ಗ್ರಾಮೀಣ ಸಾಹಿತಿ,ಕಲಾವಿದರನ್ನು ಗುರುತಿಸುತ್ತಿರುವುದು ಶ್ಲಾಘನೀಯ

ಬೀದರ,ಜೂ 12: ಕನ್ನಡ ಸಾಹಿತ್ಯ ಪರಿಷತ್ತು ನಗರ ಪ್ರದೇಶಕ್ಕೆ ಸೀಮಿತವಾಗದೆ ಗ್ರಾಮೀಣ ಪ್ರದೇಶದಲ್ಲ್ಲಿರುವ ಪ್ರತಿಭಾವಂತಸಾಹಿತಿ,ಕಲಾವಿದರನ್ನು ಗುರುತಿಸಿ ನಾಡಿನ ಜನರಿಗೆ ಪರಿಚಯಿಸುತ್ತಿರುವುದು ಅಭಿನಂದನಾರ್ಹವಾಗಿದೆ.ಮನೆಯಂಗಳದಲ್ಲಿ ಮಾತು ಕಾರ್ಯಕ್ರಮದ ಜೊತೆಗೆ
ವಲಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುವುದರಿಂದ
ಕನ್ನಡ ಭಾಷೆ ಮತ್ತು ನಾಡು-ನುಡಿಗೆ ಹೆಚ್ಚಿನ ಗೌರವ
ನೀಡಿದಂತಾಗುತ್ತದೆ. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು
ಬಗದಲ್ ಗ್ರಾಮದ ನಿವೃತ್ತ ಶಿಕ್ಷಕ ಬಸವಣಪ್ಪ ಐನೂಲೆ ಅಭಿಪ್ರಾಯಪಟ್ಟರು.
ಬಗದಲ್ ಗ್ರಾಮದ ವೈಜಿನಾಥ ಸಜ್ಜನಶೆಟ್ಟಿ ಅವರಮನೆಯಲ್ಲಿ ಜರುಗಿದ 66ನೇಯ ಮನೆಯಂಗಳದಲ್ಲಿ ಮಾತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾದರು.ನವರಸ ಕಲಾಲೋಕದ ಅಧ್ಯಕ್ಷ ವೈಜಿನಾಥ ಸಜ್ಜನಶೆಟ್ಟಿ ಮಾತನಾಡಿ,ಬದುಕು ನಾವು ಅಂದುಕೊಂಡಂತೆಇರದೇ ಸುಖ-ದುಃಖಗಳ ಸಮ್ಮಿಲನವಾಗಿದ್ದು, ಬಡತನ ಮೂಲದಕಷ್ಟ ಜೀವನ ಪಾಠ ಕಲಿಸುತ್ತದೆ.
ಬಡತನ ಬದುಕಿನ ದೌರ್ಭಾಗ್ಯವಲ್ಲ, ಸಾಧನೆ ಮಾಡಲುಅದೊಂದು ಸದಾವಕಾಶ, ಅವಕಾಶಗಳಿಲ್ಲವೆಂದು ಕೈಕಟ್ಟಿ ಕೂಡದೆನಾವೇ ಅವಕಾಶಗಳನ್ನು ಸೃಷ್ಟಿಸಿಕೊಂಡುಮುಂದುವರೆಯಬೇಕೆಂದು ತಮ್ಮ ಬದುಕಿನ ಸಂಗತಿಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಕಸಾಪ ಅಧ್ಯಕ್ಷ
ಎಂ. ಎಸ್. ಮನೋಹರ ವಹಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ
ಚನ್ನಶೆಟ್ಟಿಯವರು ಆಶಯ ನುಡಿ ನುಡಿದರು. ಡಾ. ಸಂಗಪ್ಪ ತವಡಿ,
ಬಸವರಾಜ ಹೂಗಾರ ಹಾಗೂ ಡಾ. ಬಸವರಾಜ ಬಲ್ಲೂರ ಅವರುಗಳು ಸಂವಾದ ನಡೆಸಿಕೊಟ್ಟರು.ತಾಲ್ಲ್ಲೂಕು ಕಸಾಪ ಉಪಾಧ್ಯಕ್ಷ ರಾಘವೇಂದ್ರ ಮುತ್ತಂಗಿ ಸ್ವಾಗತಿಸಿದರು.ತಾಲ್ಲೂಕು ಗೌರವ ಕಾರ್ಯದರ್ಶಿ ಜಗನ್ನಾಥ
ಕಮಲಾಪೂರೆ ವಮದಿಸಿದರು. ಶ್ರೀ ರೇಣಸಿದ್ದೆಶ್ವರ ಸಾಂಸ್ಕøತಿಕ ಸಂಘದ
ಅಧ್ಯಕ್ಷ ಶಾಂತಕುಮಾರ ಸ್ವಾಮಿ, ಶಿವಸ್ವಾಮಿ ಚಿನಕೇರಿ, ವೇದಿಕೆಯ ಮೇಲೆ
ಉಪಸ್ಥಿತರಿದ್ದರು.ಗ್ರಾಮದ ಗಣ್ಯರಾದ ಬಸವರಾಜ ಹಮ್ಮಾ, ವೀರಶೆಟ್ಟಿ ದೇಸಾಯಿ, ಪ್ರಭುರಾವಹಲಬುರ್ಗಿ, ಗುರುನಾಥ ರಾಜಗೀರಾ, ವೈಜಿನಾಥ ಬಂಪಳ್ಳಿ, ಕಲ್ಯಾಣರಾವನೇಳಗೆ, ಜಿಲ್ಲಾ ಕಸಾಪ ಕಾರ್ಯದರ್ಶಿ ಶಿವಕುಮಾರ ಕಟ್ಟೆ, ಟಿ.ಎಂ. ಮಚ್ಛೆ,ಬಸವರಾಜ, ಡಾ. ಮಲ್ಲಿಕಾರ್ಜುನ ನಿಂಗದಳ್ಳಿ ಇನ್ನಿತರರು ಉಪಸ್ಥಿತರಿದ್ದರು.