನಾ ಸಭೆಯಲ್ಲಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ಮಾನ್ಯ ಪ್ರಕಾಶ,ವಿ. ರವರು ಪಾಲ್ಗೊಂಡು ಕಾಮಗಾರಿ ಕಡತಗಳ ನಿರ್ವಹಣೆ ಸಂಬಂಧಿಸಿದಂತೆ ಮಾತನಾಡಿದರು.
ಆ.೦೪ರಂದು ದೇವದುರ್ಗ ತಾಲೂಕಿನ ಹೊಸೂರು ಸಿದ್ದಾಪುರ ಗ್ರಾಮ ಪಂಚಾಯತಿಯಲ್ಲಿ ನಡೆದ ವಿಶೇಷ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯಲ್ಲಿ ಪಾಲ್ಗೊಂಡು ನರೇಗಾ ಯೋಜನೆಯಲ್ಲಿ ಅನುಷ್ಠ್ಠಾನಗೊಂಡ ೨೦೨೦ -೨೦೨೧, ೨೦೨೧-೨೦೨೨, ಮತ್ತು ೨೦೨೨-೨೦೨೩ ನೇ ಕಾಮಗಾರಿ ಕಡತ ಹಾಗೂ ೧೪ ಮತ್ತು ೧೫ ನೇ ಹಣಕಾಸಿನ ದಾಖಲಾತಿಗಳನ್ನು ಈಗಾಗಲೇ ಕಳೆದ ಹತ್ತು ದಿನಗಳಿಂದ ತಂಡದವರು ಪರಿಶೀಲನೆ ಮಾಡಿದರು.
ಗ್ರಾಮ ಸಭೆ ಯಶಸ್ವಿಯಾಗಲು ಸಾರ್ವಜನಿಕರು ಸಹಕಾರ ಮಾಡಬೇಕು. ಸಾರ್ವಜನಿಕರು ಹಳ್ಳಿಗೆ ಕಲ್ಯಾಣಿ ಅಗತ್ಯ ವಿದೆ. ಮತ್ತು ಕೆರೆಯ ಅಭಿವೃದ್ಧಿಯನ್ನು ಅಮೃತ ಸರೋವರ ಯೋಜನೆಯಲ್ಲಿ ಮಾಡಿಕೊಡುವಂತೆ ಜನರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯದ ಜಂಟಿ ನಿರ್ದೇಶಕ ಕೆಂಪೆಗೌಡ, ಪಂಚಾಯತ್ ರಾಜ್‌ನ ಸಹಾಯಕ ನಿರ್ದೇಶಕ ಅಣ್ಣರಾವ್, ರಾಘವೇಂದ್ರ, ಬಸವರಾಜ ನಾಗೋಲಿ, ಶಂಕರ, ಮಹ್ಮದ್ ಸಮ್ಮದ್, ಮಹಾದೇವಮ್ಮ, ಹೇಮನೂರು ಸ್ವಾಮಿ, ಗ್ರಾಮ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.