
ರಾಯಚೂರು, ಏ.೦೭-ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳ ಕಾರ್ಯಕರ್ತರು ದೇವರ ಜಾತ್ರೆ ಮತ್ತು ಉತ್ಸವಗಳಲ್ಲಿ, ಬಾಳಣ್ಣಿನ ಮೇಲೆ ತಮ್ಮ ನಾಯಕರ ಮತ್ತು ಪಕ್ಷದ ಹೆಸರು ಬರೆದು, ಮುಂದಿನ ಚುನಾವಣೆಯಲ್ಲಿ ಗೆದ್ದ ಗೆಲ್ಲುತ್ತಾರೆ ಎಂಬ ಅಭಿಮಾನದಿಂದ, ರಥೋತ್ಸವಕ್ಕೆ ಬಾಳೆಹಣ್ಣು ಎಸೆಯುತ್ತಿರುವವರ ಸಂಖ್ಯೆ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತಾಲೂಕಿನ ಗಂಜಹಳ್ಳಿ ಗ್ರಾಮದ
ಈಶ್ವರ ಅಂಜಿನಯ್ಯ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ರಥೋತ್ಸದಲ್ಲಿ ಗ್ರಾಮದ ಯುವಕರು ವಿಶಿಷ್ಠವಾಗಿ ಹರಕೆ ಕಟ್ಟಿಕೊಂಡಿದ್ದಾರೆ. ಗ್ರಾಮದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಅಭಿಮಾನಿಗಳು ರಥಕ್ಕೆ ಬಾಳೆ ಹಣ್ಣು ಎಸೆದು ಮನೋಕಾಮನೆ ಸಿದ್ಧಿಯಾಗುವಂತೆ ಹನುಮದೇವರಲ್ಲಿ ಮೊರೆ ಇಟ್ಟಿದ್ದಾರೆ. ರಥದ ಕಳಶಕ್ಕೆ ಈ ರೀತಿ ಹಣ್ಣು ಎಸೆದರೆ ಇಷ್ಟಾರ್ಥಗಳು ಸಿದ್ಧಿಯಾಗುತ್ತೆ ಅನ್ನೋ ನಂಬಿಕೆ ಅಭಿಮಾನಿಗಳಿದ್ದು, ಕಾಂಗ್ರೆಸ್ ನಲ್ಲಿ ಶಾಸಕ ಬಸನಗೌಡ ದದ್ದಲ್, ಮತ್ತು ಬಿಜೆಪಿ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಹೆಸರು ಬರೆದು ಮೇ.೧೦ ರಂದು ನಡೆಯುವ ಚುನಾವಣೆಯಲ್ಲಿ ನೆಚ್ಚಿನ ನಾಯಕರು ಗೆಲ್ಲುವು ಸಾಧಿಸುತ್ತಾರೆ ಎಂಬ ನಂಬಿಕೆಯಿಂದ ಅಭಿಮಾನಿಗಳು ರಥಕ್ಕೆ ಬಾಳೆ ಹಣ್ಣು ಎಸೆದು ಅಭಿಮಾನ ಮರೆದರು. ಮುಂದಿನ ೨೦೨೩ ರ ಶಾಸಕರು ಬಸನಗೌಡ ದದ್ದಲ್ ಮತ್ತು ತಿಪ್ಪರಾಜು ಹವಾಲ್ದಾರ್ ಅಂತಾ ಬರೆದ ಬಾಳೆ ಹಣ್ಣನ್ನು ರಥದ ಮೇಲೆ ಎಸೆಯುವ ಮೂಲಕ ಗಂಜಹಳ್ಳಿ ಗ್ರಾಮದ ಯುವಕರು ಹರಿಕೆ ಕಟ್ಟಿಕೊಂಡಿದ್ದಾರೆ. ಪಕ್ಷದ ಅಭಿಮಾನಿಗಳು ಪರಸ್ಪರ ಜಿದ್ದಿಗೆ ಬಿದ್ದವರಂತೆ, ಮುಂದಿನ ಚುನಾವಣೆಯಲ್ಲಿ ನೆಚ್ಚಿನ ನಾಯಕರು ಅತಿ ಹೆಚ್ಚು ಮತಗಳನ್ನು ಪಡೆದು ಗೆದ್ದೆ ಗೆಲ್ಲುತ್ತಾರೆ ಎಂಬ ವಿಶ್ವಾಸದಿಂದ ಬಾಳೆ ಹಣ್ಣು ಎಸೆದರು. ಈ ಭಾರಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಬಸನಗೌಡ ದದ್ದಲ್ ಮತ್ತು ಬಿಜೆಪಿ ತಿಪ್ಪರಾಜು ಹವಾಲ್ದಾರ್ ನಡುವೆ ಭಾರಿ ಪೈಪೋಟಿ ನಡೆದಿದ್ದು ಕ್ಷೇತ್ರದಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.!