ಗ್ರಾಮ ಪಂಚಾಯಿತಿ ನೌಕರರಿಗೆ 20 ಸಾವಿರ ವೇತನ ನಿಗದಿಪಡಿಸಲು ಆಗ್ರಹ


ಸಂಜೆವಾಣಿ ವಾರ್ತೆ
ಸಂಡೂರು: ಆ: 22- ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ 28,000 ನಿಗದಿಪಡಿಸುವಂತೆ ಆಗ್ರಹಿಸಿ ಮುಷ್ಕರ ಹಮ್ಮಿಕೊಳ್ಳಲಾಗುವದು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ರಾಜ್ಯ ಖಜಾಂಚಿ ಆರ್.ಎಸ್. ಬಸವರಾಜ್ ತಿಳಿಸಿದರು. ತಾಲೂಕ ಪಂಚಾಯಿತಿ ಸಭಾಂಗಣದಲ್ಲಿ ನಡೆದ ನೌಕರರ ಸಂಡೂರು ತಾಲ್ಲೂಕಿನ 6ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಬಾಕಿ ಇರುವ ಎಲ್ಲಾ ಗ್ರಾಮ ಪಂಚಾಯಿತಿ ನೌಕರರಿಗೆ ಅನುಮೋದನೆ ನೀಡುವದು, ಅನುಕಂಪ ಹುದ್ದೆ ಹಾಗೂ ಕನಿಷ್ಟ 5 ಸಾವಿರ ಪಿಂಚಣಿ ನೀಡುವದು ಒಟ್ಟು 15 ಬೇಡಿಕೆಗಳನ್ನು ಈಡೇರಸುವ ಭರವಸೆಯನ್ನು ಸರ್ಕಾರ ನೀಡಿದೆ ಎಂದು ಮಾಹಿತಿ ನೀಡಿದರು. ಪ್ರಮುಖ ಬೇಡಿಕೆ ಕರ ವಸೂಲಿಗಾರರು, ಕ್ಲರ್ಕ್, ಡಾಟಾ ಎಂಟ್ರಿ, ಆಪರೇಟರ್, ನೀರು ಗಂಟಿಗಳು, ಜವಾನ, ಸ್ವಚ್ಛತಾಗಾರರನ್ನು ಸರ್ಕಾರಿ ನೌಕರರಾಗಿ ಘೋಷಿಸಬೇಕು. ಅಲ್ಲಿಯವರೆಗೂ ಹೋರಾಟ ಮುಂದುವರಿಸುವುದು ಎಂದು ತಿಳಿಸಿದರು. ಮುಖ್ಯ ಅಥಿತಿಗಳಾಗಿ ಭಾಗವಹಿದ್ದ CITU ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜೆ.ಎಂ.ಚನ್ನಬಸಯ್ಯ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಕಾರ್ಮಿಕ ವರ್ಗದ ಮೇಲೆ ದಾಳಿನಡೆದಿದೆ. ಖಾಲಿಯಿರುವ ಹುದ್ದೆಗಳನ್ನು ತುಂಬುತ್ತಿಲ್ಲ. ಗುತ್ತಿಗೆ, ದಿನಗೂಲಿ, ಗೌರವ ಧನ ಹೆಸರಿನಲ್ಲಿ ಅಲ್ಪ ವೇತನ ನೀಡಿ ಶೋಷಣೆ ಮಾಡಲಾಗುತ್ತಿದೆ. ಕಲಸದ ಸಮಯ ಹೆಚ್ಚಿಸಿ ಹಾಗೂ ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳುವದು ಕಾನೂನುಬದ್ಧಗೊಳಿಸಲಾಗಿದೆ. ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಪ್ರಬಲವಾದ ಐಕ್ಯ ಹೋರಾಟ ನಡೆಸಬೇಕಾಗಿದೆ ಎಂದು ಹೇಳಿದರು. ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಂ. ಮಲ್ಲಿಕಾರ್ಜುನ ಸ್ವಾಮಿ, ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಎ. ಸ್ವಾಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮ್ಮೇಳನದ ಅಧ್ಯಕ್ಷತೆಯನ್ನು ಡಿ. ಕೃಷ್ಣ ನಾಯ್ಕ ಸುಶೀಲ ನಗರ ವಹಿಸಿದ್ದರು.
ಸಮ್ಮೇಳನದಲ್ಲಿ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಷರ್ಮಾಸ ವಲಿ, ಯರ್ರಯ್ಯನಹಳ್ಳಿ, ಪ್ರಧಾನ ಕಾರ್ಯದರ್ಶಿ ಭೀಮಣ್ಣ ಮೆಟ್ರಿಕಿ, ತಾಳೂರು, ಉಪ ಅಧ್ಯಕ್ಷರುಗಳಾಗಿ ಡಿ. ಕೃಷ್ಣ ನಾಯ್ಕ, ವೀರಭದ್ರ ಬಂಡ್ರಿ ನಾಗೇಂದ್ರ ಆಚಾರಿ ವಡ್ಡು, ಸಿದ್ದಲಿಂಗಸ್ವಾಮಿ ಸೋವೆನಹಳ್ಳಿ, , ತಿಮ್ಮಾರೆಡ್ಡಿ ,ವಿಠಲಾಪುರ, ನರಸಿಂಹಮೂರ್ತಿ ಯಶವಂತನಗರ, ಈರಣ್ಣ ನಿಡುಗುರ್ತಿ, ಸಹ ಕಾರ್ಯದರ್ಶಿಗಳಾಗಿ, ಕುಮಾರ ಬನ್ನಿಹಟ್ಟಿ, ಸಿದ್ದಯ್ಯ ಸ್ವಾಮಿ ರಾಜಪುರ, ಗಣೇಶ ನರಸಿಂಗಪುರ, ಸತ್ಯನಾರಾಯಣ ಕಾಳಿಂಗೇರ, ಕಲ್ಪನಾ ಹೆಚ್ಚ್ ಕೆ ಹಳ್ಳಿ, ಕಾಶ್ಯ ನಾಯ್ಕ ಸುಶೀಲ ನಗರ, ಆಯ್ಕೆ ಮಾಡಲಾಯಿತು.