ಗ್ರಾಮ ಸಂಗ್ರಾಮಕ್ಕೆ ತೆರೆ. ಸ್ಟ್ರಾಂಗ್ ರೂಂ ಸೇರಿದ ಅಭ್ಯರ್ಥಿಗಳ ಭವಿಷ್ಯದ 207ಮತಪೆಟ್ಟಿಗೆ.

ಕೂಡ್ಲಿಗಿ. ಡಿ. 28 : ತಾಲೂಕಿನ 25ಗ್ರಾಮಪಂಚಾಯಿತಿಯ ಗ್ರಾಮ ಸಂಗ್ರಾಮಕ್ಕೆ ನಿನ್ನೆ ಸಂಜೆ ತೆರೆಎಳೆಯಲಾಗಿದ್ದು ಒಟ್ಟು 1,13,489 ಮತದಾರರು ಚಲಾಯಿಸಿದ ಮತ ಮುದ್ರೆಯ 895ಅಭ್ಯರ್ಥಿಗಳ ಭವಿಷ್ಯದ 207 ಮತಪೆಟ್ಟಿಗೆಗಳು ಕಳೆದ ರಾತ್ರಿ ಕೂಡ್ಲಿಗಿ ಸರ್ಕಾರಿ ಜೂನಿಯರ್ ಕಾಲೇಜಿನ ಎರಡು ಸ್ಟ್ರಾಂಗ್ ರೂಂಗಳು ಸೇರಿಕೊಂಡಿದ್ದು ಅವುಗಳಿಗೆ ಸೂಕ್ತ ಭದ್ರತೆ ಒದಗಿಸಲಾಗಿದೆ. ನಿನ್ನೆ ಬೆಳಿಗ್ಗೆ 7ಗಂಟೆಯಿಂದ ಸಂಜೆ 5ಗಂಟೆವರೆಗೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಭದ್ರತೆ ಮತ್ತು ಚುನಾವಣಾ ಅಧಿಕಾರಿಗಳ ಕಾರ್ಯಧಕ್ಷತೆಯಲ್ಲಿ ಚುನಾವಣಾ ಸಿಬ್ಬಂದಿಗಳ ಕರ್ತವ್ಯನಿಷ್ಠೆಯಲ್ಲಿ ಶಾಂತಿಯುತವಾಗಿ ತಾಲೂಕಿನ 207 ಮತಗಟ್ಟೆಗಳಲ್ಲಿ 895 ಅಭ್ಯರ್ಥಿಗಳ ಭವಿಷ್ಯಕ್ಕೆ ತಾಲೂಕಿನಲ್ಲಿ 1,39,786 ಮತದಾರರಲ್ಲಿ 1,13,489 ಮತದಾರರು ಆದರಲ್ಲಿ ಒಟ್ಟು 70,668ಪುರುಷರಲ್ಲಿ 58,408 ಮತಚಲಾಯಿಸಿದರೆ, ಒಟ್ಟು 69,109 ಮಹಿಳೆಯರಲ್ಲಿ 55,081 ಮತ ಚಲಾಯಿಸಿದ್ದಾರೆ ತಾಲೂಕಿನಲ್ಲಿ ಶೇ. 81.19ರಷ್ಟು ಮತದಾನವಾಗಿರುವುದು ತಿಳಿದಿದೆ.
ಅತೀ ಹೆಚ್ಚು ಮತ್ತು ಅತೀ ಕಡಿಮೆ ಮತಗಟ್ಟೆಗಳು :
ತಾಲೂಕಿನ 207 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಮತದಾನವಾದ ಮತಕೇಂದ್ರ: ಬೆಳಗಟ್ಟ ಗ್ರಾಮಪಂಚಾಯಿತಿ ವ್ಯಾಪ್ತಿಯ ಯರ್ರಲಿಂಗನಹಳ್ಳಿ 167 ಸಂಖ್ಯೆಯ ಮತಗಟ್ಟೆಯಲ್ಲಿ ಒಟ್ಟು 649 ಮತದಾರರಲ್ಲಿ 302 ಪುರುಷರು ಹಾಗೂ 308 ಮಹಿಳೆಯರು ಸೇರಿದಂತೆ 610 ಮತದಾರರು ಮತ ಚಲಾಯಿಸಿದ್ದರಿಂದ ಅತೀ ಹೆಚ್ಚು ಮತದಾನ ನಡೆದ ಮತಗಟ್ಟೆ ಕೇಂದ್ರವಾಗಿದೆ. ಅತೀ ಕಡಿಮೆಮತದಾನವಾದ ಮತಕೇಂದ್ರ:ಶಿವಪುರ ಗ್ರಾಮಪಂಚಾಯಿತಿಯ ಬಂಡೆ ಬಸಾಪುರತಾಂಡಾದ 126 ಮತಗಟ್ಟೆ ಸಂಖ್ಯೆಯ ಒಟ್ಟು 893 ಮತದಾರರಲ್ಲಿ 182ಪುರುಷರು ಹಾಗೂ 186 ಮಹಿಳೆಯರು ಸೇರಿದಂತೆ 368ಮತದಾರರು ಮತಚಲಾಯಿಸಿದ್ದು ಅತೀ ಕಡಿಮೆ ಮತದಾನವಾದ ಮತಕೇಂದ್ರವಾಗಿದೆ ಎಂದು ತಾಲೂಕು ಕಚೇರಿಯ ಚುನಾವಣೆ ಶಾಖೆಯಿಂದ ತಿಳಿದಿದೆ.
ಸ್ಟ್ರಾಂಗ್ ರೂಂಗಳ ಭದ್ರತೆ :
ಮತದಾರರು ಬರೆದ ಅಭ್ಯರ್ಥಿಗಳ ಭವಿಷ್ಯದ ಮುದ್ರೆಯ ಮತಪೆಟ್ಟಿಗೆಗಳನ್ನು ಬರುವ 30ರವರೆಗೆ ಕೂಡ್ಲಿಗಿ ಸರ್ಕಾರಿ ಕಾಲೇಜಿನ ಆವರಣದಲ್ಲಿನ ಎರಡು ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿಡಲಾಗಿದ್ದು ದಿನದ 24 ಗಂಟೆಗೆ ಸೀಮಿತವಾಗುವಂತೆ 3ಭದ್ರತಾ ತಂಡ ರಚಿಸಿದ್ದು 8ತಾಸಿಗೊಂದರಂತೆ ಓರ್ವ ಎ ಎಸ್ ಐ, ಒಬ್ಬ ಮುಖ್ಯಪೇದೆ, ನಾಲ್ಕು ಪೇದೆಗಳು, ಒಬ್ಬ ಅಗ್ನಿಶಾಮಕ ಸಿಬ್ಬಂದಿ ಮತ್ತು ಒಬ್ಬ ಡಿ.ಆರ್. ಪೇದೆಯನ್ನು ಕರ್ತವ್ಯಕ್ಕೆ ನಿಯೋಜಿಸಿ ಭದ್ರತೆ ಒದಗಿಸಲಾಗಿದೆ ಎಂದು ತಿಳಿದಿದೆ.