ಗ್ರಾಮ ಮಟ್ಟದ ಪೆÇಲೀಸ್ ಜನಸಂಪರ್ಕ ಸಭೆ

ಕಲಬುರಗಿ:ನ.22: ಪಾಳಾ ಗ್ರಾಮದ ಶರಣಬಸವೇಶ್ವರÀ ದೇವಸ್ಥಾನದ ಆವರಣದಲ್ಲಿ ಗುಲಬಗಾ ವಿಶ್ವವಿದ್ಯಾಲಯ ಪೆÇಲೀಸ ಠಾಣೆಯ ಸಿ.ಪಿ.ಐ ಅರುಣ ಎಸ್ ಮುರುಗುಂಡಿ ಗ್ರಾಮ ಮಟ್ಟದ ಪೆÇಲೀಸ್ ಜನಸಂಪರ್ಕ ಸಭೆ ನಡೆಯಿತು.

ಸಿ ಪಿ ಐ ಅರುಣ ಎಸ್. ಮುರುಗುಂಡಿ ಮಾತನಾಡಿ ಜನರು ಪೆÇಲೀಸರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳಬೇಕು. ಅಕ್ರಮ ದಂಧೆಗಳಾದ ಮಟ್ಕಾ , ಜೂಜಟ್ ಗಾಂಜಾ ಮಾರಾಟ, ಮಾಡಬಾರದು, ಜನರು ನೇರವಾಗಿ ಠಾಣೆಗೆ ಬಂದು ತಮ್ಮ ಕುಂದು ಕೊರತೆಗಳ ಬಗ್ಗೆ ಅರ್ಜಿ ಸಲ್ಲಿಸಬೇಕು. ಅಕ್ರಮ ದಂಧೆ ಕೋರರ ಬಗ್ಗೆ ನನಗೆ ಫೆÇೀನಿನ ಮುಖಾಂತರ ತಿಳಿಸಿ ಸಹಕರಿಸಬೇಕು.ನಿಮ್ಮ ಹೆಸರು ನಾವು ಹೇಳುವದಿಲ್ಲ.ಅಕ್ರಮ ಚುಟುವಟಿಕೆ ಕಡಿವಾಣ ಹಾಕಲು ಪೆÇೀಲೀಸ್ ಇಲಾಖೆಗೆ ಸಹಕಾರ ವಾಗುತ್ತದೆ ಎಂದು ಸಾರ್ವಜನಿಕರಿಗೆ ತಿಳಿ ಹೇಳಿದರು.

ಪಾಳಾ ಗ್ರಾಮದ ಮುಖಂಡರಾದ ಶರಣಗೌಡ ಪಾಟೀಲ, ಸಹಾಯಕ ಪೆÇಲೀಸ್ ಸಬ್ ಇನ್ಸ್ಪೆಕ್ಟರ್ ಅಣಪ್ಪ ಎಸ್, ಬಿಟ ಪೇದೆ ರಮೇಶ, ಸಣ್ಣೂರ ಗ್ರಾಮ ಪಂಚಾಯತ್ ಅಧ್ಯಕ್ಷ ಸುನೀತಾ ಪಾಟೀಲ ಉಪಾಧ್ಯಕ್ಷ ರಾಜು ಕಲಬೇನೂರ ಉಪಸ್ಥಿತರಿದ್ದರು.