ಗ್ರಾಮ ಅಭಿವೃದ್ಧಿಗೆ ಶ್ರಮಿಸಿ-ಸಚಿವ ಜೋಶಿ

ಶಿಗ್ಗಾವಿ,ಜ4 : ಶಿಗ್ಗಾಂವ-ಸವಣೂರ ವಿಧಾನಸಭಾ ಕ್ಷೇತ್ರದ ಜನತೆ ಪ್ರಜ್ಞಾವಂತಿಕೆಯ ಜನತೆ ಅವರು ಯಾರಿಂದ ಅಭಿವೃದ್ದಿ ಸಾದ್ಯ ಎನ್ನುವದನ್ನು ಮನಗಂಡಿದ್ದಾರೆ. ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಪಕ್ಷವನ್ನು ಎತ್ತಿ ಹಿಡಿದಿದ್ದಾರೆ. ಗ್ರಾಪಂ ಚುನಾವಣೆಯಲ್ಲಿ ಕೂಡಾ ಬಿಜೆಪಿ ಬೆಂಬಲಿತ ಸದಸ್ಯರಿಗೆ ಮತ ನೀಡಿದ್ದಾರೆ. ಮೊದಲು ಅವರಿಗೆ ಅಭಿನಂದನೆ ಸಲ್ಲಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಹೇಳಿದರು.
ಪಟ್ಟಣದ ಸವಣೂರ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಶಿಗ್ಗಾವಿ ಸವಣೂರ ತಾಲೂಕಿನ ನೂತನ ಗ್ರಾಮ ಪಂಚಾಯತ ಸದಸ್ಯರಿಗೆ ಸನ್ಮಾನಿಸಿ ಮಾತನಾಡಿದ ಅವರು, ತಾಲೂಕಿನ ಜನತೆಯ ಪ್ರೀತಿ ಗಳಿಸಿ ಆಯ್ಕೆಯಾಗಿದ್ದೀರಿ. ಅದೇ ರೀತಿ ಉತ್ತಮ ಆಡಳಿತ ನೀಡುವಲ್ಲಿಯೂ ಮುಖ್ಯ ಪಾತ್ರ ವಹಿಸಿ ಗ್ರಾಮಗಳ ಅಭಿವೃದ್ದಿಯಲ್ಲಿ ಮುಂಚೂಣಿಯಲ್ಲಿರಿ ಎಂದು ನೂತನ ಗ್ರಾಮ ಪಂಚಾಯತ ಸದಸ್ಯರಿಗೆ ಸಲಹೆ ನೀಡಿದರು.
ಶಿಗ್ಗಾವಿ ಸವಣೂರ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಆಡಳಿತಾತ್ಮಕ ಕೆಲಸ ನಿರ್ವಹಿಸುವ ಪಂಚಾಯತಿ ಎಂಬ ಸ್ಪರ್ದೆ ಇಟ್ಟು ಅದರಲ್ಲಿ ಉತ್ತಮ ಪಂಚಾಯತಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರ ಒಪ್ಪಿಗೆ ಮೇರೆಗೆ ಪ್ರತಿ ವರ್ಷ ಪ್ರಥಮವಾಗಿ ಅತ್ಯುತ್ತಮ ಪಂಚಾಯತಿಗೆ 20 ಲಕ್ಷ, ದ್ವಿತೀಯವಾಗಿ 10 ಲಕ್ಷ ಮತ್ತು ತೃತೀಯವಾಗಿ 5 ಲಕ್ಷಗಳ ವಿಶೇಷ ಅನುಧಾನದ ಪ್ಯಾಕೇಜ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ವಿ. ಪ ಸದಸ್ಯ ಪ್ರದೀಪ ಶೆಟ್ಟರ, ಮೋಹನ ಲಿಂಬಿಕಾಯಿ, ಬಿಜೆಪಿ ತಾಲೂಕಾಧ್ಯಕ್ಷರಾದ ಶಿವಾನಂದ ಮ್ಯಾಗೇರಿ, ಗಂಗಾಧರ ಬಾಣದ, ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ದೇವಣ್ಣಾ ಚಾಕಲಬ್ಬಿ, ರಾಜು ಕುನ್ನೂರ, ರೇಣುಕನಗೌಡ ಪಾಟೀಲ, ಶಿವರಾಜ ರಾಯಣ್ಣವರ, ಬಸವರಾಜ ನಾರಾಯಣಪೂರ, ನರಹರಿ ಕಟ್ಟಿ, ಪ್ರತೀಕ ಕೊಳೇಕರ, ಶರೀಫ ನಧಾಪ ಸೇರಿದಂತೆ ಶಿಗ್ಗಾವಿ ಸವಣೂರ ತಾಲೂಕಿನ ನೂತನ ಗ್ರಾಮ ಪಂಚಾಯತ ಸದಸ್ಯರು ಉಪಸ್ಥಿತರಿದ್ದರು.