ಗ್ರಾಮ ದೇವತೆ ಮಾರೆಮ್ಮನ ಜಾತ್ರೆ ಸರಳ ಆಚರಣೆ

ಸಂಡೂರು:ನ:17 : ದೀಪಾವಳಿ ಎಂದಾಕ್ಷಣ ಲಕ್ಷ್ಮೀಪೂಜೆ ಮತ್ತು ಪಟಾಕಿ ಸಿಡಿಸಿ ಸಂಭ್ರಮಿಸುವುದು, ಅದರೆ ತಾಲೂಕಿನ ಐಗಳ ಮಲ್ಲಾಪುರ ಗ್ರಾಮದಲ್ಲಿ ಬಹು ವಿಶೇಷವಾಗಿ ಗ್ರಾಮ ದೇವತೆ ಮಾರೆಮ್ಮನ ಜಾತ್ರೆಯನ್ನು ಕರೋನಾ ಮದ್ಯದಲ್ಲಿಯೇ ಸರಳವಾಗಿ ಆಚರಿಸಿದರು.
ದೀಪಾವಳಿ ಪ್ರಾರಂಭವಾಗುವ ಮೊದಲು ಇಡೀ ಗ್ರಾಮದ ಜನತೆ ತಮ್ಮ ಮನೆಗಳನ್ನು ಸ್ವಚ್ಚಗೊಳಿಸಿ ಸಿಂಗಾರ ಮಾಡುತ್ತಾರೆ, ಇಡೀ ಗ್ರಾಮದ ಜನತೆ ನುತನ ವಸ್ತ್ರಗಳನ್ನು ಧರಿಸಿ ಹಬ್ಬ ಆಚರಣೆ ಪ್ರಾರಂಭಿಸುತ್ತಾರೆ, ಗಂಡು ಮಕ್ಕಳು ಮನೆಗೆ ಬೇಕಾದ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿದರೆ, ಗ್ರಾಮದ ಮುಖಂಡರಾದ ಬಣಕಾರ, ಗುರಿಕಾರ, ಮಠದ ಸ್ವಾಮಿಗಳ ನೇತೃತ್ವದಲ್ಲಿ ಪಂಚಾಯಿತಿ ಸೇರಿ ಇಡೀ ಗ್ರಾಮದ ಎಲ್ಲಾ ಕುಟುಂಬಗಳು ಪ್ರತಿಮನೆಗೆ ದೇಣಿಗೆಯನ್ನು ಸಂಗ್ರಹಿಸಿ ದೇವಸ್ಥಾನಗಳನ್ನು ಬಹು ಸಿಂಗಾರ ಮಾಡುತ್ತಾರೆ, ಗ್ರಾಮದಲ್ಲಿ ಮಾರೆಮ್ಮ ದೇವಿ, ಬಸವೇಶ್ವರನ ದೇವಸ್ಥಾನಗಳ ಅಲಂಕಾರ ನೋಡುಗರ ಮನ ಸೆಳೆಯುತ್ತವೆ, ಹಬ್ಬದ ಸಂಜೆ ಪಟಾಕಿ ಸಿಡಿಸುವ ಮೂಲಕ ಉಪವಾಸ ವೃತದಲ್ಲಿರುವ ಗ್ರಾಮದ ಮಹಿಳೆಯರು ಗಂಗೆಯನ್ನು ತರಲು ಬೆಳಗಿನ ಜಾವ ಮೂರು ಗಂಟೆಗೆ ಕೆರೆಯ ಸಮೀಪದ ಬಾವಿಗೆ ತೆರಳಿ ಗಂಗೆಗೆ ವಿಶೇಷವಾದ ಪೂಜೆಯನ್ನು ಸಲ್ಲಿಸುವ ಮೂಲಕ ಗಂಗೆಯನ್ನು ಅಮವಾಸೆ ಮುಗಿಯುವುದರೊಳಗೆ ದೇವಸ್ಥಾನಕ್ಕೆ ತರುತ್ತಾರೆ, ತರುವ ಸಂದರ್ಭದಲ್ಲಿ ಉರುಮೆಯ ನಾದ ಭಕ್ತ ಮೈನವಿರೇಳುವಂತಾಗುತ್ತದೆ, ಈ ಸಂದರ್ಭದಲ್ಲಿ ಭಕ್ತರು ಸಹ ವಿಶೇಷಪೂಜೆಯನ್ನು ಸಲ್ಲಿಸುವ ಮೂಲಕ ದೇವಿಯನ್ನು ಗ್ರಾಮದ ಎಲ್ಲರೂ ಊರಿನ ಬಾಗಿಲ ಮುಂದೆ ಸ್ವಾಗತಿಸಿ ತಮ್ಮ ಗ್ರಾಮದ ಸಮಸ್ಯೆಯ ಬಗ್ಗೆ ವಿಶೇಷ ಪೂಜೆಯ ಮೂಲಕ ದೇವತೆಯಲ್ಲಿ ಅರಿಕೆ ಮಾಡುತ್ತಾರೆ, ಈ ಸಂದರ್ಭದಲ್ಲಿ ಹೂ ವನ್ನು ಕೊಡುವ ಮೂಲಕ ಗ್ರಾಮದ ಪ್ರಮುಖ ಅಂಶಗಳನ್ನು ಪಡೆದುಕೊಳ್ಳುತ್ತಾರೆ. ನಂತರ ದೇವಿಯ ಗುಡಿಗೆ ಗಂಗೆಯನ್ನು ಪ್ರತಿಷ್ಠಾಪಿಸುವ ಜಾತಮೂಲಕ ಹಬ್ಬದ ಪ್ರಮುಖ ಘಟ್ಟವನ್ನು ಮುಗಿಸುತ್ತಾರೆ.
ಮರುದಿನ ಬೆಳಗಿನ ಜಾವದಿಂದ ಪ್ರತಿ ಮನೆಯಿಂದಲೂ ಸಹ ವಿಶೇಷವಾಗಿ ನೈವೇದ್ಯ, ಕೆಲ ಭಕ್ತರು ಮಡಿ ಹಾಲನ್ನು, ಉಡಿಯನ್ನು ದೇವಿಗೆ ಅರ್ಪಿಸುತ್ತಾರೆ. ನಂತರ ಸಂಜೆಯಾಗುತ್ತಿರುವಂತೆ ಪ್ರತಿ ಮನೆಯಿಂದ ಭಕ್ತರು ಸಂಜೆ ಇಡೀ ಗ್ರಾಮದ ಜನತೆ ಸೇರಿ ಕುಣಿದು ತಮ್ಮ ಎತ್ತುಗಳನ್ನು ಸಿಂಗಾರ ಮಾಡಿ ದೇವಸ್ಥಾನದ ಮುಂಭಾಗಕ್ಕೆ ಬೇವಿನ ಸೊಪ್ಪಿನ ಅಲಂಕಾರದೊಂದಿಗೆ ಅಗಮಿಸಿ ಪೂಜೆ ಸಲ್ಲಿಸುತ್ತಾರೆ.
ಇದಕ್ಕೂ ಪೂರ್ವದಲ್ಲಿ ನೋಪಿ ಗೌರಮ್ಮನ ಪೂಜೆಯನ್ನು ಸಹ ಪ್ರಮುಖವರ್ಗವಾದ ಈಡಿಗರ ಸಮಾಜದ ಬಹಳಷ್ಟು ಕುಟುಂಬಗಳು ಇದರಲ್ಲಿ ಭಾಗವಹಿಸಿ ಲೋಪಿ ಪೂಜೆಯನ್ನು,( ಗೌರಮ್ಮ) ಸಲ್ಲಿಸುವ ಮೂಲಕ ಮನೆಗೆ ತಂದು ತಮ್ಮ ಹಬ್ಬವನ್ನು ಪ್ರಾರಂಭಿಸುತ್ತಾರೆ, ಈ ಸಂದರ್ಭದಲ್ಲಿ ಕೆಲ ಮಹಿಳೆಯರು ತಮ್ಮ ಅರಿಕೆಯನ್ನು ಸಲ್ಲಿಸಲು ಮಡಿಯಿಂದ ಅಗಮಿಸಿ ವಸ್ತ್ರಗಳನ್ನು ಸಮರ್ಪಿಸುತ್ತಾರೆ. ಜಾತ್ರೆಯು ಸಹ ಸಾಗುತ್ತದೆ, ಈ ಸಮಯದಲ್ಲಿ ಗ್ರಾಮದ ಸುತ್ತಲಿನ ಊರುಗಳಾದ ಮೊರಬ, ಚೌಡಾಪುರ, ಅಂಬಲಾಪುರ, ಕ್ಯಾಸನಕೇರಿ, ವಿರುಪಾಪುರ, ಅಮ್ಮನಕೇರಿ, ಸೂಲದಹಳ್ಳಿ ಇತರ ಗ್ರಾಮಗಳಿಂದ ನೂರಾರು ಭಕ್ತರು ಅಗಮಿಸಿ ತಮ್ಮ ಅರಿಕೆಯನ್ನು ಸಲ್ಲಿಸುತ್ತಾರೆ.
ಜಾತ್ರೆಯು ಮುಗಿಯುತ್ತಿದ್ದಂತೆ ಮತ್ತೋಮ್ಮೆ ದೇವಿಯನ್ನು ಗಂಗೆ ತಂದ ಸ್ಥಳಕ್ಕೆ ಸಾಗಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜಾತ್ರೆಯನ್ನ ಅಂತ್ಯಗೊಳಿಸುತ್ತಾರೆ, ಇಡೀ ತಾಲೂಕಿನಲ್ಲಿಯೇ ವಿಶೇಷ ದೀಪಾವಳಿ ಹಬ್ಬವನ್ನು ಆಚರಿಸುವ ಮೂಲಕ ತಮ್ಮ ಹಬ್ಬವನ್ನು ಆಚರಿಸುತ್ತಾರೆ, ಪಟಾಕಿಗಿಂತ ಹೆಚ್ಚಾಗಿ ಆಚರಣೆಗಳ ಮೂಲಕ ಇಡೀ ಗ್ರಾಮದ ಎಲ್ಲಾ ವರ್ಗದ ಜನತೆಯೂ ಸಹ ಭಾಗಿಗಳಾಗಿ ಸಮಾನತೆಯನ್ನು ಸಾರುತ್ತಾರೆ