ಗ್ರಾಮ ಸಂಗ್ರಾಮ ಫಲಿತಾಂಶ ನಮ್ಮದೇ ಸಿಂಹಪಾಲು ಎಂದೇಳುವ ಬಿಜೆಪಿ, ಕಾಂಗ್ರೆಸ್ ಮುಖಂಡರು

ಕೂಡ್ಲಿಗಿ. ಡಿ. 31:- ತಾಲೂಕಿನ 25 ಗ್ರಾಮಪಂಚಾಯಿತಿಯ ಸಂಪೂರ್ಣ ಫಲಿತಾಂಶ ಬುಧವಾರ ರಾತ್ರಿ ಹೊರಬಿದ್ದಿದ್ದು ನಮ್ಮ ಪಕ್ಷದ ಬೆಂಬಲಿತರೇ ಹೆಚ್ಚು ಜಯಶಾಲಿಗಳಾಗಿದ್ದಾರೆಂದು ಬಿಜೆಪಿಮಂಡಲ ಅಧ್ಯಕ್ಷ ಮತ್ತು ಕೂಡ್ಲಿಗಿ ಕಾಂಗ್ರೇಸ್ ಬ್ಲಾಕ್ ಅಧ್ಯಕ್ಷರು ತಿಳಿಸುತ್ತಿದ್ದಾರೆ.
ತಾಲೂಕಿನ 25 ಗ್ರಾಮ ಪಂಚಾಯತಿಗಳಲ್ಲಿ 482ಸ್ಥಾನಗಳಿದ್ದು 95ಅವಿರೋಧ ಆಯ್ಕೆಯಾಗಿ ಉಳಿದ 387ಸ್ಥಾನಕ್ಕೆ ಚುನಾವಣೆ ನಡೆದಿದ್ದು ನಿನ್ನೆ ಫಲಿತಾಂಶ ಹೊರಬಿದ್ದಿದ್ದರಿಂದ ಕಾಂಗ್ರೇಸ್ ಪಕ್ಷದ ಬೆಂಬಲಿತರೇ ಹೆಚ್ಚಾಗಿ ಜಯಸಾಧಿಸಿದ್ದಾರೆಂದು 25ಗ್ರಾಮಪಂಚಾಯಿತಿಗಳಲ್ಲಿ 17ಸ್ಥಾನದಲ್ಲಿ ನಮ್ಮ ಬೆಂಬಲಿತರೇ ಗೆದ್ದಿದ್ದು ಅಧಿಕಾರ ಚುಕ್ಕಾಣಿ ನಮ್ಮದೇ ಎಂದು ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಸಿದ್ದನಗೌಡ ತಿಳಿಸಿದರೆ, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಚನ್ನಪ್ಪ ನಮ್ಮ ಬಿಜೆಪಿ ಬೆಂಬಲಿತರು ಹೆಚ್ಚಾಗಿ ತಾಲೂಕಿನಲ್ಲಿ ಜಯಶಾಲಿಗಳಾಗಿದ್ದು ಸುಮಾರು 16ಕ್ಕೂ ಹೆಚ್ಚು ಪಂಚಾಯತಿ ಬಿಜೆಪಿ ಬೆಂಬಲಿತರ ಅಧಿಕಾರ ತಂದೇತರುತ್ತೇವೆಂದು ಹೇಳುತ್ತಿದ್ದಾರೆ ಉಳಿದಂತೆ 7 ಪಂಚಾಯತಿಗಳು ಇತರೇ ಪಕ್ಷೇತರವಾಗಿ ಜಯಸಾದಿಸಿದ್ದಾರೆಂದು ಹೇಳಬಹುದಾಗಿದೆ. ಸಧ್ಯದ ಮಟ್ಟಿಗೆ ಕಾಂಗ್ರೆಸ್ ಬೆಂಬಲಿತರೇ ಹೆಚ್ಚು ಜಯಶಾಲಿಗಳಾಗಿದ್ದರೆಂದು ಹೊರ ನೋಟದಲ್ಲಿ ಕಂಡುಬರುತ್ತಿದೆ.