ಗ್ರಾಮೀಣ ಸ್ವ ಸಹಾಯ ಸಂಘಗಳ ಆರ್ಥಿಕ ಅಭಿವೃದ್ಧಿಗೆ ಸಹಕಾರಿ- ಇಓ ಅಣ್ಣಾರವ್

ಸಂಜೀವಿನಿ ಮಾಸಿಕ ಸಂತೆಗೆ ಇಓ ಚಾಲನೆ
ರಾಯಚೂರು, ಜು.೧೯- ಸ್ವ ಸಹಾಯ ಗುಂಪಿನ ಮಹಿಳಾ ಸದಸ್ಯರು ತಯಾರಿಸುವ ಉತ್ಪನ್ನಗಳನ್ನು ಮಾರಾಟ ಮಾಡಲು ಸಂಜೀವಿನಿ ಮಾಸಿಕ ಸಂತೆಯು ಉತ್ತಮ ವೇದಿಕೆಯಾಗಿದೆ ಎಂದು ಮಾನವಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅಣ್ಣಾರಾವ್ ಅವರು ಹೇಳಿದರು.
ಮಾನವಿ ತಾಲೂಕಿನ ನೀರಮಾನವಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೌಶಲಾಭಿವೃದ್ಧಿ ಉದ್ಯಮ ಶೀಲತೆ ಮತ್ತು ಜೀವನೋಪಾಯ, ಜಿಪಂ ಹಾಗೂ ತಾಪಂ ಮಾನವಿ ಸಹಯೋಗದಲ್ಲಿ ಆಯೋಜಿಸಿದ್ದ ಸಂಜೀವಿನಿ ಮಾಸಿಕ ಸಂತೆ ಮಾರಾಟ ಮತ್ತು ಪ್ರದರ್ಶನವನ್ನು ಅವರು ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಜೀವಿನಿ ಮಾಸಿಕ ಸಂತೆಯ ಪ್ರದರ್ಶನ ಮತ್ತು ಮಾರಾಟದಿಂದ ಲಾಭದಾಯಕ ಆದಾಯವಿದೆ. ಗ್ರಾಮೀಣ ಸ್ವ ಸಹಾಯ ಸಂಘಗಳ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಸಂಜೀವಿನಿ ಎನ್ ಆರ್ ಎಲ್ ಎಂ ಯೋಜನೆಯಡಿ ದೊರೆಯುವ ಸರ್ಕಾರಿ ಸೌಲಭ್ಯಗಳನ್ನು ಸ್ವ ಸಹಾಯ ಸಂಘದ ಮಹಿಳೆಯರು ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಉತ್ಪಾದಿಸಿದ ಉತ್ಪನ್ನಗಳಿಗೆ ಸರಿಯಾದ ಉತ್ತಮವಾದ ಬ್ರಾಂಡಿಂಗ್ ,ಲೇಬಲಿಂಗ್ ,ಪ್ಯಾಕಿಂಗ್ ಮಾಡುವುದರ ಜೊತೆಗೆ ಅಮೆಜಾನ್ ಫ್ಲಿಪ್ ಕಾರ್ಟ್ ಗಳ ಮೂಲಕ ಮಾರ್ಕೆಟ್ ಲಿಂಕ್ ಕಲ್ಪಿಸಲು ಕ್ರಮವಹಿಸಲು ಹೇಳಿದರು.
ಗ್ರಾಮೀಣ ಮಹಿಳೆಯರ ಜೀವನೋಪಾಯಕ್ಕಾಗಿ ಸಂವರ್ಧನ ಸಂಸ್ಥೆಯ ಸಂಜೀವಿನಿ ಗ್ರಾಮ ಪಂಚಾಯತ್? ಮಟ್ಟದ ಒಕ್ಕೂಟಗಳ ಸ್ವ-ಸಹಾಯ ಸಂಘದಿಂದ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಮಾಸಿಕ ಸಂತೆ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದು ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ತುಂಬಾ ಅನುಕೂಲವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಡಿಓ ಶಿವು ಕುಮಾರ್, ಡಿಎಂ ಶ್ರೀಕಾಂತ್ ಬನ್ನಿಗೋಳ,ಟಿಪಿಎಂ ಶಿವರಾಜ, ಸಿಎಸ್ ಸೂರತ್ ಪ್ರಸಾದ್ ಗಟ್ಟು ಡಿಇಒ ಶರಣು, ಅಮೃತ ಸಂಜೀವಿನಿ ಗ್ರಾಮ ಪಂಚಾಯತ್ ಮಹಿಳಾ ಒಕ್ಕೂಟದ ಅಧ್ಯಕ್ಷ ಕಾರ್ಯದರ್ಶಿ ಖಜಾಂಚಿ ಹಾಗೂ ಎಂಬಿಕೆ ಹಾಜರಿದ್ದು, ಸೇರಿದಂತೆ ಸ್ವ ಸಹಾಯ ಗುಂಪಿನ ಮಹಿಳಾ ಸದಸ್ಯರು ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶನ ಮಾಡಲಾಯಿತು.