ಗ್ರಾಮ ಘಟಕಗಳ ಕಾರ್ಯಕ್ರಮ ಉದ್ಘಾಟನೆ

(ಸಂಜೆವಾಣಿ ವಾರ್ತೆ)
ನವಲಗುಂದ,ಡಿ2 : ಕನ್ನಡವೇ ನಮ್ಮ ಧರ್ಮ, ಕನ್ನಡವೇ ನಮ್ಮ ಜಾತಿ, ಕನ್ನಡವೇ ನಮ್ಮ ಬದುಕು ಎಂಬ ಧೈಯವನ್ನಿಟ್ಟುಕೊಂಡು ಜಯಕರ್ನಾಟಕ ಜನಪರ ವೇದಿಕೆಯು ಹೋರಾಟಗಳ ಮೂಲಕ ಕನ್ನಡಿಗರ ಆಶಾಕಿರಣವಾಗಿದೆ ಎಂದು ಶಾಸಕ ಎನ್ ಎಚ್ ಕೋನರಡ್ಡಿ ಹೇಳಿದರು.

ಅವರು ಜಯಕರ್ನಾಟಕ ಜನಪರ ವೇದಿಕೆಯಿಂದ ಹಮ್ಮಿಕೊಂಡಿದ್ದ ಗ್ರಾಮ ಘಟಕಗಳ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ನಾಡು ನುಡಿ ಮತ್ತು ಭಾಷೆಗೆ ಗಂಡಾಂತರ ಬಂದಾಗ ಪ್ರತಿಯೊಬ್ಬ ಕನ್ನಡಿಗರೂ ಸೆಟೆದು ನಿಲ್ಲಬೇಕು ಇದು ಜಯಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರಿಗೆ ಮಾತ್ರ ಸೀಮಿತವಾಗಿಲ್ಲ ನಾಡಿನ ಎಲ್ಲ ಕನ್ನಡಿಗರಿಗೂ ಸೀಮಿತ ಎಂದರು

ಶ್ರೀ ಜಗದ್ಗುರು ಅಜಾತ ನಾಗಲಿಂಗಮಠದ ವೀರೇಂದ್ರ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿದ ಅವರು ಕನ್ನಡಪರ ಸಂಘಟನೆಗಳಿಂದ ನವಂಬರ್ ತಿಂಗಳ್ಳಲ್ಲಿಯೇ ಮಾತ್ರ ಕನ್ನಡ ಪರ ಕಾರ್ಯಕ್ರಮಗಳು ಆಗಬಾರದು ವರ್ಷ ಪೂರ್ತಿ ಕನ್ನಡ ಪರ ಕಾರ್ಯಕ್ರಮಗಳು ನಡೆಯಲಿ.ನೂತನ ಗ್ರಾಮ ಘಟಕದ ಪದಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ನಿಮ್ಮಿಂದಲೂ ಸಹಿತ ಗ್ರಾಮ ಒಳಿತನ್ನು ಬಯಸುವಂತ ಕೆಲಸವಾಗಲಿ ಎಲ್ಲರಿಗೂ ಶುಭವಾಗಲಿ ಎಂದು ಹರಸಿ ಆಶೀರ್ವದಿಸಿದರು.

ತಾಲ್ಲೂಕಾ ಅಧ್ಯಕ್ಷ ಉಮೇಶ ನವಲಗುಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘಟನೆ ಕಟ್ಟುವಾಗ ಸಂಘಟನೆ ದೊಡ್ಡದಾಗಿರಬೇಕೆ ಹೊರತು ಯಾವ ವ್ಯಕ್ತಿಯು ದೊಡ್ಡವನಲ್ಲ. ಎಲ್ಲರೂ ಸಮಾನ ಮನಸ್ಕರಿಂದ ಸಂಘಟನೆ ಕಟ್ಟುವ ಕೆಲಸಕ್ಕೆ ಮುಂದಾಗಬೇಕು. ಜಯಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಶಾಂತಿಯಿಂದ ಎಲ್ಲವನ್ನು ಪಡೆದುಕೊಳ್ಳುವುದರಲ್ಲಿ ಗ್ರಾಮ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಮುಂದಾಗಬೇಕು ಎಂದರು

ಎಸ್ ಬಿ ಪಾಟೀಲ್, ರಘುನಾಥ್ ನಡುವಿನಮನಿ, ನಿಂಗಪ್ಪ ಬಾರಕೇರ, ರಿಯಾಜ ನಾಸಿಪುಡಿ, ಬಸವರಾಜ್ ಬಡಿಗೇರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಪಂಚಗೃಹ ಹಿರೇಮಠದ ಶ್ರೀ ಶಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಶ್ರೀಶೈಲ ಮುಲಿಮನಿ, ರಮೇಶ ನವಲಗುಂದ ಅಬ್ದುಲರಝಾಕ ನದಾಫ್, ಮಹದೇವ ದಂಡಿನ, ಅರುಣಕುಮಾರ ಚಾಕಲಬ್ಬಿ, ಬಸವರಾಜ್ ಜೋಗನ್ನವರ, ಮಹಾಂತಯ್ಯ ಹಿರೇಮಠ, ನಂದಿನಿ ಹಾದಿಮನಿ, ಗಂಗಮ್ಮ ಕೋಟ್ಯಾಳ, ಪ್ರಮಾ ನಾಯಕ, ಕವಿತಾ ಗಾಣಿಗೇರ, ಲಕ್ಷ್ಮಿ ಕೊಟ್ಟೂರ್ ಹಾಗೂ ಪದಾಧಿಕಾರಿಗಳು, ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು

ಕಾರ್ಯಕ್ರಮದ ನಿರೂಪಣೆಯನ್ನು ಬಿ ಎಚ್ ಹೂಗಾರ ನಿರ್ವಹಿಸಿದರು