ಗ್ರಾಮ ಸಂಗ್ರಾಮ. ಕೂಡ್ಲಿಗಿ ತಾಲೂಕಿನ 207 ಮತಗಟ್ಟೆಯಲ್ಲಿ ಶಾಂತಿಯುತ ಮತದಾನ.

ಕೂಡ್ಲಿಗಿ.ಡಿ. 27:- ಇಂದು ಬೆಳಿಗ್ಗೆ 7ಗಂಟೆಯಿಂದ ಗ್ರಾಮ ಸಂಗ್ರಾಮದ ಮತದಾನದ ಅಬ್ಬರ ಜೋರಾಗಿದ್ದು ತಾಲೂಕಿನ 25 ಗ್ರಾಮಪಂಚಾಯಿತಿಗಳ 207 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆದಿದ್ದು ಬೆಳಿಗ್ಗೆ 9 ಗಂಟೆ ಮಾಹಿತಿಯಂತೆ ಶೇ 8ರಷ್ಟು ಮತದಾನ ಮತ್ತು ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ.55 ರಷ್ಟು ಮತದಾನ ನಡೆದ ಬಗ್ಗೆ ಮಾಹಿತಿ ತಿಳಿದಿದೆ.
ಕೂಡ್ಲಿಗಿ ತಾಲೂಕಿನ 482ಒಟ್ಟು ಸ್ಥಾನಗಳಿದ್ದು ಆದರಲ್ಲಿ ಈಗಾಗಲೇ 95ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದರಿಂದ ಉಳಿದ 387ಸ್ಥಾನಗಳಿಗೆ 207 ಮತಗಟ್ಟೆಗಳಲ್ಲಿ 895ಅಭ್ಯರ್ಥಿಗಳ ಭವಿಷ್ಯದ ಮುದ್ರೆ ಮತದಾರ ತನ್ನ ಹಕ್ಕಿನ ಮೂಲಕ ಇಂದು ಚಲಾಯಿಸುತ್ತಿದ್ದಾರೆ.
ಕೋವಿಡ್ ಮುನ್ನೆಚ್ಚರಿಕೆ :ಕೋವಿಡ್ ಮಹಾಮಾರಿ ನಿಯಂತ್ರಣಕ್ಕೆ ಮುಂದಾದ ಚುನಾವಣಾ ಆಯೋಗ ಚುನಾವಣಾ ಕರ್ತವ್ಯದ ಸಿಬ್ಬಂದಿಗೆ ಫೇಸ್ ಸೀಲ್, ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಿದ್ದು ಮತಚಲಾಯಿಸುವವರನ್ನು ಥರ್ಮಲ್ ಸ್ಕ್ಯಾನರ್ ನಿಂದ ಪರೀಕ್ಷಿಸಲು ಮತಗಟ್ಟೆ ಕೊಠಡಿ ಮುಂದೆ ಆಶಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ ಎಂದು ತಿಳಿದಿದೆ. ವೃದ್ಧರಿಗೆ, ವಿಕಲಚೇತನರಿಗೆ ಅವರ ಮತದಾನದ ಹಕ್ಕು ಚಲಾಯಿಸುವವರಿಗೆ ವೀಲ್ ಚೇರ್ ಬಳಸಲಾಗಿದ್ದು ಅಲ್ಲಿರುವ ಚುನಾವಣಾ ಸಿಬ್ಬಂದಿ ಸಹಾಯಕರು ಈ ಕಾರ್ಯ ಮಾಡುತ್ತಿದ್ದಾರೆ.
ಬೆಳಿಗ್ಗೆ ಸಾಧಾರಣ ಸಂಖ್ಯೆಯಲ್ಲಿ ಮತದಾನ :
ಸದಸ್ಯರು, ಆಯಾ ಪಕ್ಷಗಳ ಮುಖಂಡರು ಮತದಾನದ ಹಕ್ಕು ಚಲಾಯಿಸಿದರು.