ಗ್ರಾಮ ಪಂಚಾಯ್ತಿ ಸದಸ್ಯರಿಗೆ 10 ಸಾವಿರ ಗೌರವಧನ : ಕಟೀಲ್

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.19: ವಿಧಾನ ಪರಿಷತ್ತಿನಲ್ಲಿ ಈಗ ಬಿಜೆಪಿಗೆ ಸ್ಪಷ್ಟ ಬಹುಮತ ಇಲ್ಲ. ಈಗ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ. ಬಹುಮತದೊಂದಿಗೆ ಗ್ರಾಮ‌ಪಂಚಾಯ್ತಿ ಸದಸ್ಯರಿಗೆ ಮಾಸಿಕ‌ ಹತ್ತು ಸಾವಿರ ರೂ ಗೌರವ ಧನ ನೀಡಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಅವರು ನಿನ್ನೆ ಸಂಜೆ ನಗರದ ಬಸವ ಭವನದಲ್ಲಿ‌  ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಜನ ಸ್ವ ರಾಜ್ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಯಾವುದೇ ಜನಪರ ಕಾಯ್ದೆಗಳನ್ನು ಜಾರಿಗೆ ತಂದರೆ ವಿಧಾನ‌ಪರಿಷತ್ ನಲ್ಲಿ ಬಹುಮತ ಇಲ್ಲದೆ ಅವನ್ನು  ಅನುಷ್ಟಾನಕ್ಕೆ ತರಲಾಗುತ್ತಿಲ್ಲ. ಅದಕ್ಕಾಗಿ ಈ ಚುನಾವಣೆಗಳಲ್ಲಿ  ಬಿಜೆಪಿ ಅಭ್ಯರ್ಥಿಗಳು ಹೆಚ್ಚು ಆಯ್ಕೆಯಾಗಿ ಜನ ಕಾಯ್ದೆಗಳ ಜಾರಿಗೆ ಅವಕಾಶ ಕಲ್ಪಿಸಬೇಕಿದೆಂದರು.
ರಾಜ್ಯದಲ್ಲಿ ಗ್ರಾಮ‌ಪಂಚಾಯ್ತಿಗಳಿಂದ ನಿರಾಶ್ರಿತರಿಗೆ ಮನೆ ನೀಡಲಿದೆ ಪ್ರತಿ ಗ್ರಾಮ ಪಂಚಾಯ್ತಿಗೆ ಎರೆಡು ಕೋಟಿ ರೂ ಅನುದಾನ ನೀಡಲಿದೆ. 14 ನೇ ಹಣಕಾಸಿನ‌ ಯೋಜನೆಯಿಂದ ನೇರವಾಗಿ ಗ್ರಾಮ ಪಂಚಾಯ್ತಿಗಳಿಗೆ ಅನುದಾನ ಒದಗಿಸಲಿದೆ. ಬರುವ ಬಜೆಟ್ ನಲ್ಲಿ ಪ್ರತಿ ಗ್ರಾಮ‌ಪಂಚಾಯ್ತಿ ಅಮೃತ ಯೋಜನೆಯಡಿ ಒಂದು ಕೋಟಿ ರೂ ನೀಡಲು ಸೂಚಿಸುವೆ ಎಂದರು.
ಭ್ರಷ್ಟಾಚಾರ, ನಿರುದ್ಯೋಗ, ಭಯೋತ್ಪಾನೆ ಕಾಂಗ್ರೆಸ್ ಕೊಟ್ಟ ಕೊಡುಗೆಯಾಗಿದೆ. ದೇಶದ ಭಯೋತ್ಪಾದನೆಯ ಹಿಂದೆ ಕಾಂಗ್ರೆಸ್ ರಾಜಕೀಯ ದುರುದ್ದೇಶವಿದೆ. ನೆಹರು ಅವರಿಂದ ಮನಮೋಹನ್ ಸಿಂಗ್ ವರೆಗೆ ಎಲ್ಲರೂ ಭ್ರಷ್ಟಾಚಾರ ಮಾಡಿದ್ದಾರೆ.
ಮೋಸ ಮತ್ತು ಸುಳ್ಳಿಗೆ ಮತ್ತೊಂದು ಹೆಸರು ಕಾಂಗ್ರೆಸ್ ಎಂದರು.
ಬಿಟ್ ಕಾಯಿನ್ ಬಗ್ಗೆ ಈಗಾಗಲೇ ತನಿಖೆ ಆರಂಭವಾಗಿದೆ ಯಾರನ್ನು ಬಿಡೋ ಪ್ರಶ್ನೆ ಇಲ್ಲ ಎಂದರು.
ಸಚಿವ ಆನಂದ ಸಿಂಗ್  ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಇಲ್ಲ.  ಬಳ್ಳಾರಿಯಲ್ಲಿನ  ಲೀಡರ್ ಗಳಲ್ಲಿ  ಹೊಂದಾಣಿಕೆ ಇಲ್ಲ.  ಯಾರನ್ನು ಅಭ್ಯರ್ಥಿ ಮಾಡಬೇಕೆಂದು ಗುಂಪುಗಾರಿಕೆ ಇದೆ. ಇದು  ಕಾಂಗ್ರೆಸ್ ಕಾರ್ಯಕರ್ತರಿಗೆ ಗೊಂದಲ ಮೂಡಿಸಿದೆ.
ರಾಜ್ಯವಷ್ಟೇ ಅಲ್ಲ ಬಳ್ಳಾರಿ ಕಾಂಗ್ರೆಸ್ ನಲ್ಲೂ ಎಳೆಯೋದು ತುಳಿಯೋದಷ್ಟೇ   ಕೆಲಸ. ದೇಶವನ್ನಾಳಿದ ಕಾಂಗ್ರೆಸ್ ಗರೀಬ್ ಹಠವೋ ಅಂತೂ ಆದ್ರೇ ಈವರೆಗೂ ಅದು ನಮಗೆ ಕಂಡಿಲ್ಲ ಎಂದರು.‌
ವಿಪಕ್ಷ ನಾಯಕರ ಮನಸ್ಸಿನಲ್ಲಿಯು ಮೋದಿ ಇದ್ದಾರೆ ಆದ್ರೆ ವಿರೋಧ ಪಕ್ಷದಲ್ಲಿ ಇರೋ ಕಾರಣ  ವಿರೋಧಿಸುತ್ತಾರೆಂದರು.‌
ಸಂಸದ ಪ್ರತಾಪ್ ಸಿಂಹ ಮಾತನಾಡಿ.  ಬಿಟ್ ಕಾಯಿನ್ ವಿಷಯವನ್ನು ಬಿಟ್ಟಿ ಕಾಯಿನ್ ರೀತಿ ‌ಮಾತನಾಡ್ತಿರಾ ಎಂದು ಕಾಂಗ್ರೆಸ್ ನ್ನು ಪ್ರಶ್ನಿಸಿದ ಅವರು.‌ ನಮ್ಮ ಕ್ವಾಪ್ಟನ್ ಬಗ್ಗೆ ನಮಗೆ ಸ್ಪಷ್ಟತೆ ಇದೆ.  ನಿಮ್ಮ ಕ್ಯಾಪ್ಟನ್ ಯಾರು ಸಿದ್ದರಾಮಯ್ಯ ನವರೋ ಅಥವಾ ಡಿಕೆಶಿಯೋ ಎಂದರು. 
ಜಮೀರ್ ಬಗ್ಗೆ ವ್ಯಾಂಗ್ಯವಾಡಿದ ಪ್ರತಾಪ್ ಸಿಂಹ ಅವರು, ಶ್ರೀಕಿಯನ್ನು ಹೊರದೇಶಕ್ಕೆ ಕಳುಹಿಸಿರೋದು ಸಿದ್ದರಾಮಯ್ಯ ಎಂದರು.
ಅಪ್ಪನ ಹೆಸರು ಹೇಳಿ ರಾಜಕೀಯ ಮಾಡೋ ಕರ್ಮ ಪ್ರಿಯಾಂಕ ಖರ್ಗೆಗೆ ಇದೆ ನನಗೆ ಇಲ್ಲ. ಪ್ರಿಯಾಂಕ ಅವರೇ ನಿಮ್ಮ ಹೆಸರೇನು. ಪ್ರಿಯಾಂಕ  ಎಂದರು. ಅದಕ್ಕೆ  ಸ್ತ್ರೀಲಿಂಗನೋ ಪುಲಿಂಗನೋ ಎಂದು ಕೇಳಿದೆ. ಯಾಕೆಂದರೆ ರಾಜೀವ್ ಗಾಂಧಿ ಮಗಳು ಹೆಸರು ಪ್ರಿಯಾಂಕ ಉಪೇಂದ್ರ ಹೆಂಣ್ತಿ ಹೆಸರು ಪ್ರಿಯಾಂಕ ಎಂದು ನೆರೆದ ಜನರನ್ನು ನಗೆಯಾಡಿಸಿದರು.
ಬೆಂಗಳೂರಿನ ವಿವಿಧ ಕಡೆ ಮನೆ ಆಸ್ತಿ ಮಾಡಿಕೊಂಡು ಜನರನ್ನು ವಂಚನೆ ಮಾಡ್ತಾರೆ. ಸಿದ್ದರಾಮಯ್ಯ ಬಗ್ಗೆ ಮತ್ತು ಇತ್ತೀಚಿನ ಹೋರಾಟದ ಬಗ್ಗೆ ವ್ಯಂಗ್ಯದ ಮಾತುಗಳನ್ನಾಡಿದರು. ವ್ಯಾಕ್ಸಿನ್ ಪ್ರೀ ಕೊಟ್ಟಂತೆ ಹುಚ್ಚು ಹಿಡಿದ ಕಾಂಗ್ರೆಸ್ ನಾಯಕರ ಟ್ರಿಟ್ ಮೆಂಟ್ ಗೂ ಉಚಿತ ಸೇವೆ ಕೊಡಲಾಗ್ತದೆಂದರು.
ಸಚಿವ ಮುರುಗೇಶ್ ನಿರಾಣಿ, ಕೇಂದ್ರ ಸಚಿವ ಭಗವಂತ ಖೂಬ, ಶಾಸಕರಾದ ರಾಜುಗೌಡ, ಸೋಮಶೇಖರ ರೆಡ್ಡಿ, ಎನ್. ಮಹೇಶ್, ಸೋಮಲಿಂಗಪ್ಪ, ಜಿಲ್ಲಾ ಅಧ್ಯಕ್ಷ. ಚೆನ್ನಬಸನಗೌಡ ಮಾಜಿ ಶಾಸಕರು, ಪಕ್ಷದ ಮುಖಂಡರು ಇದ್ದರು.