ಗ್ರಾಮೀಣ ಸಮಾಜದಲ್ಲಿಯೂ ಜಾನಪದ ನಿರಾಸಕ್ತಿ : ಡಾ. ಮೇತ್ರಿ

ವಿಜಯಪುರ ;ಮೇ.29: ಜಾನಪದ ಸಾಹಿತ್ಯ ಇತ್ತೀಚಿನ ದಿನಗಳಿಂದ ಗ್ರಾಮೀಣ ಸಮಾಜದಲ್ಲಿ ನಿರಾಸಕ್ತಿ ಕಾಣುತ್ತಿದ್ದೇವೆ. ಜಾನಪದ ಸಂಸ್ಕøತಿಯು ಜೀವನದ ಮೌಲ್ಯ ತೋರಿಸುತ್ತದೆ ಎಂದು ಡಾ,ಸಂಗಮೇಶ ಮೇತ್ರಿ ಅಭಿಪ್ರಾಯ ವ್ಯಕ್ತಪಡಿಸಿದರು.
ವಿರಕ್ತಮಠ ಇಂಗಳೆಶ್ವರ ಹಾಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಸಂಯುಕ್ತ ಆಶ್ರಯದಲ್ಲಿ ಜಾನಪದ ಸೊಗಡು ಎರಡನೇಯ ಗೋಷ್ಠಿಯನ್ನು ಉಪನ್ಯಾಸ ನೀಡಿದರು.
ರೈತರ ಜೀವನ ಆಧುನಿಕತೆಯ ಕಡೆಗೆ ಸಾಗಿಸುತ್ತಿದ್ದರಿಂದ ಜಾನಪದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಗೆ ದಕ್ಕೆ ಉಂಟಾಗುತ್ತದೆ. ಕೃಷಿಕರು ತಮ್ಮ ಜಾನಪದ ಸಾಹಿತ್ಯ ಕಾಪಾಡುವ ಅಗತ್ಯವಿದೆ. ಜಾನಪದ ವಿದ್ವಾಂಸರು ಪಠ್ಯ ಪುಸ್ತಕದಲ್ಲಿ ಜನಪದ ಸಾಹಿತ್ಯಕ್ಕೆ ಪ್ರಾಧ್ಯಾನತೆ ನೀಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹರಿಯ ಸಾಹಿತಿ ಶಂಕರ ಬೈಚಬಾಳ ಮಾತನಾಡಿ ಮಕ್ಕಳಿಗೆ ಜಾನಪದ ಸಾಹಿತ್ಯ ಪರಿಚಯಿಸುವ ಕೆಲಸ ಮಾಡಬೇಕು. ಗರತಿಯ ಹಾಡು ತುಂಬ ಪರಿಣಾಮಕಾರಿಯಾಗಿದೆ. ಪ್ರತಿ ಜೀವನದ ಹಂತದಲ್ಲಿ ಜಾನಪದ ವೈವಿಧ್ಯಮಯವಾಗಿ ಹಾಸು ಹೊಕ್ಕಾಗಿದೆ. ವಿಜಯಪುರ ಜಿಲ್ಲೆ ಜಾನಪದ ಸಾಹಿತ್ಯ ಮುಂಚೂಣಿ ಯಲ್ಲಿದೆ. ಪ್ರತಿ 100 ಕಿ ಮೀ ದೂರದ ಪ್ರದೇಶಗಳಲ್ಲಿ ಜಾನಪದ ಶೈಲಿ ಬೇರೆ ಬೇರೆ ಕಾಣುತ್ತೇವೆ. ಎಂದರು
ಜಾನಪದ ಸೊಗಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜಾನಪದ ಸಾಹಿತ್ಯ ನಮ್ಮ ಪೂವ9ಜರು ಕಟ್ಟಿ ಬೆಳೆಸಿದರು. ಜಾನಪದ ವಿದ್ವಾಂಸರು ಕೃಷಿಕರಾಗಿದ್ದಾರೆ. ಜಾನಪದ ಸಾಹಿತ್ಯ ಉಳಿಸಿ ಬೆಳೆಸುವ ಅವಶ್ಯಕತೆ ಎಂದರು ಇಂಗಳೆಶ್ವರ ವಿರಕ್ತಮಠದ ಡಾ, ಸಿದ್ದಲಿಂಗ ಸ್ವಾಮಿಜಿ .ಮಸಬಿನಾಳ ಸಿದ್ದರಾಮ ಸ್ವಾಮಿಜಿ ಪಡೆಕನೂರ ಮಲ್ಲಿಕಾರ್ಜುನ ಸ್ವಾಮಿಜಿ ಚಡಚಣ ಷಡಕ್ಷರ ಸ್ವಾಮಿಜಿ . ಇಟಗಿ ಸ್ವಾಮಿಜಿ ನಿಂಗಪ್ಪ ಬೊಮ್ಮನಹಳ್ಳಿ ಸಿದಲಿಂಗಪ್ಪ ಹದಿಮೂರ ಶಿವು ಮಡಕೇಶ್ವರ ಕೊಟ್ರೇಶ ಹೆಗಡಿಹಾಳ ಯಮನಪ್ಪ ಮಿಣಜಗಿ ಜಿ ಜಿ ಚೌಕಿಮಠ ಶ್ರೀಶೈಲ ಹಾದಿಮನಿ ಬಸವರಾಜ ಮೇಟಿ ಮುಂತಾದವರು ಉಪಸ್ಥಿತರಿದ್ದರು.