ಗ್ರಾಮ ಪಂಚಾಯತಿಯಿಂದ ಹಿರಿಯರಿಗೆ ಪ್ರಶಸ್ತಿ ಪತ್ರ


ಸಂಜೆವಾಣಿ ವಾರ್ತೆ
ಸಿರಿಗೇರಿ ಅ.3. ಸ್ಥಳೀಯ ಗ್ರಾಮ ಪಂಚಾಯತಿ ವತಿಯಿಂದ, ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ, 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರನ್ನು ಗುರುತಿಸಿ, ಸನ್ಮಾನಿಸಿ ಗೌರವಿಸಿ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು. ಗ್ರಾಮದ ಹಿರಿಯ ಮಹಿಳೆ ಅಬಿದಾಬಿ ಗಂಡ ಉಸ್ಮಾನ್ ಸಾಬ್ ಎಂಬುವವರಿಗೆ ಗ್ರಾಮ ಪಂಚಾಯತಿ ಪಿಡಿಒ ರಾಮಪ್ಪ. ಯು. ರವರು ಶಾಲುವೋದಿಸಿ ಹಾರ ಹಾಕಿ ಸನ್ಮಾನಿಸಿ ಗೌರವ ಸಮರ್ಪಿಸಿ ಪ್ರಶಸ್ತಿ ಪತ್ರವನ್ನು ವಿತರಿಸಿದರು. ಇಲ್ಲಿಯವರಗಿನ ತಮ್ಮ ಜೀವಿತಾವಧಿಯಲ್ಲಿ ಹಿರಿಯರು ದೇಶದ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಪ್ರಜಾಪ್ರತಿನಿಧಿಗಳ ಆಯ್ಕೆಯಲ್ಲಿ ತಮ್ಮದೇ ಆದ ನಿಲುವು, ಕಾರ್ಯವಿಧಾನಕ್ಕೆ ಸಾಕ್ಷಿಯಾಗಿರುವ ಹಿನ್ನೆಲೆಯಲ್ಲಿ, ಪ್ರಜಾಪ್ರಭುತ್ವ ನಿರ್ವಹಣೆಯಲ್ಲಿ ಅವರು ನಿರ್ವಹಿಸಿದ ಕಾಳಜಿಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿ ಪ್ರಸಂಸನ ಪತ್ರ ನೀಡುವ ಕೆಲಸ ಗ್ರಾಮ ಪಂಚಾಯತಿ ವತಿಯಿಂದ ನಡೆಸಲಾಯಿತು. ಗ್ರಾ. ಪಂ. ಸಿಬ್ಬಂದಿಯಾದ ಕಾರ್ಯದರ್ಶಿ ವಿರೇಶಗೌಡ, ಬಿ ರುದ್ರೇಶ, ಎಚ್. ಹುಲುಗಪ್ಪ, ಫಯಾಜ್, ನಾಗರಾಜ, ಹುಲೆಪ್ಪ, ಲಿಂಗಪ್ಪ, ಹಾಗೂ ಬಿ.ಅನ್ವರ್ ಬಾಷಾ ಇದ್ದರು.