ಗ್ರಾಮೀಣ ಸಹಕಾರದಿಂದ ಕೊರೊನಾ ಮುಕ್ತ ಗ್ರಾಮಗಳ ಸಂಕಲ್ಪ ಕೈಗೊಳ್ಳಲು ಜಿ.ಪಂ ಸಿಇಓ ಗೋವಿಂದ ರೆಡ್ಡಿ ಕರೆ

ಇಂಡಿ, ಮೇ.30-ಹಳ್ಳಿಗಳಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಪಿ.ಡಿ.ಓ, ಕಾರ್ಯದರ್ಶಿ ಕೋವಿಡ್ -19 ಕಾರ್ಯಪಡೆಯ ಎಲ್ಲರೂ ಸೇರಿ ಗ್ರಾಮೀಣ ಜನರ ಸಹಕಾರ ಪಡೆದು ಕೊರೊನಾ ಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಸಂಕಲ್ಪ ಮಾಡುವಂತೆ ಜಿ.ಪಂ ಸಿಇಓ ಗೋವಿಂದ ರೆಡ್ಡಿ ಕರೆ ನೀಡಿದರು.
ಅವರು ಇಂಡಿ ತಾಲೂಕಿನ ಚವಡಿಹಾಳ ಮತ್ತು ಬಬಲಾದ ಗ್ರಾಮಗಳಲ್ಲಿ ಕೊರೊನಾ ಕುರಿತು ತೆಗೆದುಕೊಂಡ ಕ್ರಮಗಳು ಮತ್ತು ನರೇಗಾ ಕಾಮಗಾರಿ ವೀಕ್ಷಿಸಿ ಮಾತನಾಡಿನರೇಗಾ ಯೊಜನೆ ಅಡಿ ಶೇ 50 ರಷ್ಟು ಕೂಲಿ ಕಾರ್ಮಿಕರಿಗೆ ಬೆಳಗ್ಗೆ ಮತ್ತು ಶೇ 50 ರಷ್ಟು ಕಾರ್ಮಿಕರಿಗೆ ಮಧ್ಯಾಹ್ನ ಉದ್ಯೋಗ ನೀಡುವಂತೆ ತಾ.ಪಂ ಇಓ ಸುನೀಲ ಮದ್ದಿನ ಅವರಿಗೆ ತಿಳಿಸಿದರು.
ನರೇಗಾ ಯೋಜನೆ ಅಡಿಯಲ್ಲಿ ನಡೆದ ಕೆಲಸಗಳಾದ ಗೋಡೌನ, ಕೆರೆ ಕಾರ್ಯ, ಸ್ಕೂಲ ಕಂಪೌಂಡ, ಅಡುಗೆ ಕೋಣೆ, ಮಳೆ ನೀರು ಕೊಯ್ಲಿ ಸಂಗ್ರಹಣೆ, ಶಾಲೆಯಲ್ಲಿ ಹೂದೋಟ ಮುಂತಾದ ಕಾಮಗಾರಿ ವೀಕ್ಷಿಸಿ ಕೂಲಿಕಾರ್ಮಿಕರ ಜೊತೆ ಮಾತನಾಡಿ ಸಾಮಾಜಿಕ ಅಂತರ ಕಾಯ್ದುಕೊಂಡು ನೂರು ದಿನಗಳ ಕೆಲಸ ಮಾಡಬೇಕೆಂದು ತಿಳಿಸಿದರು.
ಆಶಾ ಕಾರ್ಯಕರ್ತೆಯರು ಮನೆ ಮನೆ ತೆರಳಿ ಸರ್ವೇ ಕಾರ್ಯ ಮಾಡಿರುವದನ್ನು ಪ್ರಶಂಸಿಸಿ ಅವರಿಗೆ ಅಹಾರ ಸಾಮಗ್ರಿ ವಿತರಿಸಿದರು.
ತಾ.ಪಂ ಇಓ ಸುನೀಲ ಮದ್ದೀನ, ಸಹಾಯಕ ನಿರ್ದೇಶಕ ಸಂಜಯ ಖಡೆಕರ, ಪಿಡಿಓ ಸಿ.ಜಿ.ಪಾರೆ, ಅಧ್ಯಕ್ಷೆ ದಿಲ್‍ಶ್ಯಾದಬಿ ಚೌಧರಿ, ಉಪಾಧ್ಯಕ್ಷ ಕಾಮಣ್ಣ ದಶವಂತ ಮತ್ತಿತರಿದ್ದರು.
ಮೆಚ್ಚುಗೆಃ ಗೋವಿಂದರೆಡ್ಡಿ ಗ್ರಾ.ಪಂ ಕಟ್ಟಡ ಮತ್ತು ಅದರಲ್ಲಿ ಅಳವಡಿಸಿರುವ ಕಂಪ್ಯೂಟರ್ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತ ಪಡಿಸಿ ಈ ರೀತಿ ವ್ಯವಸ್ಥೆ ಜಿ.ಪಂ ವಿಜಯಪೂರದಲ್ಲಿ ಇಲ್ಲ ಎಂದು ಪ್ರಶಂಸಿದರು. ಚವಡಿಹಾಳ ಗ್ರಾ.ಪಂ ಎರಡು ಬಾರಿ ಗಾಂಧಿ ಗ್ರಾಮ ಪ್ರಶಸ್ತಿ ಪಡೆದದ್ದು ನಿಜಯಾಗಿಯೂ ಅವರು ಭಾಜನರಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಬಲಾದ ಗ್ರಾ.ಪಂಃ ಜಿ.ಪಂ ಸಿಇಓ ಗೋವಿಂದ ರೆಡ್ಡಿ ಬಬಲಾದ ಗ್ರಾ.ಪಂ ದಲ್ಲಿ ಸರಕಾರಿ ಮಾದ್ಯಮಿಕ ಶಾಲೆ ಕಂಪೌಂಡ, ಬಾಸ್ಕೆಟಬಾಲ್ ಅಂಗಣ, ಗ್ರಾ.ಪಂ ವತಿಯಿಂದ ರಾಜೀವಗಾಂಧಿ ಸೇವಾ ಕೇಂದ್ರ, ಗ್ರಾ.ಪಂ ಕಟ್ಟಡ, ಎನ್‍ಆರ್‍ಎಲ್ ಎಂ ಕಟ್ಟಡ ವೀಕ್ಷಿಸಿದರು. ಪಿಡಿಓ ಎಸ್.ಡಿ.ಬಿರಾದಾರ, ಸದಸ್ಯ ಯಲಗೊಡ ಪೂಜಾರಿ, ಮಲ್ಲಿಕಾರ್ಜುನ ದಶವಂತ, ಗಿರಿಮಲ್ಲ ಭ್ಯೂಯ್ಯಾರ ಮತ್ತಿತರಿದ್ದರು.