ಗ್ರಾಮ ಪಂಚಾಯ್ತಿ ಎರಡನೇ ಹಂತದಲ್ಲೂ ಶಾಂತಿಯುತ ಮತದಾನ

ಬಳ್ಳಾರಿ ಡಿ 27 : ರಾಜ್ಯದಲ್ಲಿ ಅತಿ ಹೆಚ್ಚು ಗ್ರಾಮ ಪಂಚಾಯ್ತಿ ಸದಸ್ಯರನ್ನು ಹೊಂದಿರುವ ಜಿಲ್ಲೆಗಳಲ್ಲಿ ಮೂರನೇ ಸ್ಥಾನ ಪಡೆದಿರುವ ಗಣಿನಾಡು ಬಳ್ಳಾರಿ ಜಿಲ್ಲೆಯಕಲ್ಲಿ ಸಹ ಇಂದು ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆಯಿತು. ಮಧ್ಯಾಹ್ನ 2 ಗಂಟೆ ವೇಳೆಗೆ ಜಿಲ್ಲೆಯಲ್ಲಿ ಶೇ 58 ರಷ್ಟು ಮತದಾನವಾಗಿತ್ತು. ಸಂಜೆ 5 ವರೆಗೆ ಮತದಾನ ನಡೆಯಲಿದ್ದು ಶೇ 80 ರಷ್ಟು ಮತದಾನವಾಗುವ ನಿರೀಕ್ಷೆ ಇದೆ.
ಅಭ್ಯರ್ಥಿಗಳು ತಾವು ಸಲ್ಲಿಸಿದ ನಾಮಪತ್ರಗಳಲ್ಲಿನ ಗೊಂದಲದಿಂದ ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿಯಲ್ಲಿ 3 ಮತ್ತು ನಾಲ್ಕನೇ ಕ್ಷೇತ್ರದಲ್ಲಿನ ಸ್ಪರ್ಧೆಯಲ್ಲಿನ ಗೊಂದಲ ಬಿಟ್ಟರೆ ಉಳಿದಂತೆ ಮತದಾಣ ಶಾಂತಿಯುತವಾಗಿ ನಡೆದಿದೆ.
ಬೆಳಿಗ್ಗೆ ಕೊರೆಯುವ ಚಳಿಯ ಕಾರಣ ಮತದಾಣ ಮಂದಗತಿಯಲ್ಲಿ ಸಾಗಿತ್ತು. ಮೊದಲ ಎರೆಡು ತಾಸಿನಲ್ಲಿ ಕೇವಲ ಅಂದರೆ ಬೆಳಿಗ್ಗೆ 9 ಗಂಟೆ ವೇಳೆಗೆ ಶೇ 6.48 ರಷ್ಟು ಮಾತ್ರ ಮತದಾಣವಾಗಿತ್ತು. ಸೂರ್ಯ ತನ್ನ ಕಿರಣಗಳನ್ನು ಹೊರ ಸೂಸಿದಂತೆ ಬಿಸಿಲು ಹೆಚ್ಚಿದಂತೆ ಮತದಾನವೂ ಕಾವು ಪಡೆಯಿತು. ನಂತರದ ಎರೆಡುತಾಸಿಗೆ ಅಂದರೆ ಬೆಳಿಗ್ಗೆ 11 ಗಂಟೆ ವೇಳೆಗೆ ಶೇ22.12 ರಷ್ಟು ಮತದಾನವಾಯ್ತಿ. ಪ್ರಾಥಮಿಕ ವರದಿಗಳ ಪ್ರಕಾರ ಮಧ್ಯಾಹ್ನ 2 ಗಂಟೆ ವೇಳೆಗೆ ಜಿಲ್ಲೆಯಲ್ಲಿ ಶೇ 58 ರಷ್ಟು ಮತದಾನವಾಗಿದೆಂದು ತಿಳಿದು ಬಂದಿದೆ.
ಮೊದಲ ಹಂತದಲ್ಲಿ ಡಿ.22 ರಂದು ಬಳ್ಳಾರಿ, ಹೊಸಪೇಟೆ, ಕಂಪ್ಲಿ, ಸಿರುಗುಪ್ಪ ಮತತು ಕುರುಗೋಡು ತಾಲೂಕಿನಲ್ಲಿ ಮತದಾಣ ನಡೆದಿತ್ತು. ಇಂದು ಜಿಲ್ಲೆಯ ಸಂಡೂರು, ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ, ಹಗರಿಬೊಮ್ಮಹಳ್ಳಿ ಮತ್ತು ಹಡಗಲಿ ತಾಲೂಕಿನ 144 ಗ್ರಾಮ ಪಂಚಾಯ್ತಿಗಳ, 2564 ಸದಸ್ಯಸ್ಥಾನಗಳಿಗೆ ಚುನಾವಣೆ ನಡೆದಿದ್ದು. ಇದರಲ್ಲಿ 319 ಸದಸ್ಯರ ಅವಿರೋಧ ಆಯ್ಕೆಯಾಗಿದ್ದು 2 ಸ್ಥಾನಗಳಿಗೆ ನಾಂ ಪತ್ರ ಸಲ್ಲಿಕೆಯಾಗಿಲ್ಲ. ಉಳಿದ 2243 ಸ್ಥಾನಗಳಿಗೆ 1149 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. 2564 ಸದಸ್ಯಸ್ಥಾನಗಳಿಗೆ 5457 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಮತಗಟ್ಟೆಗಳ ಮುಂದೆ ಮತದಾರರಿಗೆ ಥರ್ಮಲ್ ಚೆಕ್ ಮಾಡಿ, ಸ್ಯಾನಿಟೈಸರ್ ನೀಡಿ ಮಾಸ್ಕಧರಿಸಲು ಹೇಳಿ ಮತದಾನಕ್ಕೆ ಬಿಡಲಾಗುತ್ತಿದೆ. ವಿಕಲ ಚೇತನರಿಗೆ ಮತದಾನಕ್ಕಾಗಿ ಗಾಲಿ ಕುರ್ಚಿಯನ್ನು ವ್ಯವಸ್ಥೆ ಮಾಡಿತ್ತು. ಎಲ್ಲಾ ಮತಗಟ್ಟೆಗಳ ಮುಂದೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು. 51 ಇತರೇ ಮತ್ತು 3 ಲಕ್ಷದ 76 ಸಾವಿರದ 976 ಮಹಿಳಾ ಮತದಾರರು ಸೇರಿದಂತೆ ಒಟ್ಟು 7 ಲಕ್ಷದ 63 ಸಾವಿರದ 774 .ಮತದಾರರು ಮತ ಚಲಾಹಿಸುವ ಹಕ್ಕು ಪಡೆದಿದ್ದಾರೆ.
ಈ ತಿಂಗಳ 30 ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ಮತಗಳ ಏಣಿಕೆ ಕಾರ್ಯ ನಡೆಯಲಿದೆ.
ಮೊದಲ ಹಂತದಲ್ಲಿ ನಡೆದಂತೆ ಬಹುತೇಕ ಹಳ್ಳಿಗಳಲ್ಲಿ ಮತದಾರರಿಗೆ ಹಣ, ಮಧ್ಯ, ವಿವಿಧ ರೀತಿಯ ಗಿಫ್ಟ್‍ಗಳನ್ನು ನೀಡಲಾಗಿದೆ. ಹೀಗೆ ನೀಡಿದ ಅಭ್ಯರ್ಥಿಗಳು ಸಹ ಇಂದು ಮತಗಟ್ಟೆ ಮುಂದೆ ನಿಂತು ತಮಗೆ ಮತ ನೀಡುವಂತೆ ಕೇಳುತ್ತಿದ್ದರು.