ಗ್ರಾಮ ಪಂಚಾಯಿತಿ ಚುನಾವಣೆ ಅಧಿಕಾರಿಗಳ ದುರ್ಬಳಕೆ ಅಭಯಚಂದ್ರ ಜೈನ್ ಆರೋಪ

ಮೂಡಬಿದರೆ, ಡಿ.೧೯- ಮೂಡಬಿದರೆ ಗ್ರಾಮ ಪಂಚಾಯತ್ ಚುನಾವಣೆ ಯು ಹತ್ತಿರ ಬರುತ್ತಿದ್ದಂತೆ ಪಕ್ಷಗಳ ಅಬ್ಬರದ ಪ್ರಚಾರವು ಕಂಡುಬರುತ್ತಿದ್ದು ಇತ್ತ ಅಭಯಚಂದ್ರ ಜೈನ್ ಅವರು ಚುನಾವಣಾ ಅಧಿಕಾರಿಗಳನ್ನು ಬಿಜೆಪಿಯವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪವನ್ನು ಮಾಡಿದ್ದಾರೆ.
ಇಂದು ಮೂಡಬಿದರೆ ಪ್ರೆಸ್ ಕ್ಲಬ್ಬಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣಾ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಕೆಲವು ಕಾಂಗ್ರೆಸ್ ಬೆಂಬಲಿತ ಸದಸ್ಯರು ನಾಮಪತ್ರ ತಿರಸ್ಕರಿಸುವಂತೆ ಮಾಡಿ ಅಧಿಕಾರಿಗಳನ್ನು ಮೇಲೆ ಒತ್ತಡವನ್ನು ಹಾಕುತ್ತಿರುವುದು ಕಂಡುಬರುತ್ತಿದ್ದು ಈ ರೀತಿ ಚುನಾವಣೆ ನಡೆಸಿದರೆ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹವನ್ನು ಮಾಡುತ್ತೇವೆ ಎಂದು ಎಚ್ಚರಿಸಿದರು.
ವೋಟರ್ ಲಿಸ್ಟ್ ನಲ್ಲಿ ಗೊಂದಲಗಳಿದ್ದು, ನಿಷ್ಪಕ್ಷ ವಾಗಿ ಚುನಾವಣೆ ನಡೆಯುತ್ತದೆ ಎಂಬ ನಂಬಿಕೆ ಇಲ್ಲದಂತಾಗಿದೆ, ಸರಕಾರದ ಪೊಳ್ಳು ಭರವಸೆ ಇಂದ ಹಾಗೂ ಮೂಡಬಿದರೆಯಲ್ಲಿ ನಡೆಯುತ್ತಿರುವ ಮರಳು ದಂಧೆ, ಜುಗಾರಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ.
ಬ್ಯಾಂಕುಗಳನ್ನು ಏಕೀಕರಣ ಮಾಡಿ ಜನಸಾಮಾನ್ಯರನ್ನು ಬ್ಯಾಂಕಿನಿಂದ ದೂರ ಇಡುವ ಪ್ರಯತ್ನವಾಗಿದೆ. ವಿಧವಾ ವೇತನ ವೃದ್ಧಾಪ್ಯ ವೇತನ, ಅಂಗವಿಕಲ ವೇತನ ಸರಿಯಾದ ಸಮಯಕ್ಕೆ ಸಿಗದಿರುವುದರಿಂದ ಜನಸಾಮಾನ್ಯರು ತೊಂದರೆ ಅನುಭವಿಸಿದ್ದಾರೆ ಬಿಜೆಪಿಯ ಪೊಳ್ಳು ಭರವಸೆ ಗಳು ಭಾಷಣಕ್ಕೆ ಮಾತ್ರ ಸೀಮಿತವಾಗಿದೆ. ಎರಡು ಲಕ್ಷ ಕೋಟಿ ಘೋಷಣೆಯಾಗಿತ್ತು ಆದರೆ ಜನಸಾಮಾನ್ಯರಿಗೆ ಅದು ಸಿಗಲಿಲ್ಲ ಎಂದರು.