ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆ:ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ನಿಗದಿಗೆ ದಿನಾಂಕ ನಿಗದಿ

ಕಲಬುರಗಿ,ಜೂ.9:ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆ-2020ರ ಮೊದಲನೇ ಅವಧಿಯ ಗ್ರಾಮ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ ಅಧಿಕಾರದ ಅವಧಿ ಮುಗಿದಿರುವ ಕಾರಣ ಎರಡನೇ ಅವಧಿಯ ಗ್ರಾಮ ಪಂಚಾಯತಿವಾರು ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ನಿಗದಿ ಮಾಡಲು ದಿನಾಂಕ ನಿಗದಿಪಡಿಸಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಆದೇಶಿಸಿದ್ದಾರೆ.
ಕಲಬುರಗಿ ತಾಲೂಕಿನ 28, ಆಳಂದ ತಾಲೂಕಿನ 42, ಅಫಜಲಪೂರ ತಾಲೂಕಿನ 28, ಜೇವರ್ಗಿ ತಾಲೂಕಿನ 25, ಸೇಡಂ ಮತ್ತು ಚಿತ್ತಾಪೂರ ತಾಲೂಕಿನ ತಲಾ 27, ಚಿಂಚೋಳಿ ತಾಲೂಕಿನ 29, ಕಮಲಾಪೂರ ತಾಲೂಕಿನ 18, ಕಾಳಗಿ ತಾಲೂಕಿನ 17, ಶಹಾಬಾದ ತಾಲೂಕಿನ 4 ಹಾಗೂ ಯಡ್ರಾಮಿ ತಾಲೂಕಿನ 16 ಸೇರಿ ಜಿಲ್ಲೆಯ 246 ಗ್ರಾಮ ಪಂಚಾಯತಿಗಳ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆ ಮೀಸಲಾತಿ ನಿಗದಿಪಡಿಸಬೇಕಾಗುತ್ತದೆ.
ಮಿಸಲಾತಿಗೆ ತಾಲೂಕುವಾರು ನಿಗದಿಪಡಿಸಿದ ದಿನಾಂಕ, ಸಮಯ ಹಾಗೂ ಸ್ತಳದ ವಿವರ ಹೀಗಿದೆ. ಕಲಬುರಗಿ: ಜೂನ್ 16 ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ. ಕಮಲಾಪೂರ: ಜೂನ್ 16 ರಂದು ಮಧ್ಯಾಹ್ನ 3 ಗಂಟೆಗೆ ಕಮಲಾಪೂರ ಪಟ್ಟಣದ ಹೋಕಳಿ ರಸ್ತೆಯಲ್ಲಿರುವ ಆಕೃತಿ ಕಲ್ಯಾಣ ಮಂಟಪ. ಚಿತ್ತಾಪೂರ: ಜೂನ್ 17 ರಂದು ಬೆಳಿಗ್ಗೆ 11 ಗಂಟೆಗೆ ಚಿತ್ತಾಪೂರ ಪಟ್ಟಣದ ಶಹಾಬಾದ ರಸ್ತೆಯಲ್ಲಿರುವ ಕಿಂಗ್ ಪ್ಯಾಲೇಸ್ ಫಂಕ್ಷನ್ ಹಾಲ್. ಕಾಳಗಿ: ಜೂನ್ 17 ರಂದು ಮಧ್ಯಾಹ್ನ 3 ಗಂಟೆಗೆ ಕಾಳಗಿ ಪಟ್ಟಣದ ಕಾಳೇಶ್ವರ ದೇವಸ್ಥಾನದ ಕಾಳೇಶ್ವರ ಕಲ್ಯಾಣ ಮಂಟಪ. ಚಿಂಚೋಳಿ: ಜೂನ್ 19 ರಂದು ಬೆಳಿಗ್ಗೆ 11 ಗಂಟೆಗೆ ಚಿಂಚೋಳಿ ಪಟ್ಟಣದ ಸಿ.ಬಿ.ಪಾಟೀಲ ಡಿಗ್ರಿ ಕಾಲೇಜು. ಸೇಡಂ: ಜೂನ್ 19 ರಂದು ಮಧ್ಯಾಹ್ನ 3 ಗಂಟೆಗೆ ಸೇಡಂ ಪಟ್ಟಣದ ಸುವರ್ಣ ಸೌಧ ಕಟ್ಟಡದಲ್ಲಿ. ಜೇವರ್ಗಿ: ಜೂನ್ 20 ರಂದು ಬೆಳಿಗ್ಗೆ 11 ಗಂಟೆಗೆ ಜೇವರ್ಗಿ ಪಟ್ಟಣದ ಭೂತಪೂರ ಕಲ್ಯಾಣ ಮಂಟಪ. ಯಡ್ರಾಮಿ: ಜೂನ್ 20 ರಂದು ಮಧ್ಯಾಹ್ನ 3 ಗಂಟೆಗೆ ಯಡ್ರಾಮಿ ಪಟ್ಟಣದ ಕಲ್ಯಾಣಿ ಕಾಂಪ್ಲೆಕ್ಸ್‍ನಲ್ಲಿರುವ ಕಲ್ಯಾಣಿ ಕಲ್ಯಾಣ ಮಂಟಪ. ಆಳಂದ: ಜೂನ್ 21 ರಂದು ಬೆಳಿಗ್ಗೆ 11 ಗಂಟೆಗೆ ಆಳಂದ ಪಟ್ಟಣದ ಗುರು ಭವನದಲ್ಲಿ. ಅಫಜಲಪೂರ: ಜೂನ್ 21 ರಂದು ಮಧ್ಯಾಹ್ನ 3 ಗಂಟೆಗೆ ಅಫಜಲಪೂರ ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್ ಹಾಗೂ ಶಹಾಬಾದ: ಜೂನ್ 22 ರಂದು ಬೆಳಿಗ್ಗೆ 11 ಗಂಟೆಗೆ ಶಹಾಬಾದ ಪಟ್ಟಣದ ಗಂಗಮ್ಮ ಮರಗೋಳ ಕಾಲೇಜಿನಲ್ಲಿ.
ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮೀಸಲಾತಿ ಆಯ್ಕೆ ಸುಸೂತ್ರವಾಗಿ ನಡೆಯಲು ನಿಗದಿಪಡಿಸಿದ ಸ್ಥಳದಲ್ಲಿ ಎಲ್ಲಾ ಮೂಲಸೌಕರ್ಯ ಒದಗಿಸಬೇಕು. ಆಯ್ಕೆ ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಹೊರತುಪಡಿಸಿ ಇನ್ನಿತರೆ ವ್ಯಕ್ತಿಗಳ ಬಾರದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲೆಯ ಎಲ್ಲಾ ತಾಲೂಕಿನ ತಹಶೀಲ್ದಾರರು ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.