ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಐದನೇ ಬಾರಿ ಗೆಲವು

ಕಲಬುರಗಿ,ಡಿ.31-ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಇಂಗಳಗಿ ಗ್ರಾಮ ಪಂಚಾಯತಿ ಇಂಗಳಗಿ ಕ್ಷೇತ್ರದಿಂದ ಆಯ್ಕೆಯಾದ ಸುಭಾಶ್ಚಂದ್ರ ಮಲ್ಲಪ್ಪ ಯಾಮೇರ್ ಅವರು ಐದನೇ ಬಾರಿಗೆ ಗ್ರಾಮ ಪಂಚಾಯತಿ ಪ್ರವೇಶಿಸಿದ್ದಾರೆ.
ವಾರ್ಡ್ ನಂಬರ್ 1 ರಿಂದ ಸ್ಪರ್ಧಿಸಿದ್ದ ಯಾಮೇರ್ ಅವರು 150 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಈ ಗೆಲುವಿಗೆ ಜನರ ಪ್ರೀತಿ-ವಿಶ್ವಾಸವೇ ಕಾರಣ ಎಂದು ಪ್ರತಿಕ್ರಿಯಿಸಿದರು.