ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌ರಿಂದ ಸಮ್ಮೇಳನಕ್ಕೆ ಕರೆ

ರಾಯಚೂರು,ಅ.೩೦-ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನವೆಂಬರ್ ೫ ರಂದು ಹಮ್ಮಿಕೊಳ್ಳಲಾಗಿರುವ ತಾಲೂಕು ಐದನೇಯ ಕನ್ನಡ ಸಾಹಿತ್ಯ ಸಮ್ಮೇಳನ ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಏರ್ಪಡಿಸಿರುವ ಸಮ್ಮೇಳನಕ್ಕೆ ತಾಲೂಕಿನ ಸಮಸ್ತ ಸಾಹಿತಿಗಳು, ಸಾಹಿತ್ಯ ಆಸಕ್ತರು, ಕನ್ನಡ ಮನಸುಗಳು, ಕನ್ನಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಗ್ರಾಮೀಣ ಶಾಸಕ ಹಾಗೂ ಸಮ್ಮೇಳನದ ಕಾರ್ಯಧ್ಯಕ್ಷರು ಆಗಿರುವ ಬಸನಗೌಡ ದದ್ದಲ್ ಅವರು ಕರೆ ನೀಡಿದರು. ಅವರು ಇಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ವೆಂಕಟೇಶ್ ಬೇವಿನ ಬೆಂಚಿ, ಗೌರವ ಕಾರ್ಯದರ್ಶಿ ರಾವುತರಾವ್ ಬರೂರ, ಕೋಶ್ಯಾಧ್ಯಕ್ಷ ಬಿ. ವಿಜಯರಾಜೇಂದ್ರ, ಸಂಘಟನಾ ಕಾರ್ಯದರ್ಶಿ ರೇಖಾ ಬಡಿಗೇರ್, ಪದಾಧಿಕಾರಿಗಳಾದ ದೇವೇಂದ್ರ ಕಟ್ಟಿಮನಿ, ಯಲ್ಲಪ್ಪ ಮರ್ಚೆಡ, ಶ್ರೀನಿವಾಸ್ ರಾಯಚೂರಕರ್ ಮೋಯಿನ್ ಪಾಷ, ತಿಮ್ಮಪ್ಪ, ತಿಮ್ಮಾರೆಡ್ಡಿ, ನರಸಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.