ಸೇಡಂ,ಜೂ,14: ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಊಡಗಿ ಗ್ರಾಮದಲ್ಲಿ ಉದ್ಯೋಗ ಖಾತರಿ ಯೋಜನೆಯ ಕೂಲಿಕಾರ್ಮಿಕರಿಗೆ ಆರೋಗ್ಯ ತಪಾಸಣೆಯ ಮಾಡಲು ಮತ್ತು ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಗ್ರಾಮ ಆರೋಗ್ಯ ಅಮೃತ ಶಿಬಿರಕ್ಕೆ ಗ್ರಾಮ ಪಂಚಾಯತ ಅಧ್ಯಕ್ಷರಾದ ಹಣಮಂತ ಬೆನಕನಹಳ್ಳಿ ರವರು ಚಾಲನೆ ನೀಡಿದರು. ಡಾ. ಅಶ್ವಿನಿ ರವರು ಮಾತನಾಡಿ ಕುಡಿಯುವ ನೀರು, ಆಹಾರದ ಪದ್ಧತಿ ಹಾಗೂ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ತಿಳಿಸಿದರು. ಐ.ಇ.ಸಿ ಸಂಯೋಜಕರಾದ ಶ್ರೀ ಸಂತೋಷ್ ಪಾಟೀಲ್ ರವರು ಹೊಸದಾಗಿ ಪ್ರಾರಂಭಿಸುವ ಗ್ರಾಮ ಶಿಶು ಪಾಲನ ಕೇಂದ್ರ ಮಹತ್ವ ಕುರಿತು ತಿಳಿಸಿದರು. ಗ್ರಾಮ ಪಂಚಾಯತ ಗ್ರಾಮ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಅಶ್ವಿನಿ,ಸದಸ್ಯರಾದ ಶೇಕ್ ಹುಸೇನ, ಕಾರ್ಯದರ್ಶಿ ಶ್ರೀ ಬಸವರಾಜ, ಬಿಲ್ ಕಲೆಕ್ಟರ್ ಶ್ರೀ ನಂದಕುಮಾರ್, ಕಂಪ್ಯೂಟರ್ ಆಪರೇಟರ್, ಮೌನೇಶ ಸಂಯೋಜಕರಾದ ಶರಣು ಕಟ್ಟಿಮನಿ, ಮಾರುತಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಮುಖಂಡರಾದ ಮಹಾದೇವ ಶ್ರೀ ಗುಡುಬಾಯಿ ಹಾಗೂ ಕಾಯಕ ಬಂದುಗಳು ಇದ್ದರು