ಗ್ರಾಮ ಪಂಚಾಯತಿ ಯುವ ಸದಸ್ಯರು ಗ್ರಾಮಗಳ ಅಭಿವೃದ್ದಿಗೆ ಶ್ರಮೀಸಲಿ

ಮುದ್ದೇಬಿಹಾಳ:ಜ.9: ಕಳೆದ ಬಾರಿಗಿಂತ ಈ ಬಾರಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತರಾಗಿದ್ದು ಗ್ರಾಮಗಳ ಸರ್ವಾಂಗೀಣ ಅಭಿವೃದ್ದಿ ಯುವಕರಿಂದ ಮಾತ್ರ ಸಾದ್ಯವಿದ್ದು ಈ ಬಾರಿ ಗ್ರಾಮ ಪಂಚಾಯತಿಗೆ ನೂತನವಾಗಿ ಆಯ್ಕೆಯಾದ ಯುವ ಸದಸ್ಯರು ಗ್ರಾಮಗಳ ಅಭಿವೃದ್ದಿಗೆ ಶ್ರಮೀಸಬೇಕು ಎಂದು ನ್ಯಾಯವಾದಿ ಅನೀಲ ರಾಠೋಡ ಹೇಳಿದರು.
ತಾಲೂಕಿನ ಕೋಳೂರ ಗ್ರಾಮ ಪಂಚಾಯತಿಗೆ ಕೋಳೂರ ತಾಂಡಾದಿಂದ ಆಯ್ಕೆಯಾದ ವಿಲಾಸ ಸೀತಿಮನಿ ಹಾಗೂ ಸುಜಾತಾ ಚವ್ಹಾಣ ನೂತನ ಸದಸ್ಯರನ್ನು ಸನ್ಮಾನಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯತಿಗಳಲ್ಲಿ ಬ್ರಷ್ಟಾಚಾರ ಮುಕ್ತ ಆಡಳಿತ ನಡೆಸುವಲ್ಲಿ ಯುವಕರ ಪ್ರಮುಖ ಪಾತ್ರವಹಿಸಬೇಕಿದೆ ಬ್ರಷ್ಟಾಚಾರ ರಹಿತ ಆಡಳಿತದಿಂದ ಗ್ರಾಮ ಪಂಚಾಯತಿಗೆ ಬರುವ ಅನುದಾನಗಳು ನೀಜವಾದ ಪಲಾನುಭವಿಗಳಿಗೆ ಲಬಿಸುತ್ತವೆ ಎಂದು ಅವರು ಹೇಳಿದರು.
ಇದೆ ಸಮಯದಲ್ಲಿ ನೂತನವಾಗಿ ತಾಲೂಕಾ ಒಕ್ಕಲೂತನ ಹುಟ್ಟುವಳಿ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಗೋಂಡ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಚಿದಾನಂದ ಸೀತಿಮನಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯತಿಗಳ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಮೂಲ ಸೌಕರ್ಯ ಕಲ್ಪಿಸಿ ಗಾಂಧಿಜಿ ಕನಸಿನಂತೆ ಗ್ರಾಮಗಳ ಅಭಿವೃದ್ದಿಯಾಗಬೇಕು ಎಂದು ಅವರು ಹೇಳಿದರು.