ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಶಿಸ್ತುಕ್ರಮಕ್ಕೆ ದಲಿತ ಸಂಘರ್ಷ ಸಮಿತಿ ಒತ್ತಾಯ

ಲಿಂಗಸೂಗೂರು.ನ.೧೮- ಗ್ರಾಮ ಲೆಕ್ಕಾಧಿಕಾರಿಯ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿ ಹಾಗೂ ೨೦೨೨ – ೨೩ನೇ ಸಾಲಿನಲ್ಲಿ ಸತತ ಮಳೆಯಿಂದ ಹಾನಿಗೊಳಗಾದ ಮನೆಗಳ ಸರ್ವೆ ಕಾರ್ಯದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಬಿದ್ದ ಮನೆಗಳ ವರದಿ ಮಾಡಿಕೊಳ್ಳದೆ ಮನೆ ಬೀಳದೆ ಲಂಚ ಕೊಟ್ಟವರಿಗೆ ಸರಕಾರದಿಂದ ಪರಿಹಾರ ಹಣ ಮಂಜೂರು ಮಾಡಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಕದಸಂಸ (ಭೀಮವಾದ) ತಾಲೂಕು ಸಮಿತಿ ಒತ್ತಾಯಿಸಿದರ ಪಟ್ಟಣದ ಸಹಾಯಕ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದರು.
ಕಳೆದ ತಿಂಗಳು ಸತತ ಮಳೆಯಿಂದ ಬಿದ್ದ ಮನೆಗಳ ಸರ್ವೆ ಕಾರ್ಯ ಮಾಡಲು ಘನ ಸರ್ಕಾರದ ಆದೇಶದ ಮತ್ತು ಸಂಬಂಧಪಟ್ಟ ತಹಸೀಲ್ದಾರ್ ಆದೇಶದ ಮೇರೆಗೆ ನಮ್ಮ ಗ್ರಾಮದಲ್ಲಿ ಲೆಕ್ಕಾಧಿಕಾರಿಗಳು ಬಿದ್ದ ಮನೆಯನ್ನು ಸರ್ವೆ ಮಾಡಲು ಚಿತ್ತಾಪುರ , ಬೆಂಡೋಣಿ , ಹಿರೇಜಾವೂರ್, ಗುಡಿಜಾಪುರ. ಗ್ರಾಮಕ್ಕೆ ಬಂದು ಸರ್ವೆ ಮಾಡಿರುತ್ತಾರೆ . ಈ ಸರ್ವೆ ಕಾರ್ಯ ಮಾಡುವಲ್ಲಿ ಸದರಿ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಸಂಬಂಧಪಟ್ಟ ಕಿ .ಇಂ.ಮಳೆ ಹನಿಯಲ್ಲಿ ಬಿದ್ದ ಮನೆಗಳನ್ನು ಕಡೆಗಣಿಸಿ ಮನೆ ಬೀಳದೆ ಇರುವಂತಹ ವರ ಹೆಸರನ್ನು ಸರ್ವೇ ಮಾಡಿಕೊಂಡು ಹೋಗಿದ್ದಾರೆ . ಸರಕಾರದಿಂದ ಪರಿಹಾರ ಹಣ ಮಂಜೂರು ಮಾಡಿದ್ದು ಸರ್ಕಾರದ ಹಣ ಲೂಟಿ ಮಾಡುತ್ತಿದ್ದಾರೆ . ಗ್ರಾಮಗಳಲ್ಲಿ ಬೆಳೆ ಪರಿಹಾರ ಹಣ , ಸರ್ಕಾರದ ಮಾಶಾಸನ , ಮಂಜೂರು ಮಾಡುವಲ್ಲಿಯೂ ಪಲಾನುಭವಿಗಳಿಂದ ಹಣ ಪಡೆದುಕೊಳ್ಳುತ್ತಿದ್ದಾರೆ .ಗ್ರಾಮ ಲೆಕ್ಕಾಧಿಕಾರಿಯು ತನ್ನ ಸೇವೆಯಲ್ಲಿ ನಿರ್ಲಕ್ಷ್ಯ ಮತ್ತು ಸರ್ಕಾರದ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಈತನು ಭ್ರಷ್ಟಾಚಾರಕ್ಕೆ ಮುಂದಾಗಿದ್ದಾನೆ . ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈ ದೂರನ್ನು ಕೈಗೆತ್ತಿಕೊಂಡು ತಪ್ಪಿತಸ್ಥ ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಿ .ಇಂ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕದಸಂಸ ಸಂಘಟನೆ ತೀವ್ರವಾಗಿ ಒತ್ತಾಯಿಸುತ್ತಿದೆ .
ಈ ಸಂದರ್ಭದಲ್ಲಿ ಕದಸಂಸ . ಜಿಲ್ಲಾ ಸಂಚಾಲಕರು ರಾಯಚೂರು ಯಂಕಪ್ಪ ಎಂ ಚಿತ್ತಾಪುರ , ತಾಲೂಕು ಸಂಚಾಲಕ ಯಮನಪ್ಪ ಸರ್ಜಾಪುರ , ಮಲ್ಲಪ್ಪ ಹಲಕಾವಟ್ಟಗಿ , ಶರಣಪ್ಪ ಹಳೇಗೌಡ್ರು , ಚಂದ್ರು ಗ್ರಾಮ ಪಂಚಾಯತಿ ಸದಸ್ಯ , ದೇವಪ್ಪ , ಮಾಳಪ್ಪ , ಮುತ್ತಪ್ಪ , ಸಿದ್ದಪ್ಪ , ಹುಲಗಪ್ಪ , ಚಿಂತಾಮಣಿ ಸರ್ಜಾಪುರ , ಮೌನೇಶ್, ಅರವಿಂದ್ , ಸೇರಿದಂತೆ ಇನ್ನು ಅನೇಕರು.