ಗ್ರಾಮ ಪಂಚಾಯತಿ ನೌಕರರಿಗೆ ಕನಿಷ್ಠ ವೇತನ ನಿಗದಿಗೆ ಒತ್ತಾಯಿಸಿ ಪ್ರತಿಭಟನೆ

ವಿಜಯಪುರ, ಜು.14-ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಸಿಐಟಿಯು ಜಿಲ್ಲಾ ಸಮಿತಿ ವತಿಯಿಂದ ಗ್ರಾಮ ಪಂಚಾಯತಿ ನೌಕರರಿಗೆ ಕನಿಷ್ಠ ವೇತನ ನಿಗದಿಗೆ ಒತ್ತಾಯಿಸಿ ಕಾರ್ಮಿಕ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ಭೀಮಶಿ ಕಲಾದಗಿ ಮಾತನಾಡಿ ಗ್ರಾಮ ಪಂಚಾಯತಿ ನೌಕರರಾದ ಕರವಸೂಲಿಗಾರರ ಮತ್ತು ಗುಮಾಸ್ತೆ, ಕ್ಲಾರ್ಕ , ಕ್ಲಾರ್ಕ ಕಂ ಡಾಟಾ ಎಂಟ್ರಿ ಆಪರೇಟರ್ ವಾಟರಮೇನ್ ನೀರು ಗಂಟಿ ಪಂಪ ಆಪರೇಟರ್ ಕಂ ಮೇಕಾನಿಕ ಜವಾನರು ಕಸಗೂಡಿಸುವರು, ಸ್ವಚ್ಚತೆಗಾರರು ದಿನಾಂಕ 5-8-2016 ಸರಕಾರದಿಂದ ಕನಿಷ್ಠ ವೇತನ ನಿಗದಿ ಮಾಡಿ ನೀಡಲಾಗುತ್ತಿದೆ. 5 ವರ್ಷಗಳಿಗೆ ಮೀರಿದ ಅಂತರದಲ್ಲಿ ಕನಿಷ್ಠ ವೇತನ ಪರಿಷ್ಕರಣೆಯಾಗಬೇಕು ಎನ್ನುವುದು ಒಂದು ಶಾಸನಬದ್ದ ಹೊಣೆಯಾಗಿರುತ್ತದೆ. ಈ ಬಗ್ಗೆ ಸರಕಾರಕ್ಕೆ ಮನವಿ ಮತ್ತು ಹೋರಾಟದ ಒತ್ತಾಯದ ಮೇರೆಗೆ ದಿನಾಂಕ 29-11-2021 ರಂದು ಉಲ್ಲೇಖ ಕಾಇ.106/ಎಲ್.ಡಬ್ಲುಎ/2021-22 ಈ ಕರಡಿನಲ್ಲಿ ರೂ. 15,196.72 ವಾಟರಮೇನ್ ನೀರುಗಂಟೆ, ಪಂಪ ಆಪರೇಟರ್ ಕಂ ಮೇಕಾನಿಕ್ ರೂ. 13509.32 ಅಟೆಂಡರ್ ಜವಾನುರುಗಳಿಗೆ 12872/- ಕಸಗೂಡಿಸುವವರಿ ಸ್ವಚ್ಚತಾಗಾರರಿಗೆ ರು. 16019 ಕನಿಷ್ಟ ವೇತನ ಗರಡು ಅಧಿಸೂಚನೆ ಹೊರಡಿಸಿ 2 ತಿಂಗಳ ಒಳಗಾಗಿ ಸಲಹೆ ಆಕ್ಷೇಪಣೆಗಳನ್ನು ಸಲ್ಲಿಸಲಾಗಿತ್ತು. ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕೆಲಸಗಳಲ್ಲಿ ದುಡಿಯುತ್ತಿರುವ ನೌಕರರಿಗೆ ಜೀವನಾವಶ್ಯಕತೆಯ ಆಧಾರದಲ್ಲಿ ಕನಿಷ್ಟ ವೇತನ ನಿಗದಿ ಪಡಿಸಲು ಸರ್ವೊಚ್ಚ ನ್ಯಾಯಾಲಯ ರಫ್ತಕೋಸ ವಿವಾದದಲ್ಲಿ ನೀಡಿದ ತೀರ್ಪನ್ನು ಆದೇಶದ ಎಐಆರ್ 504 ಆಧಾರದಲ್ಲಿ ಕನಿಷ್ಠ ವೇತನವನ್ನು ಲೆಕ್ಕ ಹಾಕಲು ಇರುವ ಶಾಸನಬದ್ದ ಅಂಶಗಳಾದ ಓರ್ವ ದುಡಿಯುವ ವ್ಯಕ್ತಿಗೆ ಬಳಕೆಯ ಯುನಿಟಗಳು ಸರಳ ಚಟುವಟಿಕೆ ನಡೆಸುವ ಸರಾಸರಿ ಭಾರತೀಯ ವಯಸ್ಕರಿಗೆ ಅಕ್ರಾಯ್ಡ ಶಿಫಾರಸ್ಸು ಮಾಡಿರುವ ರೀತಿಯಲ್ಲಿ 2700 ಕ್ಯಾಲೋರಿ ನಿವ್ವಳ ಆಹಾರ ಸೇವನೆಯು ಕನಿಷ್ಟ ಆಹಾರ ಆಗಿರಬೇಕು.
ಜಿಲ್ಲಾ ಅಧ್ಯಕ್ಷ ಅಬ್ದುಲರಜಾಕ ತಮದಡ್ಡಿ ಮಾತನಾಡಿ ಗ್ರಾಮ ಪಂಚಾಯತಿ ನೌಕರರಾದ ಕರವಸೂಲಿಗಾರರು ಕ್ಲಾಕ್ ಕಂ ಡಾಟಾ ಎಂಟ್ರಿ ಅಫರೇಟರಗಳಿಗೆ 38021-86 ವಾರಟಮೇನ್ ನೀರುಗಂಟೆ ಪಂಪ ಆಪರೇಟ್ ಮೆಕಾನಿಕಗಳಿಗೆ 33062-00 ಅಟೆಂಡರ ಜವಾನುಗಳಿಗೆ 28750 ಕಸಗೂಡಿಸುವರು ಸ್ವಚ್ಚತಾಗಾರರಿಗೆ 25000 ರೂ. ನೀಡಬೇಕೆಂದು ದಿನಾಂಕ 27-1-2022 ರಂದು ಅಪರ ಮುಖ್ಯ ಕಾರ್ಯದರ್ಶಿಗಳು ಬೆಂಗಳೂರು ಇವರಿಗೆ ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ. ಕಾನೂನಿನ ಅನ್ವಯ 5 ವರ್ಷಕ್ಕೆ ಅನುಗುಣವಾಗಿ ಗ್ರಾಮ ಪಂಚಾಯತಿ ನೌಕರರಿಗೆ ಕನಿಷ್ಠ ವೇತನ ನಿಗದಿ ಒತ್ತಾಯಿಸಿ ಜಿಲ್ಲೆಯಗ್ರಾಮ ಪಂಚಾಯತಿಗಳಲ್ಲಿ 2016 ರಿಂದ ಕನಿಷ್ಠ ವೇತನ ಜಾರಿ ಮಾಡಿದ ಸರಕಾರದ ಆದೇಶದಂತೆ ವಾರ್ಷಿಕವಾಗಿ ನೌಕರರಿಗೆ ನೀಡಬೇಕಾದ ಕನಿಷ್ಠ ವೇತನ ಮತ್ತು ತುಟ್ಟಿ ಭತ್ಯೆ ನೀಡಿದ ಬಾಕಿ ಉಳಿದುಕೊಂಡಿರುವ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ಗ್ರಾಮ ಪಂಚಾಯತಿಗಳಲ್ಲಿ ದುಡಿದು ನಿವೃತ್ತಿಯಾದ ನೌಕರರಿಗೆ ದರ ನೀಡಲು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ ವಾಲಿಕಾರ, ವಿಠ್ಠಲ ಹೊನಮೊರೆ, ಅಯ್ಯನಗೌಡ ಬಾಗೇವಾಡಿ, ಸುರೇಖಾ ರಜಪೂತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ಶಿವಾನಂದ ಬಿರಾದಾರ ಯಲ್ಲಪ್ಪ ಹಕ್ಕನ್ನವರ, ಗೌಸ ಮುಜಾವರ, ಎಸ್.ಎಂ. ಬಿರಾದಾರ ಕೆ.ಟಿ. ಮಡಿವಾಳರ, ಎಸ್.ಬಿ. ಗಂಗನಶೆಟ್ಟಿ, ಗುಲಾಬ ಹುಸೇನ ಭೀಮಸಿಂಗ ನಾಯಕ, ಅಶೋಕ ಪೂಜಾರಿ, ರಾಜು ಜಾಧವ, ಮಲ್ಲಿಕಾರ್ಜುನ ಕಗ್ಗೋಡ, ಪರಸು ಮಾದರ, ಶಂಕ್ರೆಪ್ಪ ಕೂಡಗಿ ಮತ್ತಿತರರು ಉಪಸ್ಥಿತರಿದ್ದರು.