ಗ್ರಾಮ ಪಂಚಾಯಿತಿ ದೂರದೃಷ್ಠಿ ಯೋಜನೆ ತಯ್ಯಾರಿಸುವ ಕಾರ್ಯಕ್ಕೆ ಚಾಲನೆ:ಸ್ಥಳೀಯ ಸಮಸ್ಯೆಗಳ ಬಗೆಹರಿಸಲು ಸಹಕಾರ:ಡಾ. ಉಮೇಶ ಜಾಧವ

ಕಲಬುರಗಿ,ನ.1: ಗ್ರಾಮೀಣ ಜನರ ಬದುಕು ಹಸನಗೊಳಿಸಬೇಕು ಮತ್ತು ಮತ್ತು ವಿವಿಧ ಕ್ಷೇತ್ರದಲ್ಲಿ ಸುಸ್ಥಿರ ಅಭಿವೃದ್ಧಿಗೆ ಪಂಚ ವರ್ಷದ ಗ್ರಾಮ ಪಂಚಾಯತಿ ದೂರದೃಷ್ಠಿ ಯೋಜನೆ ತಯ್ಯಾರಿಸಲಾಗುತ್ತಿದೆ. ಇದರಿಂದ ಸ್ಥಳೀಯ ಸಮಸ್ಯೆಗಳಿಗೆ ಪರಿಹರಿಸಲು ಸಹಕಾರವಾಗುತ್ತದೆ ಎಂದು ಸಂಸದ ಡಾ.ಉಮೇಶ ಜಾಧವ ತಿಳಿಸಿದರು.
ಮಂಗಳವಾರ ಕಲಬುರಗಿ ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ 2023-24 ರಿಂದ 2027-28 ವರೆಗಿನ ಗ್ರಾಮ ಪಂಚಾಯತಿ ದೂರದೃಷ್ಠಿ ಯೋಜನೆ ತ್ಯಯಾರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನರಿಗಾಗಿ ಜನರೇ ಸಿದ್ಧಪಡಿಸುವ ದೂರದೃಷ್ಠಿ ಯೋಜನೆ ಇದಾಗಿದೆ. ವಿಶ್ವ ಸಂಸ್ಥೆಯ ನಿರ್ದೇಶನದಂತೆ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪಲು ಬರುವ 2023ರ ಜನವರಿ 1ರೊಳಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ದೂರದೃಷ್ಠಿ ಯೋಜನೆ ಸಿದ್ಧಪಡಿಸುವ ಅವಶ್ಯಕತೆವಿದೆ ಎಂದರು.
ಕೇಂದ್ರ ಸರ್ಕಾರದ “ಸಬ್ ಕೀ ಯೋಜನಾ ಸಬ್ ಕಾ ವಿಕಾಸ್” ಶೀರ್ಷಿಕೆಯಡಿ ಇದನ್ನು ನಮ್ಮ ರಾಜ್ಯದಲ್ಲಿ “ನಮ್ಮ ಗ್ರಾಮ ನಮ್ಮ ಯೋಜನೆ ” ಅಡಿಯಲ್ಲಿ 17 ಗುರಿಗಳನ್ನು ಬಡತನ ಮುಕ್ತ ಗ್ರಾಮ, ಆರೋಗ್ಯಕರ ಗ್ರಾಮ, ಮಕ್ಕಳ ಸ್ನೇಹಿ ಗ್ರಾಮ, ಜಲಸಮೃದ್ಧಿ ಗ್ರಾಮ, ಸ್ವಚ್ಚ ಮತ್ತು ಹಸಿರು ಗ್ರಾಮ, ಮೂಲ ಸೌಕರ್ಯ ಸ್ವಾವಲಂಭಿ ಗ್ರಾಮ, ಸಾಮಾಜಿಕ ಸುರಕ್ಷಿತ ಗ್ರಾಮ, ಉತ್ತಮ ಆಡಳಿತ ವ್ಯವಸ್ಥೆ ಗ್ರಾಮ, ಲಿಂಗತ್ವ ಸ್ನೇಹಿ ಗ್ರಾಮ ಹೀಗೆ 9 ವಲಯವನ್ನಾಗಿ ಪರಿವರ್ತಿಸಿ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದರು.
ಜಿಲ್ಲೆಯ ಜನಪ್ರತಿನಿಧಿಗಳು, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಬುದ್ದಿ ಜೀವಿಗಳು ಮಾದರಿಯದಾ ದೂರದೃಷ್ಠಿ ಯೋಜನೆ ತಯ್ಯಾರಿಕೆ ಸಹಕರಿಸಬೇಕೆಂದು ಸಂಸದ ಡಾ.ಉಮೇಶ ಜಾಧವ ಅವರು ಮನವಿ ಮಾಡಿದರು.
ಗ್ರಾಮೀಣ ಜನರ ಕಲ್ಯಾಣಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯ ಅವರು ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದು, ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹಳ್ಳಿ-ತಾಂಡಾಗಳಲ್ಲಿ ವಾಸಿಸುವ ಜನರ ಕಷ್ಟ-ಸುಖಗಳನ್ನು ಅರಿತುಕೊಂಡು ಅಧಿಕಾರಿಗಳು ಕೆಲಸ ಮಾಡಬೇಕೆಂದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲಬುರಗಿ-ಯಾದಗಿರಿ ಡಿ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರು ಮತ್ತು ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ, ಹಳ್ಳಿಗರ ಜೀವನ ಕಷ್ಟದ ಜೀವನವಾಗಿದೆ. ಕೆಳಹಂತದಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಮಗ್ರ ಗ್ರಾಮದ 5 ವರ್ಷ ದೂರದೃಷ್ಟಿ ಯೋಜನೆ ಸಿದ್ಧಪಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಡಿ. ಬದೋಲೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮ ಪಂಚಾಯಿತಿ ದೂರದೃಷ್ಠಿ ಯೋಜನೆ ಸಿದ್ಧಪಡಿಸುವ ಕಾರ್ಯಕ್ಕೆ ಜಿಲ್ಲೆಯಲ್ಲಿ ಈಗಾಗಲೆ ಚಾಲನೆ ನೀಡಿದ್ದು, ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರುಗಳಿಗೆ ಮತ್ತು ಅಧಿಕಾರಿಗಳಿಗೆ ಮೈಸೂರಿನ ಎಸ್.ಐ.ಆರ್.ಡಿ. ಸಂಸ್ಥೆಯಿಂದ ತರಬೇತಿ ನೀಡಲಾಗಿದೆ, ಇನ್ನೆರಡು ತಂಡಗಳು ತರಬೇತಿಗೆ ಬಾಕಿ ಇವೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ದೂರದೃಷ್ಟಿ ಯೋಜನೆ ಕೈಪಿಡಿ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರದಮಲ್ಲಿ ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ಬಿ.ಎಸ್ ರಾಠೋಡ, ಯೋಜನಾ ನಿರ್ದೇಶಕ ಜಗದೇವಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು. ಮುಖ್ಯ ಯೋಜನಾಧಿಕಾರಿ ಕಿಶೋರ ಕುಮಾರ ದುಬೆ ಸ್ವಾಗತಿಸಿದರು.