
ರಾಯಚೂರು,ಮಾ.೦೯- ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ ಮಾನವಿ ತಾಲೂಕಿನ ಸಂಗಾಪೂರು ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಬಾಬು ಅವರನ್ನು ಒಂದು ವಾರದೊಳಗೆ ಅಮಾನತ್ತುಗೊಳಿಸಬೇಕು ಎಂದು ಕರ್ನಾಟಕ ಜನ ಜಾಗೃತಿ ಸಮಿತಿ ಸಹ ಸಂಚಾಲಕ ಈಶಪ್ಪ ಸಂಗಾಪೂರು ಆಗ್ರಹಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಮಾನವಿ ತಾಲೂಕಿನ ಭೋಗಾವತಿ ಗ್ರಾಮದ ಶ್ರೀ ಮಾರುತಿ ದೇವಸ್ಥಾನದ ಪೂಜಾರಿಯಾಗಿ ಬಸವರಾಜ ಅವರು ಕಳೆದ ೨೦ ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದು,೨೦೨೨ ನೇ ಸಾಲಿನ ತಸ್ಥೀಖ್ ಭತ್ಯೆ ನೀಡಬೇಕು ಎಂದು ಕ್ರಮ ಲೆಕ್ಕಾ ಅಧಿಕಾರಿ ಬಾಬು ಅವರಿಗೆ ಸಾಕಷ್ಟು ಬಾರಿ ಮನವಿ ಮಾಡಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮ ಲೆಕ್ಕಾಧಿಕಾರಿ ಬಾಬು ಅವರಿಂದ ಕಂದಾಯ ಇಲಾಖೆಯ ನೌಕರರ ಮೇಲೆ ಸಾರ್ವಜನಿಕರು ಬೇಸರಪಟ್ಟಿಕೊಂಡಿದ್ದಾರೆ.ಇಂತಹ ಅಧಿಕಾರಿಯಿಂದ ಇಲಾಖೆಗೆ ಕಪ್ಪು ಚುಕ್ಕೆ ಬರಲಿದೆ ಜಿಲ್ಲಾಧಿಕಾರಿ ಕೂಡಲೇ ಇವರನ್ನು ಅಮಾನತ್ತು ಮಾಡಬೇಕು.ಎಂದು ವೇಳೆ ನಿರ್ಲಕ್ಷ್ಯ ತೋರಿದರೆ ಸಂಘದ ವತಿಯಿಂದ ನಗರದ ತುಪ್ಪು ಸುಲ್ತಾನ್ ಉದ್ಯಾನವನದಲ್ಲಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಿಮ್ಮಣ್ಣ ಭೋವಿ,ಬಸವರಾಜ ಪೂಜಾರಿ ಭೋಗಾವತಿ, ಶರಣಪ್ಪ ಭೋವಿ ಇದ್ದರು.