ಗ್ರಾಮ ಪಂಚಾಯಿತಿ ಚುನಾವಣೆ: 3420 ಸದಸ್ಯರ ಆಯ್ಕೆ, ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಜಯಭೇರಿ

ಚಿತ್ರದುರ್ಗ.ಡಿ.೩೧: ಜಿಲ್ಲೆಯ ಒಟ್ಟು 189 ಗ್ರಾಮ ಪಂಚಾಯಿತಿಗಳಲ್ಲಿನ 3421 ಸದಸ್ಯ ಸ್ಥಾನಗಳಲ್ಲಿ 347 ಸ್ಥಾನಗಳಿಗೆ ಅವಿರೋಧವಾಗಿ ಮೊದಲೆ ಆಯ್ಕೆಯಾಗಿದ್ದು, ಬುಧವಾರ ನಡೆದ ಮತ ಎಣಿಕೆಯಲ್ಲಿ ಇನ್ನುಳಿದ 3073 ಸದಸ್ಯ ಸ್ಥಾನಗಳ ಫಲಿತಾಂಶ ಪ್ರಕಟವಾಗಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಸಾಧಿಸಿದ್ದು, ಬಹುತೇಕ ಪಂಚಾಯತಿಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣೆ ಹಿಡಿಯಲಿದೆ.ಚಿತ್ರದುರ್ಗ ತಾಲ್ಲೂಕಿನ 38 ಗ್ರಾಮ ಪಂಚಾಯಿತಿಗಳ 727 ಸದಸ್ಯ ಸ್ಥಾನಗಳು, ಹೊಸದುರ್ಗ ತಾಲ್ಲೂಕಿನ 33 ಗ್ರಾಮ ಪಂಚಾಯಿತಿಗಳ 533 ಸದಸ್ಯ ಸ್ಥಾನಗಳು, ಹೊಳಲ್ಕೆರೆ ತಾಲ್ಲೂಕಿನ 29 ಗ್ರಾಮ ಪಂಚಾಯಿತಿಗಳ493 ಸದಸ್ಯ ಸ್ಥಾನಗಳು, ಹಿರಿಯೂರು ತಾಲ್ಲೂಕಿನ 33 ಗ್ರಾಮಪಂಚಾಯಿತಿಗಳ 590 ಸದಸ್ಯ ಸ್ಥಾನಗಳು, ಚಳ್ಳಕೆರೆ ತಾಲ್ಲೂಕಿನ 40 ಗ್ರಾಮ ಪಂಚಾಯಿತಿಗಳ 755 ಸದಸ್ಯ ಸ್ಥಾನಗಳಿಗೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನ 16 ಗ್ರಾಮ ಪಂಚಾಯಿತಿಗಳ 323 ಸದಸ್ಯ ಸ್ಥಾನಗಳು ಸೇರಿದಂತೆ ಒಟ್ಟು 189 ಗ್ರಾಮ ಪಂಚಾಯಿತಿಗಳ 3421 ಸದಸ್ಯ ಸ್ಥಾನಗಳಿಗೆ ಚುನಾವಣೆ ಷೋಷಣೆಯಾಗಿತ್ತು. ಇದರಲ್ಲಿ ಚಿತ್ರದುರ್ಗ ತಾಲ್ಲೂಕಿನ 1 ಸದಸ್ಯ ಸ್ಥಾನಕ್ಕೆ ನಾಮ ಪತ್ರ ಸಲ್ಲಿಕೆಯಾಗಿರುವುದಿಲ್ಲ.347 ಸದಸ್ಯರು ಅವಿರೋಧ ಆಯ್ಕೆ: ಜಿಲ್ಲೆಯ ಆರು ತಾಲ್ಲೂಕುಗಳಿಂದ ಒಟ್ಟು 347 ಗ್ರಾಮ ಪಂಚಾಯಿತಿ ಸದಸ್ಯರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚಿತ್ರದುರ್ಗ 92, ಹೊಸದುರ್ಗ 35, ಹೊಳಲ್ಕೆರೆ 31, ಮೊಳಕಾಲ್ಮುರು 31, ಚಳ್ಳಕೆರೆ 68, ಹಿರಿಯೂರು 90 ಸದಸ್ಯರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 347 ಸದಸ್ಯರು ಅವಿರೋಧ ಆಯ್ಕೆ ನಡೆದಿದೆ.3073 ಸದಸ್ಯರು ಮತದಾನ ನಂತರ ಆಯ್ಕೆ: 3073 ಸದಸ್ಯರು ಮತದಾನ ನಂತರ ಆಯ್ಕೆಯಾಗಿದ್ದಾರೆ. ಚಿತ್ರದುರ್ಗ 634, ಹೊಸದುರ್ಗ 498, ಹೊಳಲ್ಕೆರೆ 462, ಮೊಳಕಾಲ್ಮುರು 292, ಚಳ್ಳಕೆರೆ 687, ಹಿರಿಯೂರು 500 ಸದಸ್ಯರು ಸೇರಿದಂತೆ ಮತದಾನದ ನಂತರ ಒಟ್ಟು ಜಿಲ್ಲೆಯಲ್ಲಿ 3073 ಸದಸ್ಯರು ಆಯ್ಕೆಯಾಗಿದ್ದಾರೆ.ಚುನಾಯಿತ ಸದಸ್ಯರ ವರ್ಗವಾರು ವಿವರ: 3420 ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿದ್ದು, ಅನುಸೂಚಿತ ಜಾತಿಯಲ್ಲಿ ಸಾಮಾನ್ಯ 376, ಮಹಿಳೆ 482 ಸೇರಿ 858, ಅನುಸೂಚಿತ ಪಂಗಡದಲ್ಲಿ ಸಾಮಾನ್ಯ 282, ಮಹಿಳೆ 403 ಸೇರಿ 685, ಬಿಸಿಎಂ ಎ ವರ್ಗದಲ್ಲಿ ಸಾಮಾನ್ಯ 72, ಮಹಿಳೆ 170 ಸೇರಿ ಒಟ್ಟು 242, ಬಿಸಿಎಂ ಬಿ ವರ್ಗದಲ್ಲಿ ಸಾಮಾನ್ಯ 44, ಮಹಿಳೆ 8 ಸೇರಿ ಒಟ್ಟು 52 ಸದಸ್ಯರು, ಸಾಮಾನ್ಯ 890, ಮಹಿಳೆ 693 ಸೇರಿ ಒಟ್ಟು 1583 ಸದಸ್ಯರು ಆಯ್ಕೆಯಾಗಿದ್ದಾರೆ. ಚಿತ್ರದುರ್ಗ ತಾಲ್ಲೂಕಿನ ಸುಲ್ತಾನಿಪುರ ಕ್ಷೇತ್ರದಲ್ಲಿ ಅನುಸೂಚಿತ ಜಾತಿ ಮಹಿಳೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಪರಿಶೀಲನೆ ವೇಳೆ ನಾಮಪತ್ರ ತಿರಸ್ಕೃತವಾಗಿವಿರುವುವದರಿಂದ ಈ ಸ್ಥಾನಕ್ಕೆ ಆಯ್ಕೆ ಆಗಿರುವುದಿಲ್ಲ.