ಗ್ರಾಮ ಡಿಜಿ ವಿಕಸನ ತರಬೇತಿ ಕಾರ್ಯಕ್ರಮ

ಹನೂರು: ಜು.19:- ಕೊಳ್ಳೇಗಾಲ ಸರ್ಕಾರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಡಿಜಿಲೀಕರಣವನ್ನು ತರುವ ಮೂಲಕ ಕಾರ್ಯರೂಪಕ್ಕೆ ತರಲಾದ ಗ್ರಾಮ ಡಿಜಿ ವಿಕಸನ' ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಯೋಗವಾಗಲಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಿಕ್ಷಣ ಫೌಂಡೇಷನ್ ಜಿಲ್ಲಾ ಸಂಯೋಜಕ ಪುಟ್ಟ ಮಾದಯ್ಯ ತಿಳಿಸಿದರು. ತಾಲೂಕಿನ ಕಾಮಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಡಿಜಿ ವಿಕಸನ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ಕಾರ ಶಿಕ್ಷಣ ಫೌಂಡೇಷನ್ ನೊಂದಿಗೆ ಡಿಜಿಲೀಕರಣಕ್ಕೆ ಒತ್ತು ನೀಡಿದೆ. ಜನರಿಗೆ ತಂತ್ರಾಂಶ ಜ್ಞಾನ ಬಳಕೆಗೆ ಡಿಜಿಟಲ್ ತಂತ್ರಜ್ಞಾನ ಮೊಬೈಲ್ ಗಳಿಂದ ವೃದ್ಧಿಯಾಗಿದೆ. ಗ್ರಾಮೀಣ ಭಾಗದ ಜನರು ಜ್ಞಾನದ ಮೂಲಕ ವ್ಯಕ್ತಿ ವಿಕಸನವಾಗಲು ಪ್ರತಿಯೊಂದು ಗ್ರಾಮಪಂಚಾಯತಿ ಗ್ರಂಥಾಲಯಗಳನ್ನು ಡಿಜಿಟಲೈಸ್ ಮಾಡಲಾಗಿದೆ. ಗ್ರಾಮೀಣ ಜನರಿಗೆ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ, ಡಿಜಿಟಲೀಕರಣದ ಜ್ಞಾನ ನೀಡುವ ಗುರಿಯನ್ನು ಈ ತಂತ್ರಾಂಶ ವಾಹಿನಿಯ ಮೂಲಕ ಸಾಧಿಸಲಾಗುವುದು. ಈ ನಿಟ್ಟಿನಲ್ಲಿಗ್ರಾಮ ಡಿಜಿ ವಿಕಸನ’ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಗ್ರಾಮೀಣ ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಡಿಜಿಟಲ್ ಸಾಧನೆಗಳ ಬಗ್ಗೆ ಕೌಶಲ್ಯ ಬಗ್ಗೆ ತರಬೇತಿ ನೀಡುವ ಉದ್ದೇಶದಿಂದ ಗ್ರಾಮ ಡಿಜಿ ವಿಕಸನ ಕೌಶಲ್ಯಾಭಿವೃದ್ಧಿ ತರಬೇತಿ ಸಂಬಂಧಿಸಿದಂತೆ ಪ್ರತಿಭಾನ ಭಾನುವಾರ ನಿಮ್ಮ ಗ್ರಂಥಾಲಯ ಕಚೇರಿಯಲ್ಲಿ ತರಬೇತಿಯನ್ನು ಕೊಡಲಾಗುತ್ತದೆ ವಿದ್ಯಾರ್ಥಿಗಳು ಹೆಚ್ಚಾಗಿ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ, ಕೊಂಗಹಳ್ಳಿ ಗ್ರಂಥಾಲಯ ಮೇಲ್ವಿಚಾರಕ ನಂದೀಶ್, ಪತ್ರಕರ್ತ ಪ್ರಕಾಶ್ ಕಾಮಗೆರೆ ಹಾಗೂ ಸಂಜಯ್, ಕೆಎಂ.ಸತೀಶ್, ಬೈರ, ತ್ರಿನೇತ್ರ, ಪರಮೇಶ್, ಶಿವಕುಮಾರ್, ಭುವನ್ ಕುಮಾರ್, ಕವನ್ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.