
ರಾಯಚೂರು,ಮಾ.೦೪- ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸಂಗಾಪುರ ಗ್ರಾಮ ಲೆಕ್ಕಾಧಿಕಾರಿ ಬಾಬು ಅವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಜನಜಾಗೃತಿ ಸಮಿತಿಯ ಪದಾಧಿಕಾರಿಗಳು ರಾಯಚೂರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮಾನ್ವಿ ತಾಲೂಕಿನ ಸಂಗಾಪುರ ಗ್ರಾಮ ಲೆಕ್ಕಾಧಿಕಾರಿ ಬಾಬು ಅವರು ತಸ್ಧೀಖ್ ಭತ್ಯೆ ನೀಡಿಲ್ಲ ಎಂದು ಬೋಗಾವತಿ ಗ್ರಾಮದ ಬಸವರಾಜ ಪೂಜಾರಿ ಅವರು ಬಾಬು ಅವರ ಹತ್ತಿರ ಕೈಕಾಲು ಮುಗಿದು ಬೇಡಿಕೊಂಡರು ಸಹ, ೨೦೨೦ನೆ ಸಾಲಿನ ತಸ್ಥೀಖ್ ಭತ್ಯೆ ನೀಡಿಲ್ಲ. ಹೀಗಾಗಿ ನನಗೆ ನ್ಯಾಯ ಬೇಕೆಂದು ಬಸವರಾಜು ಅವರು ಮಾಧ್ಯಮದವರ ಹತ್ತಿರ ಹೋಗಿ ಅಳಲುತೊಡಿಕೊಳ್ಳುತ್ತಿದ್ದರು.
ಆದರೆ ಏಕಾಏಕಿಯಾಗಿ ಬಂದ ರೌಡಿ ಗ್ರಾಮ ಲೆಕ್ಕಾಧಿಕಾರಿ ಬಾಬು ಅವರು ಮಾಧ್ಯಮ ಪ್ರತಿನಿಧಿ ಪರಶುರಾಮ ಚೌಡ್ಕಿ ಮೇಲೆ ಹಲ್ಲೆ ಮಾಡಿದ್ದಲ್ಲದೆ ಕ್ಯಾಮೆರಾ ಹಾಗೂ ಲೋಗೋ ಕಸಿಯಲು ಮುಂದಾಗಿ ಕೊಲೆ ಬೆದರಿಕೆ ಹಾಕಿದ್ದಲ್ಲದೆ ರಾಯಚೂರಿನಿಂದ ರೌಡಿಗಳನ್ನು ಕರೆಸಿ ತುಂಡು ತುಂಡಾಗಿ ಕತ್ತರಿಸುತ್ತೇನೆಂದು ಬೆದರಿಕೆ ಹಾಕಿದ್ದಾರೆ.
ಮಾನ್ವಿ ಕಂದಾಯ ಕಚೇರಿಯಲ್ಲಿ ರೌಡಿಯಂತೆ ವರ್ತಿಸುತ್ತಿರುವ ಸಂಗಾಪುರ ಗ್ರಾಮ ಲೆಕ್ಕಾಧಿಕಾರಿ ಬಾಬು ಅವರು ಕಳೆದ ೧೦ ವರ್ಷದಿಂದ ಸೇವೆ ಮಾಡುತ್ತಿದ್ದರಿಂದ ಈತನಿಗೆ ಲಗಾಮು ಇಲ್ಲದ ರೀತಿಯಲ್ಲಿ ಮಾತನಾಡಿ, ಪತ್ರಕರ್ತರ ಮೇಲೆ ಹಲ್ಲೆ ದೌರ್ಜನ್ಯ ಹಾಗೂ ಕೊಲೆ ಬೆದರಿಕೆ ಹಾಕಿದ್ದಾರೆ. ಬಾಬುವಿನ ಮೇಲೆ ಪ್ರಕರಣ ದಾಖಲಾಗಿದ್ದು, ಇಂತಹವರನ್ನು ಕೆಲಸದಲ್ಲಿ ಮುಂದುವರಿಸಿದರೆ ಆಪತ್ತು ಇದೆ.
ಇಂತಹ ನಾಲಾಯಕ ಅಧಿಕಾರಿಗಳು ಇರುವುದರಿಂದಲೇ ಕಂದಾಯ ಇಲಾಖೆಗೆ ಅವಮಾನ,ಹೀಗಾಗಿ ಮಾನ್ಯ ಜಿಲ್ಲಾಧಿಕಾರಿ ಚಂದ್ರಶೇಖರನಾಯಕ ಅವರು ಕೂಡಲೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸಂಗಾಪುರ ಗ್ರಾಮದ ರೌಡಿ ಬಾಬು ಗ್ರಾಮ ಲೆಕ್ಕಾಧಿಕಾರಿಯನ್ನು ಅಮಾನತು ಮಾಡಬೇಕು. ಒಂದು ವೇಳೆ ನಿರ್ಲಕ್ಷ್ಯ ತೋರಿದ್ದೇ ಆದಲ್ಲಿ ಕರ್ನಾಟಕ ಜನಜಾಗೃತಿ ಸಂಘಟನೆಯ ಮೂಲಕ ಉಗ್ರವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.