ಗ್ರಾಮ ವಾಸ್ತವ್ಯ’ದಿಂದ ಪರಿಹಾರದ ಭರವಸೆಯಲ್ಲಿ ನಡವಿ ಗ್ರಾಮಸ್ಥರು.
ಜಾಲಿಹಾಳ್ ರಾಜಾಸಾಬ್


ತೆಕ್ಕಲಕೋಟೆ, ನ.18: ಪಟ್ಟಣದ ನಡವಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಅಭಿಯಾನದ ಅಂಗವಾಗಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ  ಕಳೆದ‌ ಅಕ್ಟೋಬರ್ ತಿಂಗಳಲ್ಲಿ ಗ್ರಾಮವಾಸ್ತವ್ಯ ಘೋಷಣೆಯಾದ ಬೆನ್ನಲ್ಲೇ ಚರಂಡಿ ಹಾಗೂ ರಸ್ತೆ ಸ್ವಚ್ಛತಾ ಕಾರ್ಯ ನಡೆದಿತ್ತು, ಆದರೆ ಗ್ರಾಮವಾಸ್ತವ್ಯ  ಮುಂದೊಡ್ಡೂವ ವಿಷಯ ತಿಳಿದ ಮೇಲೆ ಚರಂಡಿ ಹಾಗೂ ರಸ್ತೆ ಸ್ವಚ್ಛತೆ ತನ್ನ ನಿಜವಾದ ರೂಪಕ್ಕೆ ಬಂದಿವೆ ಹಾಗೂ ಗ್ರಾಮದ ಹೊರ ವಲಯದಲ್ಲಿ ಶುದ್ದ ಕುಡಿಯುವ ನೀರಿನ ಐದು ಘಟಕಗಳಿದ್ದು ಈ ವರೆಗು ಶುದ್ಧೀಕರಿಸಿದ ನೀರು ಸಿಗುತಿಲ್ಲ ಎಂದು ಗ್ರಾಮಸ್ಥರ ಅಭಿಪ್ರಾಯವಾಗಿದೆ.
  ಗ್ರಾಮ ಪಂಚಾಯಿತಿ ಕಾರ್ಯಾಲಯ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ, ಸಾರ್ವಜನಿಕ ಗ್ರಂಥಾಲಯ ಮತ್ತು ಗ್ರಾಮ ಲೆಕ್ಕಿಗರ ಕಾರ್ಯಾಲಯ ಒಂದೇ ಆವರಣದಲ್ಲಿ ಇರುವುದರಿಂದ ಶಾಲೆಯ ಆವರಣ ಸಾರ್ವಜನಿಕರ ವಾಹನಗಳ ಪಾರ್ಕಿಂಗ್ ಸ್ಥಳವಾಗಿ ಶಾಲಾ ಮಕ್ಕಳಿಗೆ ಆಟ ಹಾಗೂ ಪಾಠಕ್ಕೆ ತೊಂದರೆಗೆ ಕಾರಣವಾಗಿದೆ. ಈ ಕಾರ್ಯಲಯಗಳನ್ನು  ಸ್ಥಳಾಂತರ ಮಾಡಬೇಕು ಹಾಗೂ ಶೌಚಾಲಯ ಮುಕ್ತಗ್ರಾಮ ಮಾಡಲು ಪಂಚಾಯಿತಿ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಗ್ರಾಮದಲ್ಲಿ ಪ್ರವಾಹದಿಂದಾಗಿ ಮನೆ ಕಳೆದು ಕೊಂಡವರಿಗೆ 363 ಮನೆಗಳ ನಿರ್ಮಾಣಕ್ಕೆ ಆದೇಶ ವಾಗಿದ್ದು ಕೇವಲ 168 ಮನೆಗಳು ನಿರ್ಮಾಣವಾಗಿವೆ, ಉಳಿದ ಬಡ ಕುಟುಂಬಗಳು ಮನೆ ನಿರ್ಮಾಣವನ್ನು ಎದುರು ನೋಡುವಂತಾಗಿದೆ,ನವಗ್ರಾಮ ಎಂಬುದು ಹೆಸರಿಗೆ ಮಾತ್ರವಾಗಿದೆ ಹಾಗೂ ಮೂಲಭೂತ ಸೌಲಭ್ಯಗಳು ಇಲ್ಲದಂತಾಗಿವೆ ಮತ್ತು ನವ ಗ್ರಾಮದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಆಗಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮದ ಯುವಕ ಅರುಣ್ ನಾಯಕ.
ಗ್ರಾಮದಲ್ಲಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇದ್ದು, ಮುಗಿದ ನಂತರ 9ನೇ ತರಗತಿಗಾಗಿ ದೂರದ ಮಣ್ಣೂರು ಸೂಗೂರು, ಕಂಪ್ಲಿ ಅಥವಾ ಸಿರುಗುಪ್ಪಕ್ಕೆ ತೆರಳಬೇಕಾಗಿದೆ ಸಮಯಕ್ಕೆ ಸರಿಯಾಗಿ ಬಸ್ ಸೌಕರ್ಯ ಇಲ್ಲದೇ ಇರುವುದು ಬಾಲಕಿಯರು ಶಾಲೆ ಬಿಡುವ ಪರಿಸ್ಥಿತಿ ಉಂಟಾಗಿದೆ ನಮ್ಮ ಗ್ರಾಮಕ್ಕೆ ಪ್ರೌಢಶಾಲೆ ಬೇಕೆಂದು ವಿದ್ಯಾರ್ಥಿಗಳಾದ ಚಂದನ, ರೂಪವತಿ ,ಪಲ್ಲವಿ ಮತ್ತಿತರರ ಆಶಯವಾಗಿದೆ.
ಗ್ರಾಮದಲ್ಲಿ ಇತಿಹಾಸ ಹೊಂದಿದ ಪ್ರಸಿದ್ದ ಶ್ರೀರಾಮಲಿಂಗೇಶ್ವರ ದೇವಸ್ಥಾನ ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಶುಭ ಸಮಾರಂಭಗಳಿಗೆ ತಾಣವಾಗಿದೆ. ಆದರೆ ಮೂಲಭೂತ ಸೌಕರ್ಯಗಳ ಕೊರತೆ, ಕುಡಿಯುವ ನೀರಿನ ಟ್ಯಾಂಕ್ ದುರಸ್ತಿಗೆ ತಲುಪಿರುತ್ತದೆ ಇನ್ನೂ ಅನೇಕ ಸಮಸ್ಯೆಗಳಿಂದ ಪ್ರಸಿದ್ಧ ದೇವಸ್ಥಾನ ನೆಲಗುಂದಿದೆ ಎಂದು ಗ್ರಾಮದ ಹಿರಿಯರಾದ ಬಿ.ರುದ್ರಗೌಡ, ಶಂಕರಗೌಡ, ಗೌರಯ್ಯತಾತ ಬೇಸರ ವ್ಯಕ್ತಪಡಿಸಿದರು.