ಗ್ರಾಮ ಒನ್ ಫ್ರಾಂಚೈಸಿಗಳಿಗೆ ತರಬೇತಿ: ವರಪ್ರಸಾದ್ ರೆಡ್ಡಿ

ಮಂಡ್ಯ.ಮಾ.07:- ಗ್ರಾಮ ಒನ್ ಫ್ರಾಂಚೈಸಿಗಳು 850 ಕ್ಕೂ ಹೆಚ್ಚು ಸೇವೆಗಳನ್ನು ಒದಗಿಸುತ್ತಿದ್ದು, ಗ್ರಾಮೀಣ ಭಾಗದ ಕಟ್ಟ ಕಡೆಯ ವ್ಯಕ್ತಿಗೂ ಯಾವ ರೀತಿ ಸೌಲಭ್ಯ ಒದಗಿಸಬೇಕು ಎಂಬುದರ ಬಗ್ಗೆ ಗ್ರಾಮ ಒನ್ ಯೋಜನಾ ನಿರ್ದೇಶಕ ವರಪ್ರಸಾದ್ ರೆಡ್ಡಿ ಅವರು ತರಬೇತಿ ನೀಡಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಗ್ರಾಮ ಒನ್ ಫ್ರಾಂಚೈಸಿಗಳ ತರಬೇತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮ ಒನ್ ಫ್ರಾಂಚೈಸಿಗಳು ಉತ್ತಮವಾಗಿ ಕೆಲಸವನ್ನು ನಿರ್ವಹಿಸಬೇಕು. ಇನ್ನೂ ಹೆಚ್ಚಿನ ಸೇವೆಗಳನ್ನು ಸರ್ಕಾರದಿಂದ ಗ್ರಾಮ ಒನ್ ಫ್ರಾಂಚೈಸಿಗಳ ಮೂಲಕ ನೀಡಲು ಪ್ರಯತ್ನಿಸಲಾಗುವುದು. ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಯಾವ ರೀತಿ ಕೆಲಸ ನಿರ್ವಹಿಸಬೇಕು ಎಂಬುದರ ವಿವರ ನೀಡಿದರು.
ಹೀಗಾಗಲೇ ಕಂದಾಯ ಇಲಾಖೆಯ ಸಾಕಷ್ಟು ಕೆಲಸಗಳು ಗ್ರಾಮ ಒನ್ ಫ್ರಾಂಚೈಸಿಗಳ ಮೂಲಕವೇ ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪುತ್ತಿವೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು ಅವರು ತಿಳಿಸಿದರು.
ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ರೈತಸಂಪರ್ಕ ಸೇವೆಗಳು, ಸಬ್ ರಿಜಿಸ್ಟರ್ ಕಛೇರಿ ಕೆಲಸಗಳು, ವಿದ್ಯಾರ್ಥಿ ವೇತನದ ಅರ್ಜಿಗಳು, ಮೋಜಣಿ ತಂತ್ರಾಂಶದ ಮೂಲಕ ರೆವಿನ್ಯೂ ಸ್ಕೇಚ್ ಗೆ ಅರ್ಜಿ ಹಾಗೂ ದುರಸ್ತಿ ಅರ್ಜಿಗಳು ಸೇರಿದಂತೆ ಇನ್ನಿತರ ಸೇವೆಗಳನ್ನು ಗ್ರಾಮ ಒನ್ ಫ್ರಾಂಚೈಸಿಗಳ ಮೂಲಕ ಜನ ಸಾಮಾನ್ಯನರ ಮನೆಬಾಗಿಲಿಗೆ ತಲುಪಿಸುವ ಪ್ರಯತ್ನ ಮಾಡುತ್ತೇವೆ ಎಂದರು.
ಜಿಲ್ಲೆಯಲ್ಲಿ ಆಯು?Á?ಮನ್ ಭಾರತ ಪ್ರಧಾನಮಂತ್ರಿ ಜನಾರೋಗ್ಯ ಹೆಲ್ತ್ ಕಾರ್ಡ್ ನೋಂದಣಿಯನ್ನು ಚುರುಕುಗೊಳಿಸಿ ಜನರ ಮನೆ ಬಾಗಿಲಿಗೆ ತಲುಪಿಸಬೇಕು ಎಂದರು.
ಗ್ರಾಮ ಒನ್ ಫ್ರಾಂಚೈಸಿಗಳು ಸೇವೆಗಳು ಜನಸಾಮಾನ್ಯರಿಗೆ ಕಡಿಮೆ ಅವಧಿಯಲ್ಲಿ ತೀಕ್ಷ್ಣವಾಗಿ ತಲುಪಿಸಬೇಕು ಎಂಬ ಉದ್ದೇಶದಿಂದ ತಾಂತ್ರಿಕದೋಷ ಹಾಗೂ ಕಂದಾಯ ಇಲಾಖೆಯ ಸಮಸ್ಯೆಗಳನ್ನು ಪರಿಹರಿಸಲಿಕ್ಕೆ ಪ್ರಯತ್ನಪಡುತ್ತೇವೆ. ಕಂದಾಯ ಇಲಾಖೆಯ ಅಧಿಕಾರಿಗಳು ಅನಗತ್ಯವಾಗಿ ಗ್ರಾಮ ಒನ್ ಫ್ರಾಂಚೈಸಿಗಳ ಅರ್ಜಿಯನ್ನು ತಿರಸ್ಕರಿಸದಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕಛೇರಿಯ ಶಿರಸ್ತೆದಾರರಾದ ಲಕ್ಷ್ಮಿ, ಸಮಾಲೋಚಕರಾದ ಶ್ವೇತರಾಣಿ ಇದ್ದರು.