ಗ್ರಾಮ ಆರೋಗ್ಯ ಪ್ರಚಾರಕ್ಕಾಗಿ ರೋಜ್‍ಗಾರ್ ವಾಹಿನಿ.


ಸಂಜೆವಾಣಿ ವಾರ್ತೆ
ಹೊಸಪೇಟೆ ಮೇ.31: ಜಿಲ್ಲಾ ಪಂಚಾಯಿತಿಯ ಸಹಯೋಗದೊಂದಿಗೆ ಆಯೋಜಿಸಲಾಗುವ ಗ್ರಾಮ ಆರೋಗ್ಯ ಅಭಿಯಾನ ಪ್ರಚಾರಕ್ಕಾಗಿ ಸಂಚರಿಸಲಿರುವ ರೋಜ್‍ಗಾರ್ ವಾಹಿನಿಗೆ ಮಂಗಳವಾರ ಚಾಲನೆ ನೀಡಲಾಯಿತು.
ನರೇಗಾ ಕಾಮಗಾರಿಯಲ್ಲಿ ಪಾಲ್ಗೊಳ್ಳುವ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ಅಭಿಯಾನದ ಪ್ರಚಾರಕ್ಕಾಗಿ ರೋಜ್‍ಗಾರ್ ವಾಹಿನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಸಂಚರಿಸಿ ಕರಪತ್ರಗಳನ್ನು ಹಂಚಿ, ಧ್ವನಿವರ್ಧಕಗಳ ಮೂಲಕ ಪ್ರಚಾರ ನಡೆಸಲಿದೆ. ಮಲಪನಗುಡಿ ಗ್ರಾಮ ಪಂಚಾಯತಿ ಅಧ್ಯಕ್ಷ ರಘುನಾಯ್ಕ ಹಸಿರು ನಿಶಾನೆ ತೋರುವ ಮೂಲಕ ರೋಜ್‍ಗಾರ್ ವಾಹಿನಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಐಇಸಿ ಸಂಯೋಜಕ ನಾಗರಾಜ ಸೇರಿದಂತೆ ಮಲಪನಗುಡಿ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.