ಗ್ರಾಮ ಆರೋಗ್ಯ ತಪಾಸಣೆ ಶಿಬಿರ

ಬೀದರ್: ಜೂ.10: ತಾಲೂಕಿನ ಅಷ್ಟೂರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತದ್ಲಾಪುರ್ ಗ್ರಾಮಸ್ಥರ ಕೂಲಿ ಕಾರ್ಮಿಕರಿಗೆ ವಾಡ್ಕೇರಿ ಕೆರೆ ಹುಳೆತ್ತುವ ಕಾಮಗಾರಿ ಸ್ಥಳದಲ್ಲಿ ಗ್ರಾಮ ಆರೋಗ್ಯ ಅಭಿಯಾನದಡಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಜರುಗಿತು.

ಅಷ್ಟೂರ ಗಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ವಿಜಯ ಕುಮಾರ್ ಪಾಟೀಲ್ ಮಾತನಾಡಿ
ಎಲ್ಲಾ ಕೂಲಿಕಾರರು ಮತ್ತು ಸಾರ್ವಜನಿಕರು ಗ್ರಾಮ ಆರೋಗ್ಯ ಅಭಿಯಾನದ ಮೂಲಕ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯದ ಕಡೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ಈ ವೇಳೆ ಅಧ್ಯಕ್ಷರಾದ ರೇಣುಕಾ ರಾಹುಲ್, ಉಪಾಧ್ಯಕ್ಷರಾದ ಪ್ರಮೀಳಾ ಮೋಹನ, ಗ್ರಾಮದ ಮುಖಂಡರಾದ ಕಿರಣ್ ರೆಡ್ಡಿ ಸಿಹೆ??? ಸುಜಾತ ಕಾಯಕ ಮಿತ್ರ ಗೀತಾ ಸಿಬ್ಬಂದಿಗಳಾದ ಮಹೇಶ್, ತುಕ್ಕಮ್ಮ, ಬೀದರ ತಾಲ್ಲೂಕ ಪಂಚಾಯತ ಐಇಸಿ ಸಂಯೋಜಕರಾದ ಸತ್ಯಜೀತ್ ನೀಡೋದಿಕರ್, ಕಾಯಕ ಮಿತ್ರ ಹಾಗೂ ನರೇಗಾ ಕೂಲಿ ಕಾರ್ಮಿಕರೂ ಉಪಸ್ಥಿತರಿದ್ದರು.