(ಅರುಣಕುಮಾರ ಬಿ. ಹೂಗಾರ)
ಅಫಜಲಪುರ:ಜೂ.21: ರಾಜ್ಯ ವಿಧಾನಸಭೆ ಚುನಾವಣೆಯ ಕಾವು ಆರುವ ಮುನ್ನವೇ ಇದೀಗ ಗ್ರಾಮ ಆಡಳಿತದ ಕುರ್ಚಿಗಾಗಿ ಚುನಾವಣೆ ನಡೆಯಲಿದೆ.
ತಾಲೂಕಿನ 28 ಗ್ರಾಪಂಗಳ 2ನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಇಂದು ಜೂ.21 ರಂದು ಮೀಸಲು ನಿಗದಿ ಆಗಲಿದೆ.
ನಿಗದಿಯಾದ ನಂತರ ಗ್ರಾಮಗಳಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಳ್ಳಲಿದೆ. ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಯ ಒಂದೆರಡು ದಿನಗಳ ಮುಂಚೆಯೇ ಕೆಲ ಗ್ರಾಪಂಗಳಲ್ಲಿ ಸದಸ್ಯರನ್ನು ಒಂದೆಡೆ ಕರೆದೊಯ್ಯುವ ಪ್ರಯತ್ನಗಳೂ ನಡೆದಿದೆ. ಅಧಿಕಾರದ ಗದ್ದುಗೆ ಹಿಡಿಯಲು ಸ್ವಾಭಿಮಾನದ ಪ್ರತಿಷ್ಠೆಯ ಒಳ ಬೀಳುವ ಕೆಲ ಆಕಾಂಕ್ಷಿಗಳು, ತಮಗೆ ಬಹುಮತಕ್ಕೆ ಬೇಕಾಗುವಷ್ಟು ಸದಸ್ಯರನ್ನು ಪ್ರವಾಸಕ್ಕೂ ಕರೆದುಕೊಂಡು ಹೋಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಭಾರೀ ಪೈಪೆÇೀಟಿ ಏರ್ಪಟ್ಟಿರುವುದರಿಂದ ಗ್ರಾ.ಪಂ ಸದಸ್ಯರ ಖದರ್ ಈ ಬಾರಿ ತುಸು ಜೋರಾಗಿಯೇ ಇರಲಿದೆ.
ಕೆಲ ಗ್ರಾ.ಪಂ ಗಳಲ್ಲಿ ಸ್ಥಳೀಯ ಪ್ರಭಾವಿ ನಾಯಕರ ಹಿಡಿತ ಇರುವುದರಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಯಾರಾಗಬೇಕೆಂದು ಅವರೇ ನಿರ್ಧರಿಸುವ ಸಂದರ್ಭಗಳನ್ನು ಅಲ್ಲಗಳೆಯುವಂತಿಲ್ಲ.
ಧಾರ್ಮಿಕ ಸ್ಥಳಗಳತ್ತ ಪ್ರವಾಸ:
ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ಬಹುಮತಕ್ಕೆ ಬೇಕಾಗುವಷ್ಟು ಸದಸ್ಯರನ್ನು ಧಾರ್ಮಿಕ ಸ್ಥಳಗಳಿಗೆ ಪ್ರವಾಸಕ್ಕೆಂದು ಕರೆದೊಯ್ಯುವುದು ಸರ್ವೇ ಸಾಮಾನ್ಯ. ಏಕೆಂದರೆ ಧಾರ್ಮಿಕ ಸ್ಥಳಗಳ ಬಗ್ಗೆ ಅಪಾರ ನಂಬಿಕೆ ಇರುವುದರಿಂದ ಅಂತಹ ಸ್ಥಳಗಳಲ್ಲಿ ಆಣೆ, ಪ್ರಮಾಣ ಮಾಡಿಸಿದರೆ ಯಾರೂ ಕೂಡ ಮಾತಿಗೆ ತಪ್ಪಲಾರರು ಎಂಬ ನಂಬಿಕೆ. ಅಲ್ಲದೇ ಯಾರಾದರೂ ಗ್ರಾ.ಪಂ ಸದಸ್ಯರು ಊರಲ್ಲಿ ಉಳಿದುಕೊಂಡರೆ ಅವರ ಬೆಂಬಲವನ್ನು ಬೇರೊಬ್ಬ ಆಕಾಂಕ್ಷಿ ಪಡೆಯಬಹುದೆಂಬ ಅನುಮಾನದಿಂದ ಹೆಚ್ಚಿನ ಹಣ ಖರ್ಚಾದರೂ ಪರವಾಗಿಲ್ಲ ಪ್ರವಾಸಕ್ಕೆ ಕರೆದೊಯ್ಯುವ ದೂರದ ಆಲೋಚನೆ.
ಕುರುಡು ಕಾಂಚಾಣ:
ಮೀಸಲು ನಿಗದಿಯಾದ ನಂತರ ಕುರುಡು ಕಾಂಚಾಣ ಸದ್ದು ಮಾಡಲಿದೆ ಎಂಬ ಸಂಶಯಕ್ಕೂ ಎಡೆ ಮಾಡಿಕೊಟ್ಟಿದೆ. ಆಕಾಂಕ್ಷಿಗಳು ಗ್ರಾಪಂ ಸದಸ್ಯರ ಪ್ರವಾಸದ ಖರ್ಚನ್ನು ಹೊರತುಪಡಿಸಿ ತಲಾ ಒಬ್ಬರಿಗೆ 50 ಸಾವಿರದಿಂದ 1 ಲಕ್ಷ ರೂ. ವರೆಗೆ ಲಕ್ಷ್ಮೀ ಕಟಾಕ್ಷ ಕರುಣಿಸಬೇಕಾಗುತ್ತದೆ. ಬಹುಮತಕ್ಕೆ ಬೇಕಾಗುವಷ್ಟು ಗ್ರಾ.ಪಂ ಸದಸ್ಯರನ್ನು ಹಿಡಿದಿಟ್ಟುಕೊಂಡು ಅಧ್ಯಕ್ಷರಾಗಿ ಆಯ್ಕೆಯಾಗುವವರು ಕನಿಷ್ಠ 5 ರಿಂದ 20 ಲಕ್ಷ ರೂ.ಖರ್ಚು ಮಾಡಬೇಕಾದ ಅನಿವಾರ್ಯತೆಯೂ ಎದುರಾಗಲಿದೆ ಎಂಬುದು ಕೆಲವರ ಮಾತು.
ಜನರಲ್ ಸ್ಥಾನವಿದ್ರೆ ಪೈಪೆÇೀಟಿ ಜಾಸ್ತಿ
ಅಫಜಲಪುರ ತಾಲೂಕಿನಲ್ಲಿ 28 ಗ್ರಾಮ ಪಂಚಾಯಿತಿಗಳಿವೆ. ಅದರಲ್ಲೂ ಮಣ್ಣೂರ, ಚವಡಾಪುರ, ಮಾಶಾಳ, ದೇವಲ ಗಾಣಗಾಪುರ, ಕರಜಗಿ, ಗೊಬ್ಬೂರ(ಬಿ),ಅತನೂರ, ಘತ್ತರಗಾ, ರೇವೂರ(ಬಿ) ಗ್ರಾಪಂಗಳು ಹೈ ವೋಲ್ಟೇಜ್ ಪಂಚಾಯಿತಿಗಳಾಗಿವೆ. ಕಳೆದ ಬಾರಿ ಮಾಶಾಳ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಚುನಾವಣೆಗೆ ಓರ್ವ ಸಿಪಿಐ, ಮೂರು ಜನ ಪಿಎ???, 50 ಕ್ಕೂ ಪೆÇಲೀಸರ ಭದ್ರತೆ ಒದಗಿಸಲಾಗಿತ್ತು. ಇದರಿಂದಾಗಿ ಇಡೀ ಜಿಲ್ಲೆಯ ರಾಜಕೀಯ ಮುಖಂಡರ ಕಣ್ಣು ಈ ಗ್ರಾಪಂ ಮೇಲೆ ಇತ್ತು. ಅದಲ್ಲದೇ ಇವತ್ತು ಮೀಸಲಾತಿ ಘೋಷಣೆ ಇರುವುದರಿಂದ ಆಕಾಂಕ್ಷಿಗಳು ತಮಗೆ ಅನುಕೂಲವಾಗುವ ಮೀಸಲಾತಿ ಬರಬೇಕೆಂದು ದೇವರ ಮೊರೆ ಹೋಗಿದ್ದಾರೆ.
ಗ್ರಾ.ಪಂ ನ 2ನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಮ್ಮ ತಂಡದಲ್ಲಿ ತಲಾ ಎರಡೆರಡು ಆಕಾಂಕ್ಷಿಗಳಾಗಿದ್ದಾರೆ. ಇವತ್ತು ಮೀಸಲಾತಿ ಘೋಷಣೆಯಾದ ನಂತರ ನಮ್ಮ ತಂಡದ ಜೊತೆಗೆ ಚುನಾವಣೆಯ ದಿನಾಂಕದವರೆಗೆ ಗೋವಾ, ದಾಂಡೇಲಿ ಹಾಗೂ ಧಾರ್ಮಿಕ ಸ್ಥಳಗಳಿಗೆ ಪ್ರವಾಸ ಕೈಗೊಳ್ಳಲಿದ್ದೇವೆ.
-ಹೆಸರು ಹೇಳಲು ಇಚ್ಛಿಸದ ಗ್ರಾಪಂ ಸದಸ್ಯರು.