ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಚಾಚಾ ನೆಹರೂ ದಿನಾಚರಣೆ

ಗುರುಮಠಕಲ್:ನ.16:ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಗ್ರಾಮ ಪಂಚಾಯಿತಿ ಗ್ರಾಥಲಯ ಚಂಡರಿಕಿ ಯಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು. ಆದುನಿಕ ಭಾರತ ನಿರ್ಮತೃ ಪಂಡಿತ ಜವಾಹರಲಾಲ್ ನೆಹರು ಅವರಿಗೆ ಮಕ್ಕಳು ಎಂದರೆ ಬಹಾಳ ಪ್ರೀತಿ ಆದುದರಿಂದ ಅವರ ಹುಟ್ಟು ಹಬ್ಬವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸುತ್ತಾರೆ. ಈ ದೇಶ ಕಂಡ ದಕ್ಷ ಆಡಳಿತಗಾರ ತಮ್ಮ ಜೀವನದುದ್ದಕ್ಕೂ ಅದನ್ನು ಸಮರ್ಥಿಸಿ ಕೊಂಡೇ ಬಂದಿದ್ದರು ವ್ಯಕ್ತಿ ಸ್ವಾತಂತ್ರ್ಯ ಮತ್ತು ಗೌರವಾನಿತ್ವ ವ್ಯಕ್ತಿಗಳ ಬಗ್ಗೆ ನಿಷ್ಠೆ ಯುಳವರಾಗಿರಾಗಿದ್ದ ಅವರು ಸಂವಿಧಾನ ಬದ್ದ ಮೂಲಭೂತ ಹಕ್ಕು ಮತ್ತು ನ್ಯಾಯಾಂಗ ಸ್ವಾತಂತ್ರ್ಯ ಗಳಿಗೆ ವಿಶೇಷ ಮನ್ನಣೆ ನಿಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ತಾಲೂಕು ನೌಕರರ ಸಂಘದ ಅಧ್ಯಕ್ಷ ರಾದ ನಾರಾಯಣ ರೆಡ್ಡಿ ಪೆÇಲೀಸ್ ಪಾಟೀಲ್ ಅವರು ಮಾತನಾಡಿ ಇಂತಹ ಒಬ್ಬ ಆದರ್ಶ ನಾಯಕತ್ವ ಗುಣಗಳನ್ನು ಹೊಂದಿರುವ ಒಬ್ಬ ಆದರ್ಶ ನಾಯಕ ಅವರು ಜನಿಸಿದ್ದು 1889 ನವಂಬರ್ 14 ರಂದು ಅಲಹಾಬಾದ್ ನ ಆಗರ್ಭ ಶ್ರೀಮಂತ ಮನೆತನದಲ್ಲಿ ತಂದೆ ಮೋತಿಲಾಲ್ ನೇಹರು ತಾಯಿ ಸ್ವರೂಪರಾಣಿ. ಕಾಶ್ಮೀರ ಬ್ರಾಹ್ಮಣ ಮನೆತನದವರಾದ ನೆಹರೂ ಅವರ ಬಾಲ್ಯ ಅರಮನೆಯಂತ್ತಿದ್ದ ಆನಂದ ಭವನದಲ್ಲಿ ಕಳೆಯಿತು. .ಮೊದಲಿಗೆ . 1914 ರ ಸಮಯದಲ್ಲಿ ಗಾಂಧೀಜಿಯವರು ಭಾರತದ ರಾಜಕೀಯ ಕ್ಷೇತ್ರದ ಭಾರತದ ಭಾರತದ ಸ್ವಾತಂತ್ರ್ಯ ಚಳುವಳಿಗೆ ಧುಮುಕಲು ಉತ್ಸುಕರಾಗಿದ್ದಾರು ನಮ್ಮ ದೇಶ ಭಾರತದ ಮೊಟ್ಟ ಮೊದಲ ಪ್ರದಾನ ಮಂತ್ರಿ ಯಾಗಿ ಸಕ್ರಿಯವಾಗಿ ರಾಜಕೀಯಕ್ಕೆ ಧುಮುಕಿದರು. ಗಾಂಧೀಜಿ ಯವರ ಮಾನಸ ಪುತ್ರರೆಂದು ಕರೆಯಲಾಗಿದ್ದ ಅವರು 1964 ರ ಮಏ27 ರಂದು ಅವರು ಹೃದಯಾಘಾತಕ್ಕೆ ಒಳಗಾಗಿ ಕೊನೆ ಉಸಿರೆಳೆದರು ಅವರು ಪಾರ್ಥಿವ ಶರೀರವನ್ನು ದೆಹಲಿಯ ರಾಜಘಟ್ ನಲ್ಲಿರುವ ಗಾಂಧೀಜಿ ಸಮಾಧಿ ಹತ್ತಿರದಲ್ಲೇ ಸಮಾಧಿ ಮಾಡಲಾಯಿತು ಎಂದು ಹೇಳಿದರು. ಮಕ್ಕಳೆಂದರೆ ಅತೀವ ಪ್ರೀತಿ ತೋರಿದ್ದ ನೇಹರು ಅವರು ಜನ್ಮ ದಿನವಾದ ನವೆಂಬರ್ 14 ನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗಿದೆ ಇವರ ಒಂದು ಅವಿಸ್ಮರಣೀಯ ನೆನಪಿಗಾಗಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡ ಮೇಧಾವಿ ನುರಿತ ಆಡಳಿತಗಾರರು ಎಂದು ಹೇಳಿದರು ಈವೇಳೆ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಗ್ರಂಥಾಪಲಕ ರಾದ ಪಿ. ಭೀಮಶಪ್ಪ ಅವರು ತಮ್ಮದೆ ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ಕಿರು ಕಾಣಿಕೆ ನೀಡಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಚಂಡರಿಕಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳು ಕಿಷ್ಟರೆಡ್ಡಿ ಹಾಗೂ ಗ್ರಂಥ ಪಾಲಕರಾದ ಪಿ. ಭೀಮಶಪ್ಪ. ಕಾರ್ಯಕ್ರಮದ ಸ್ವಾಗತ ಮತ್ತು ನಿರೂಪಣೆಯನ್ನು ಅತಿಥಿ ಶಿಕ್ಷಕರಾದ ಮಲ್ಲಯ್ಯ ಕಲಾಲ್ ಅವರು ನಡೆಸಿಕೊಟ್ಟರು. ಶಾಲಾ ಮಕ್ಕಳು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.