ಗ್ರಾಮ ಪಂಚಾಯತಿ ಚುನಾವಣೆಎರಡನೇ ಮತದಾನ ಬಹುತೇಕ ಶಾಂತಿಯುತ

ದಾವಣಗೆರೆ. ಡಿ.೨೭; ಗ್ರಾಮ ಪಂಚಾಯತ್ ಎರಡನೇ ಹಂತದ ಚುನಾವಣೆ ದಾವಣಗೆರೆ ಜಿಲ್ಲೆಯ ಹರಿಹರ,ಚನ್ನಗಿರಿ ಹಾಗೂ ನ್ಯಾಮತಿ ತಾಲ್ಲೂಕಿನಲ್ಲಿ ಬೆಳಗ್ಗೆ ಮಂದಗತಿಯಿಂದ ಪ್ರಾರಂಭಗೊಂಡು ನಂತರ ಚುರುಕುಪಡೆಯಿತು.ಇಂದು ಬೆಳಗ್ಗೆ 9 ಗಂಟೆ ವೇಳೆಗೆ ಶೇ 5.41 ರಷ್ಟು ಮತದಾನವಾಗಿದೆ. 11 ಗಂಟೆ ವೇಳೆಯಲ್ಲಿ ಶೇ 18.38 ರಷ್ಟು ಮತದಾನ ಜರುಗಿದೆ.ಮಧ್ಯಾಹ್ನ 1 ಗಂಟೆಯಲ್ಲಿ ಶೇ 42.62 ರಷ್ಟು ಮತದಾನ ನಡೆದಿದೆ.ಮೂರು ತಾಲ್ಲೂಕಿನ 101ಗ್ರಾಮ ಪಂಚಾಯಿತಿಯ 1,112 ಸ್ಥಾನಗಳಿಗೆ ಚುನಾವಣೆ ನಡೆದಿದೆ.ಹರಿಹರದಲ್ಲಿ 55, ಚನ್ನಗಿರಿ 94 ಹಾಗೂ ನ್ಯಾಮತಿಯ 15 ಸ್ಥಾನ ಸೇರಿದಂತೆ ಒಟ್ಟು 164 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.ಉಳಿದಂತೆ ಹರಿಹರ 23, ಚನ್ನಗಿರಿ 61 ಹಾಗೂ ನ್ಯಾಮತಿ 17 ಗ್ರಾಮ ಪಂಚಾಯತಿಗಳಿಗೆ ಇಂದು ಚುನಾವಣೆ ನಡೆದಿದೆ.ಬಹುತೇಕ ಎಲ್ಲಾ ತಾಲ್ಲೂಕಿನಲ್ಲಿ ಶಾತಿಯುತವಾಗಿ ಮತದಾನ ನಡೆದಿದ.ಬಿಗಿ ಬಂದೋಬಸ್ತ್ ದ್ವಿತೀಯ ಹಂತದ ಗ್ರಾಮ ಪಂಚಾಯ್ತಿ ಚುನಾವಣೆ ಪ್ರಯುಕ್ತ  ಚನ್ನಗಿರಿ, ನ್ಯಾಮತಿ ಮತ್ತು ಹರಿಹರ ತಾಲ್ಲೂಕುಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪೊಲೀಸ್ ಅಧೀಕ್ಷಕರವರ ನೇತೃತ್ವದಲ್ಲಿ 01 ಹೆಚ್ಚುವರಿ ಎಸ್ಪಿ,  04ಡಿವೈಎಸ್ಪಿ ,13ಪಿಐ , 35 ಪಿಎಸೈ, 67 ಎಎಸೈ, 685 ಹೆಚ್ಸಿ/ಪಿಸಿ,95ಹೋಮ್ ಗಾರ್ಡ್ಸ್ , 3 ಕೆ ಎಸ್ ಆರ್ ಪಿ ತುಕಡಿ, 06 ಡಿಎಆರ್ ತುಕಡಿಗಳನ್ನು  ನಿಯೋಜಿಸಲಾಗಿತ್ತು.ಬಾಕ್ಸ್ ಮತದಾರರಿಗೆ ಶಾಕ್ಅಭ್ಯರ್ಥಿಗಳ ಚಿಹ್ನೆ ಅದಲು ಬದಲಾದ ಕಾರಣ ಗ್ರಾಮಸ್ಥರು ಮತದಾನ ಮಾಡದಂತೆ ನಿರ್ಧಾರಮಾಡಿದ ಘಟನೆ ಮತ್ತಿಹಳ್ಳಿ ಪಂಚಾಯತಿನ ಒಂದು ಮತ್ತು ಎರಡನೇ ವಾರ್ಡನಲ್ಲಿ ನಡೆದಿದೆ. ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿ ಗ್ರಾಮದಒಂದನೇ ವಾರ್ಡ ಅಭ್ಯರ್ಥಿಯ ಗುರ್ತು ಎರಡನೇ ವಾರ್ಡಗೆ ಎರಡನೇ ವಾರ್ಡ ಅಭ್ಯರ್ಥಿಯ ಗುರ್ತು ಒಂದನೇ ವಾರ್ಡಗೆ ಬಂದಿದೆ.ಇದರಿಂದಾಗಿಎರಡು ವಾರ್ಡಗಳಿಗೆ ಮತದಾನ ಮಾಡದಿರಲು ಮತದಾರರು ನಿರ್ಧಾರ ಮಾಡಿದ್ದರು. ಹಾಗೂಸ್ಥಳಕ್ಕೆ ತಹಶಿಲ್ದಾರರು ಬರುವಂತೆ ಆಗ್ರಹಿಸಿದ ಘಟನೆ ನಡೆಯಿತು. Attachments area