ಗ್ರಾಮ ಪಂಚಾಯ್ತಿ ಅಭಿವೃದ್ಧಿಗೆ ಅಧ್ಯಕ್ಷರಿಗೆಹೆಚ್ಚಿನ ಅಧಿಕಾರ ನೀಡಬೇಕು- ಕೆ.ಸಿ. ಕೊಂಡಯ್ಯ.

ಸಂಜೆವಾಣಿ ವಾರ್ತೆ
ಕೂಡ್ಲಿಗಿ.ನ. 3 : – ಗ್ರಾಮಗಳ ಅಭಿವೃದ್ಧಿಗಾಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಹೇಳಿದರು. ಮುಂಬರುವ ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಅಂದ್ರ ಪ್ರದೇಶ ಹಾಗೂ ಕೇರಳ ಮಾದರಿಯಲ್ಲಿ ರಾಜ್ಯದಲ್ಲಿ ಗ್ರಾಮ ಪಂಚಾಯ್ತಿಗಳಿಗೆ ಅಧಿಕಾರ ನೀಡುವಂತೆ ಅನೇಕ ಬಾರಿ ಸಧನದಲ್ಲಿ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ. ವಿಧಾನ ಪರಿಷತ್ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡುವ ಮಸೂದೆಯನ್ನು ಜಾರಿ ಮಾಡಲು ದೇವೆಗೌಡರು ಮುಂದಾಗಿದ್ದರು. ಆದರೆ ನಾನು ಸಂಸತ್ತಿನಲ್ಲಿ ಪ್ರಶ್ನಿಸುವ ಮೂಲಕ ಇದನ್ನು ತಡೆಯಲಾಗಿತ್ತು. ಇದರಿಂದ ಗ್ರಾಮ ಪಂಚಾಯ್ತಿ ಸದಸ್ಯರು ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನದ ಹಕ್ಕುನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು ಎಂದರು.  ಪಂಚಾಯ್ತಿಗಳಲ್ಲಿ ಅಧ್ಯಕ್ಷರಿಗೆ ಸಂಪೂರ್ಣ ಅಧಿಕಾರ ನೀಡಿದಾಗ ಮಾತ್ರ ಯಶಸ್ವಿ ಆಡಳಿತ ನಡೆಸಿ ಗ್ರಾಮಗಳ ಅಭಿವೃದ್ಧಿ ಕೈಗೊಳ್ಳಲು ಸಾಧ್ಯವಾಗುತ್ತದೆ. ಸರ್ಕಾರ ಎಲ್ಲಾ ಯೋಜನೆಗಳು ಪಂಚಾಯ್ತಿಯಿಂದಲೇ ಜಾರಿಯಾಗಬೇಕು. ಕೇಂದ್ರ ಸರ್ಕಾರ ನೀಡುವ ಅನುದಾನದ ಪೂರ್ಣ ಕ್ರಿಯಾ ಯೋಜನೆಯನ್ನು ಪಂಚಾಯ್ತಿಗಳೇ ರೂಪಿಸಿಕೊಂಡು ಅನುದಾನ ಬಳಕೆ ಮಾಡುವಂತಾಗಬೇಕು ಎಂದರು.
ಗ್ರಾಮ ಪಂಚಾಯ್ತಿ ಸದಸ್ಯರು ಪಕ್ಷಾತೀತವಾಗಿದ್ದು, ನಾವು ಮಾಡಿದ ಕೆಲಸಗಳ ಮೇಲೆ ನಮಗೆ ಮತ ನೀಡುತ್ತಿದ್ದಾರೆ. ಇದರಿಂದ ನಾನು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಗೆಲವು ಪಡೆಯಲು ಸಾಧ್ಯವಾಗಿದೆ.  
ಪಕ್ಷದಿಂದ ಸ್ಥಳೀಯ ಮುಖಂಡರನ್ನು ಉಚ್ಚಾಟನೆ ಮಾಡಿದ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಪಕ್ಷ ನನಗೆ ಜವಬ್ದಾರಿ ನೀಡಿದರೆ ಪಕ್ಷದಲ್ಲಿ ಸಮಸ್ಯೆಗಳನ್ನು ಬಗೆಹರಿಸಿ, ಎಲ್ಲಾ ಕಾರ್ಯಕರ್ತರನ್ನು, ಮುಖಂಡರನ್ನು ಒಂದುಗೂಡಿಸಿ ಪಕ್ಷ ಸಂಘಟನೆ ಮಾಡಲು ಪ್ರಯತ್ನಿಸುವುದಾಗಿ ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಗುರುಸಿದ್ದನಗೌಡ, ಕೆಪಿಸಿಸಿ ಸದಸ್ಯ ಲೋಕೇಶ್ ನಾಯಕ, ಮುಖಂಡರಾದ ಗುಜ್ಜಲ್ ರಘು, ಉದಯ ಜನ್ನು, ಗುಳಿಗಿ ವೀರೇಂದ್ರ, ನರಸಿಂಹಗಿರಿ ವೆಂಕಟೇಶ್, ಕಾವಲ್ಲಿ ಶಿವಪ್ಪ ನಾಯಕ, ಜಯರಾಮ ನಾಯಕ, ಕೋಗಳಿ ಮಂಜುನಾಥ, ದಿನ್ನೆ ಮಲ್ಲಿಕಾರ್ಜುನ, ಗೋವಿಂದಪ್ಪ, ಜಿಲಾನ್ ,  ಅಪ್ಪೇನಹಳ್ಳಿ ಪಂಪ ನಾಯ್ಕ,  ರಾಯಪುರ. ಕೃಷ್ಣ, ಪಂಪನಾಯ್ಕ್, ಅಜ್ಜನ ಗೌಡ ಶುಕೂರ್, ಸಣ್ಣ ಕೊತ್ತಲಪ್ಪ, ನೇತ್ರಾವತಿ, ಮಾದಿಹಳ್ಳಿ ನಜೀರ್  ಬಸವರಾಜ, ರಾಘವೇಂದ್ರ, ಮುಂತಾದವರು ಇದ್ದರು.
Attachments area