ಗ್ರಾಮ ಪಂಚಾಯತಿ ಚುನಾವಣಾ ಗೆಲುವಿಗೆ ಮಾಟಮಂತ್ರ; ಆತಂಕದಲ್ಲಿ ಮತದಾರ

ಮುದ್ದೇಬಿಹಾಳ;ಡಿ.23: ಚುನಾವಣಾ ಗೆಲುವಿಗೆ ಆಸೆ ಆಮಿಷ ಹೆಂಡ ಸೀರೆ ಹಣ ಹಂಚುವುದನ್ನು ಕೇಳಿದ್ದೇವೆ ನೋಡಿದ್ದೇವೆ ಅದರೆ ಹಡಲಗೇರಿ ಗ್ರಾಮ ಪಂಚಾಯತಿ ಚುನಾವಣೆ ಗೆಲುವಿಗೆ ಮತದಾರರು ಮತಕ್ಕೆ ಭಾನಮತಿ ಮಾಟ ಮಂತ್ರದ ಮೋರೆ ಹೋದ್ರಾ? ಎಂಬ ವದಂತಿ ಗ್ರಾಮದಲ್ಲಿ ಹರದಾಡುತ್ತಿದೆ ಹಡಲಗೇರಿ ವಾರ್ಡ್ ನಂ 2 ರಲ್ಲಿ ಪ್ರತಿ ಮನೆಗಳಿಗೆ ಕುಂಕುಮ ಮಂತ್ರಿಸಿದ ಅಕ್ಕಿ ಕಾಳು ಹಾಕಿದ್ದಾರೆ ಇದು ಸಹಜವಾಗಿ ಜನರಲ್ಲಿ ಆತಂಕ ಮೂಡಿಸಿದೆ ಮತ್ತು ಇದು ಚುನಾವಣಾ ಸಂದರ್ಭದಲ್ಲಿ ಇಂತಹ ಘಟನೆ ನಡೆದಿರುವುದರಿಂದ ಇದು ಚುನಾವಣೆ ಗೆಲ್ಲಲು ಮಾಟ ಮಂತ್ರದ ತಂತ್ರವೆಂದು ಗ್ರಾಮಸ್ಥರು ಮಾತನಾಡುತ್ತಿದ್ದಾರೆ, ಸ್ಥಳಕ್ಕೆ ಪಿ ಎಸ್ ಐ ಮಲ್ಲಪ್ಪ ಮಡ್ಡಿ ಬೇಟಿ ನೀಡಿ ಪರಿಶೀಲಿನೆ ನಡೆಸಿ ಇದು ಮೌಡ್ಯತೆ ಮೂಢನಂಬಿಕೆಯಾಗಿದೆ ಜನರು ಆತಂಕ ಪಡಬಾರದು ಯಾರು ಅಭಿವೃದ್ಧಿ ಪರ ಕೆಲಸ ಮಾಡುತ್ತಾರೆ ಅಂತಹವರಿಗೆ ಜನರು ಮತ ಹಾಕತ್ತಾರೆ ಗ್ರಾಮಸ್ಥರಲ್ಲಿ ಆತಂಕ ದೂರ ಮಾಡುವ ಯತ್ನವನ್ನು ಅವರು ಮಾಡಿದರು ಜನರಲ್ಲಿ ಆತಂಕ ಗೂಂದಲ ಮಾತ್ರ ದೂರವಾಗಿಲ್ಲ.
ಆತಂಕದಲ್ಲಿ ಗ್ರಾಮದ ಜನರು; ಹಡಲಗೇರಿ ವಾರ್ಡ್ ನಂ 2 ರ ಜನರು ಆತಂಕದಲ್ಲಿ ಇದ್ದು ನಮ್ಮ ವಾರ್ಡನಲ್ಲಿ ಮಾತ್ರ ಇಂತಹ ಘಟನೆ ನಡೆದಿರುವುದು ಭಯದ ವಾತಾವರಣ ಮೂಡಿಸಿದೆ ಎಂದು ಮಾತನಾಡಿಕೂಳ್ಳುತ್ತಿದ್ದಾರೆ ಚುನಾವಣಾ ಕಣದ ವಾರ್ಡ್ ನಂ 2 ಅಭ್ಯರ್ಥಿ ಗಳನ್ನು ಜನರು ಈ ಬಗ್ಗೆ ಕೇಳಿದರೆ ನಮಗೆ ಇದಕ್ಕೂ ಸಂಬಂಧ ಇಲ್ಲವೆಂದು ಹೇಳುತ್ತಿದ್ದಾರೆ